ಆಧುನಿಕ ಯುಗದಲ್ಲಿ ಎಲ್ಲರನ್ನು ಬೆಂಬಿಡದೆ ಕಾಡುತ್ತಿರುವ ಆರೋಗ್ಯ ಸಮಸ್ಯೆ ಬೊಜ್ಜು. ಬೊಜ್ಜು ದೇಹದ ಆಕಾರದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಜೊತೆಗೆ ಸಂಪೂರ್ಣ ಆರೋಗ್ಯ ಹಾಗೂ ಯೋಗಕ್ಷೇಮದ ಮೇಲೂ ಪರಿಣಾಮ ಬೀರುತ್ತದೆ.

ದೇಹದಲ್ಲಿ ಅತಿಯಾಗಿ ಕೊಬ್ಬು ಶೇಖರಣೆಯಾದಾಗ ಬೊಜ್ಜು ಬರುತ್ತದೆ. ಇದನ್ನು BMI ಯಿಂದ ಅಳೆಯಲಾಗುತ್ತದೆ. ಬೊಜ್ಜಿನ ಸಮಸ್ಯೆಯಿಂದ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ನಂಥ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಜೀರ್ಣಕ್ರಿಯೆಗೆ ಕರುಳಿನ ಆರೋಗ್ಯವೇ ಪ್ರಧಾನ. ಇದು ಜಠರದಲ್ಲಿ ಬ್ಯಾಕ್ಟೀರಿಯಾ, ಕಿಣ್ವಗಳು, ಸೂಕ್ಷ್ಮಜೀವಿಗಳ ಸಮತೋಲಿತ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಕರುಳು ಆರೋಗ್ಯವಾಗಿದ್ದರೆ, ಜೀರ್ಣಕ್ರಿಯೆ, ಪೋಷಕಾಂಶಗಳ ಹೀರಿಕೊಳ್ಳುವಿಕೆ, ರೋಗನಿರೋಧಕ ಶಕ್ತಿ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ಜೀರ್ಣಕ್ರಿಯೆ ಹಾಗೂ ತೂಕದ ನಡುವಿನ ಸಂಬಂಧ ಮುಖ್ಯವಾಗಿದೆ. ಕರುಳಿನ ಮೈಕ್ರೋಬಯೋಟಾದಲ್ಲಿನ ಅಸಮತೋಲನವೇ ತೂಕ ಹೆಚ್ಚಾಗಲು ಮತ್ತು ಜೀರ್ಣಕ್ರಿಯೆ ಅಸ್ವಸ್ಥತೆಗೆ ಕಾರಣವಾಗಿರುತ್ತದೆ. ಅಷ್ಟೇ ಅಲ್ಲದೆ ತೂಕ ನಿರ್ವಹಣೆಗೆ ಅಡೆತಡೆ ಉಂಟುಮಾಡುತ್ತದೆ. ಜೀರ್ಣಕ್ರಿಯೆ, ಪೋಷಕಾಂಶಗಳ ಹೀರಿಕೊಳ್ಳುವಿಕೆ, ಹಸಿವು ನಿಯಂತ್ರಿಸುವುದು, ಉರಿಯೂತ, ಚಯಾಪಚಯ ಹಾಗೂ ಹಾರ್ಮೋನ್ಗಳ ಅಸಮತೋಲನ ವಿಷಯಗಳಲ್ಲಿ ಕರುಳಿನ ಆರೋಗ್ಯ ಹೇಗಿದೆ ಎಂಬುದನ್ನು ಗುರುತಿಸಬೇಕು. ಇವುಗಳು ಪರಿಣಾಮಕಾರಿ ತೂಕ ನಿರ್ವಹಣೆಗೆ ಸಹಕಾರಿಯಾಗುತ್ತದೆ.

ಅಶಿಸ್ತಿನ ಆಹಾರ ಕ್ರಮ, ಔಷಧಿಗಳ ಅತಿಯಾದ ಬಳಕೆ ಮತ್ತು ಒತ್ತಡದಿಂದ ಕರುಳಿನಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಇದು ತೂಕ ಹೆಚ್ಚಳಕ್ಕೆ ಹಾಗೂ ಬೊಜ್ಜಿನ ಸಮಸ್ಯೆಗೆ ಕಾರಣವಾಗಬಹುದು.

ಆರೋಗ್ಯಕರ ಜೀರ್ಣಕ್ರಿಯೆಗೆ ಏನು ಮಾಡಬೇಕು?

ಹೆಚ್ಚು ಸಸ್ಯಾಹಾರ ಸೇವನೆ: ಹಣ್ಣು, ತರಕಾರಿ, ದವಸ ಹಾಗೂ ಧಾನ್ಯಗಳನ್ನು ಸೇವಿಸಿದರೆ, ಅವುಗಳಲ್ಲಿ ರೋಗನಿರೋಧಕ ಶಕ್ತಿ ಹಾಗೂ ನಾರಿನಂಶ ಸಮೃದ್ಧವಾಗಿರುತ್ತದೆ, ಇದರಿಂದ ಜೀರ್ಣಕ್ರಿಯೆ ಸುಲಭವಾಗಿರುತ್ತದೆ.

ಪ್ರಿಬಯಾಟಿಕ್ ಮತ್ತು ಪ್ರೊಬಯಾಟಿಕ್ ಆಹಾರ ಸೇವನೆ : ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಗಾಗಿ ಜೆರುಸಲೇಮ್ ಆರ್ಟಿಚೋಕ್ಸ್, ಶತಾವರಿ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಹೈಡ್ರೇಟೆಡ್ ಆಗಿರುವುದು : ಹೆಚ್ಚು ನೀರು ಕುಡಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ಮಲಬದ್ಧತೆ ತಡೆಯುವುದರ ಜತೆಗೆ ಕರುಳಿನ ಒಳಪದರದ ಆರೋಗ್ಯವನ್ನು ಕಾಪಾಡುತ್ತದೆ.

ಆಹಾರವನ್ನು ಜಗಿದು ತಿನ್ನುವುದು: ಉತ್ತಮ ಜೀರ್ಣಕ್ರಿಯೆಗೆ ಪೋಷಕಾಂಶಗಳ ಹೀರಿಕೊಳ್ಳುವಿಕೆ ಹಾಗೂ ಜೀರ್ಣಕ್ರಿಯೆಯ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಆಹಾರವನ್ನು ಸಂಪೂರ್ಣವಾಗಿ ಜಗಿದು ತಿನ್ನಬೇಕು.

ಉತ್ತಮ ನಿದ್ರೆ: ಹಾರ್ಮೋನ್ ಸಮತೋಲನ ಮತ್ತು ಕರುಳಿನ ಆರೋಗ್ಯಕ್ಕೆ ಉತ್ತಮ ನಿದ್ರೆ ಅಗತ್ಯ. ಹೀಗಾಗಿ ಪ್ರತಿದಿನ ರಾತ್ರಿ ಗುಣಮಟ್ಟದ ನಿದ್ರೆಯನ್ನು ಮಾಡಬೇಕು.

ವ್ಯಾಯಾಮ : ದೈಹಿಕ ಚಟುವಟಿಕೆಯು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹೀಗಾಗಿ ನಿಮ್ಮ ದಿನಚರಿಯಲ್ಲಿ ವ್ಯಾಯಾಮವನ್ನು ಸೇರಿಸಿಕೊಳ್ಳಬೇಕು.

ಉತ್ತಮ ಅಡುಗೆ ಎಣ್ಣೆ ಬಳಸಿ: ಉತ್ತಮ ಆರೋಗ್ಯಕ್ಕಾಗಿ ವರ್ಜಿನ್ ಆಲಿವ್ ಎಣ್ಣೆ ಹಾಗೂ ತೆಂಗಿನ ಎಣ್ಣೆಯನ್ನು ಬಳಸಿ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಉರಿಯೂತ ಕಡಿಮೆಯಾಗುತ್ತದೆ.

ಸರಿಯಾದ ಸಮಯಕ್ಕೆ ತಿನ್ನಿ: ಜೀರ್ಣಕ್ರಿಯೆ ಉತ್ತಮವಾಗಿರಲು ಪ್ರತಿ ಊಟದ ನಡುವೆ 3 ರಿಂದ 4 ಗಂಟೆಗಳ ಅಂತರವಿರಲಿ. ಇದರಿಂದ ಹೊಟ್ಟೆ ಉಬ್ಬರಿಕೆ ಹಾಗೂ ಮಲಬದ್ಧತೆಯಂತಹ ಸಮಸ್ಯೆಗಳು ಕಂಡುಬರುವುದಿಲ್ಲ.

ಒತ್ತಡ ನಿರ್ವಹಣೆ : ಒತ್ತಡವನ್ನು ನಿರ್ವಹಿಸಲು ಧ್ಯಾನ, ಯೋಗ ಮಾಡುವುದರಿಂದ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.