ಡಾ.ಎಂ.ಡಿ.ಸೂರ್ಯಕಾಂತ

ಪುಟ್ಟ ಕಿರಣ್‌ಗೆ ಎರಡೂ ಮುಕ್ಕಾಲು ವರ್ಷ. ಈಗಷ್ಟೇ ಎರಡೆರಡು ಅಕ್ಷರದ ಮಾತು ಬರ್ತಿದೆ. ಆದರೆ, ಆಗಾಗ್ಗೆ ಕಿರಿಚುತ್ತಿರುತ್ತಾನೆ. ಅದ್ಯಾಕೆ ಹಾಗೆ ಕೂಗುತ್ತಾನೋ, ತಿಳಿಯದು ಎನ್ನುತ್ತಾರೆ ತಾಯಿ ಸುಮನಾ.

ಸಾಧನ–ಶಂಕರ ದಂಪತಿ, ಇಬ್ಬರೂ ಉದ್ಯೋಗಸ್ಥರು. ಒತ್ತಡದ ಕೆಲಸ. ಮನೆಯಲ್ಲಿ ಆಗಾಗ್ಗೆ ಸಣ್ಣ–ಪುಟ್ಟ ಜಗಳ. ಅವರಿಗೆ ಅವಳಿ ಮಕ್ಕಳು. ಅವರಿಬ್ಬರೂ ಆಗಾಗ್ಗೆ ಅಪ್ಪ–ಅಮ್ಮನಂತೆ ಕೂಗಾಡುತ್ತಿರುತ್ತಾರೆ...!

ನಾಲ್ಕು ವರ್ಷದ ರಾಜುವಿಗೆ, ಯಾವುದಾದರೂ ವಸ್ತು ಬೇಕೆಂದರೆ, ಬೇಕೇ ಬೇಕು. ಇಲ್ಲದಿದ್ದರೆ ತೀರಾ ಹಠ ಮಾಡಿ, ಕೂಗಾಡಿ, ರಂಪಾಟ ಮಾಡುತ್ತಾನೆ. ಆ ವಸ್ತು ಸಿಕ್ಕಿದ ಮೇಲೆ ಚೀರುವುದನ್ನು ನಿಲ್ಲಿಸುವುದು...

ಈ ಮೇಲಿನ ಎಲ್ಲ ಘಟನೆಗಳು ಒಂದಕ್ಕಿಂತ ಒಂದು ಭಿನ್ನ ಎನ್ನಿಸಿದರೂ, ಅವೆಲ್ಲವುಗಳಲ್ಲಿರುವ ಒಂದು ಸಾಮಾನ್ಯ ಅಂಶವೆಂದರೆ ಮಕ್ಕಳು ಕಿರುಚಾಡುವುದು, ಕೂಗಾಡುವುದು. ಇದು ಸಾಮಾನ್ಯವಾಗಿ ಮಕ್ಕಳಿರುವ ಪ್ರತಿ ಮನೆಯಲ್ಲೂ ಪೋಷಕರು ಎದುರಿಸುವ ಸಮಸ್ಯೆಗಳು.

ಮಕ್ಕಳು ಕಿರುಚುವುದು ಒಬ್ಬೊಬ್ಬ ಪೋಷಕರಿಗೆ ಒಂದೊಂದು ರೀತಿಯ ಅನುಭವ ನೀಡುತ್ತದೆ. ಕೆಲವರಿಗೆ ಕಿರಿಕಿರಿ ಎನ್ನಿಸಿದರೆ, ಇನ್ನು ಕೆಲವರಿಗೆ ‘ಮಗುವಿಗೆ ಯಾವುದೋ ನ್ಯೂನತೆ ಇರಬಹುದು‘ ಎಂದು ಶಂಕೆ ಮೂಡಿಸುತ್ತದೆ, ಗಾಬರಿಗೊಳಿಸುತ್ತದೆ. ಆದರೆ, ಅನೇಕರಿಗೆ ಇದೊಂದು ಸಮಸ್ಯೆ ಎಂದೇ ಎನ್ನಿಸುವುದಿಲ್ಲ. ಇದು ‘ಮಕ್ಕಳಾಟವಿರಬೇಕು’ ಎಂದು ನಿರ್ಲಕ್ಷ್ಯವಹಿಸುವವರಿಗೂ ಕಡಿಮೆ ಇಲ್ಲ.

‘ಕಿರುಚುವಿಕೆ’ಗೆ ಕಾರಣಗಳು ಹಲವು

ಸಾಮಾನ್ಯವಾಗಿ 1 ಮತ್ತು 2 ವಯಸ್ಸಿನ ನಡುವೆ ಮಕ್ಕಳು ಕಿರುಚುತ್ತಾರೆ, ಕೂಗುತ್ತಾರೆ. ಬೇರೆ ಯಾವುದೇ ರೀತಿಯ ಶಬ್ಧ ಹೊರಹೊಮ್ಮಿಸುತ್ತಾರೆ. ಅದು ‘ನನ್ನನ್ನು ನೋಡು’ ಎಂದು ಹೆತ್ತವರ ಗಮನವನ್ನು ಸೆಳೆಯುವ ಪ್ರಯತ್ನ.

ಇನ್ನು, ಎಳೆ ಮಕ್ಕಳು ಶಬ್ದಗಳ ಕೊರತೆಯಿಂದಾಗಿ ಮಾತನಾಡಲು ಸಾಧ್ಯವಾಗದೇ, ಸುಮ್ಮನೆ ಕಿರುಚುತ್ತಾರೆ. ಇದಕ್ಕೆ ಕಾರಣ; ಹೆರಿಗೆ ಸಮಯದಲ್ಲಿ ತೊಂದರೆಯಾಗಿ ಮಗುವಿನ ಮಿದುಳಿಗೆ ರಕ್ತ ಸಂಚಾರ ವಿಳಂಬವಾದರೆ-ಬೆಳವಣಿಗೆಯೆಯಲ್ಲಿ ಕುಂಠಿತವಾಗುವುದಿರಿಂದ ಮಗುವಿಗೆ ಶಬ್ದಗಳ ಕೊರತೆಯಾಗುತ್ತದೆ.

ಹಾಗೆಯೇ, ಮನೆಯಲ್ಲಿನ ಮಕ್ಕಳು ಅಥವಾ ವಯಸ್ಕರು ಮಾತನಾಡುವಾಗ ಕಿರುಚಾಡುತ್ತಿದ್ದರೆ, ಇತರೆ ಮಕ್ಕಳು ಅದನ್ನು ಅನುಕರಿಸಬಹುದು. ಅದನ್ನು ಮೇಲಿನ ಒಂದು ಉದಾಹರಣೆಯಲ್ಲಿ ಗುರುತಿಸಬಹುದು.

ತಮಗೆ ಇಷ್ಟವಾದುದು ದೊರಕದಿದ್ದರೆ ಅಥವಾ ಸಂತೋಷ, ತಮಾಷೆ, ಹತಾಷೆಗೊಂಡಾಗ ಕಿರುಚುತ್ತಾರೆ.
ತಮ್ಮ ದ್ವನಿಯನ್ನು ಶಕ್ತಿಯನ್ನು ಅನ್ವೇಷಿಸಲು ಮತ್ತು ಧ್ವನಿಯನ್ನು ಹೇಗೆ ಬಳಸಬೇಕೆಂಬ ಪ್ರಯತ್ನ.

ಇತರೆ ಕಾರಣಗಳು: ಮಕ್ಕಳ ಪೋಷಣೆ, ಆರೈಕೆ, ದಿನಚರಿ ಅಸಮಂಜಸವಾಗಿದ್ದರೆ, ಪೋಷಕರು ಮತ್ತು ಮಗುವಿನ ನಡುವೆ ಕಡಿಮೆ ಅಥವಾ ಯಾವುದೆ ಸಂಭಾಷಣೆ ಇಲ್ಲದಿದ್ದರೆ ಮಗು ಕಿರುಚುವ ಮೂಲಕ ತನ್ನೊಳಗಿನ ಒತ್ತಡವನ್ನು ಹೊರ ಹಾಕುತ್ತದೆ.

ಅಪ್ಪ-ಅಮ್ಮ ಒತ್ತಡದ ವೇಳಾಪಟ್ಟಿ ಜೊತೆ ಒತ್ತಡದಿಂದ ಕೆಲಸಮಾಡುತ್ತ, ತಮ್ಮನ್ನು ಗಮನಿಸದಿದ್ದಾಗ, ಮಕ್ಕಳು ತಾಳ್ಮೆ/ಸಂಯಮ ಕಳೆದುಕೊಂಡು ಕಿರುಚಾಡುತ್ತಾರೆ. ಕೋವಿಡ್ ಬಿಕ್ಕಟ್ಟಿನ ಅವಧಿಯಲ್ಲಿ ‘ವರ್ಕ್ ಫ್ರಂ ಹೋಮ್’ ಚಾಲ್ತಿಯಲ್ಲಿದ್ದಾಗ, ಹೀಗೆ ಮಕ್ಕಳು ಕಿರುಚುವುದು ಅಥವಾ ಮಾತನಾಡದೇ ಇರುವಂತಹ ಪ್ರಕರಣಗಳು, ಅಲ್ಲಲ್ಲೇ ಕೇಳಿಬಂದವು.

ಅದೇ ರೀತಿ, ಮನೆಯಲ್ಲಿದ್ದೂ, ಒಡಹುಟ್ಟಿದವರ ಜೊತೆಗೂಡಿ ಆಟವಾಡದಿದ್ದಾಗ, ಸಂತೋಷ ಹಂಚಿ ಕೊಳ್ಳದಿದ್ದಾಗ, ಪೋಷಕರು ಮಗುವಿನ ಅಭಿಪ್ರಾಯ ಆಲಿಸದಿದ್ದಾಗ, ಹಾಗೆಯೇ ಮನಸ್ಸು, ಉದ್ದೇಶ, ಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳದಿದ್ದರೆ ಕಿರುಚಾಡುವಿಕೆ ಸಾಧ್ಯ.

ಹಾಗಾದರೆ, ಪರಿಹಾರ ಏನು?

* ಮಗು ಯಾವ್ಯಾವ ಸಮಯದಲ್ಲಿ ಕಿರುಚುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿರಿ. ಉದಾಹರಣೆಗೆ, ಮಗು ಮಾರುಕಟ್ಟೆಗೆ ಹೋದಾಗಲೇ ಕೂಗುತ್ತದೆ ಎಂದರೆ, ಅದಕ್ಕೆ ಕಾರಣವೇನಿರಬಹುದೆಂದು ನೀವೇ ವಿಶ್ಲೇಷಿಸಲು ಪ್ರಯತ್ನಿಸಿ. ಆ ಸಮಯದಲ್ಲಿ ಮಗುವಿಗೆ ಬೇಕಾದದನ್ನು ತಕ್ಷಣ ಕೊಡಿಸಬೇಡಿ. ಏಕೆಂದರೆ, ಈ ಪ್ರಯತ್ನ ಸಮಸ್ಯೆ ಪರಿಹರಿಸುವ ಬದಲು, ಇರುವ ನಡವಳಿಕೆಯನ್ನೇ ಉಲ್ಬಣಿಸಲು ಕಾರಣವಾಗಬಹುದು.

* ಮಗು ಕಿರುಚುವುದು ವಿಶೇಷವಾಗಿ ಪ್ರಯಾಣದಲ್ಲಿ ಇತರ ಮಕ್ಕಳಿಗೆ ಮತ್ತು ಪಾಲಕರಿಗೆ ತೊಂದರೆ ಆಗುತ್ತದೆ ಎಂಬುದನ್ನು ನೆನಪಿಡಿ. ಕಿರುಚಲು ಆರಂಭಿಸಿದಾಗ ಮಗುವಿನ ಗಮನವನ್ನು ಬೇರೆಡೆ ತಿರುಗಿಸಲು ಪ್ರಯತ್ನಿಸಿ. ದಿಟ್ಟಿಸಿ ನೋಡಿರಿ. ಜೋಕ್ ಮಾಡಿ ನಗಿಸಿರಿ.

* ಕೆಲವು ಸಾಮಾನ್ಯವಾದ ಸ್ಥಳದಲ್ಲಿ ಕಿರುಚುತ್ತಿದ್ದರೆ(ಸೂಪರ್ ಮಾರ್ಕಟ್, ರೆಸ್ಟೊರೆಂಟ್) ‘ಇನ್ನು ಸ್ವಲ್ಪ ನಿಮಿಷ ಮನೆಗೆ ಹೋಗೋಣ’ ಎಂದು ಹೇಳಿ ಸಂತೈಸಿಸಲು ಪ್ರಯತ್ನಿಸಿ. ಕಿರುಚುವ ಸಮಯದಲ್ಲಿ ಅವರು ಚಟುವಟಿಕೆಯಲ್ಲಿರಲು ಇಷ್ಟದ ಹಾಡು ಕೇಳಿಸಿ. ಇಷ್ಟಪಡುವ ತಿಂಡಿ ತಿನಿಸಿ, ಆಟಿಕೆಕೊಡಿಸಿ. ನಿಮ್ಮ ಕೆಲಸಗಳನ್ನು (ಶಾಪಿಂಗ್ ಇತ್ಯಾದಿ) ಬೇಗ ಮುಗಿಸಲು ಪ್ರಯತ್ನಿಸಿ. ಆದರೆ, ಕಿರುಚುವುದನ್ನು ದೂರ ಮಾಡುವುದ ಕ್ಕಾಗಿ ದಯವಿಟ್ಟು ಮೊಬೈಲ್ ಕೊಟ್ಟು ಕೂರಿಸಬೇಡಿ, ಟಿವಿ ಹಾಕಿ ನೋಡಲು ಹೇಳಬೇಡಿ.

* ಕಿರುಚುವ ಸಮಯದಲ್ಲಿ, ಥಟ್‌ನೆ ಪರಿಸರವನ್ನು ಬದಲಾಯಿಸಿ. ಆ ಸ್ಥಳದಿಂದ ಬೇರೆ ಕಡೆ ಹೋಗಲು ಪ್ರಯತ್ನಿಸಿ. ಸ್ಥಳ–ಪರಿಸರ ಬದಲಾದರೆ, ಮಕ್ಕಳ ವರ್ತನೆಯೂ ಬದಲಾಗುತ್ತದೆ. ನಿಮಗೂ ಮತ್ತು ಮಗುವಿಗೂ ಮನಸ್ಸಿಗೆ ಸ್ವಲ್ಪ ನೆಮ್ಮದಿ ದೊರೆಯತ್ತದೆ. ಮಗುವು ದೊಡ್ಡವನಾಗಿದ್ದರೆ, ಅವರು ಶಾಂತವಾಗುವವರೆಗೆ ಕೋಣೆಯಿಂದ ಹೊರಹೋಗುವಂತೆ ನಯವಾಗಿ ಮತ್ತು ಸದ್ದಿಲ್ಲದೆ ಹೇಳಿ. ಯಾವುದೇ ನಿರ್ದೇಶನಗಳನ್ನು ಸ್ಪಷ್ಟವಾಗಿ ನೀಡಬೇಕು. ಈ ಸಮಯದಲ್ಲಿ ಏರು ಧ್ವನಿಯಲ್ಲಿ ಸಲಹೆ ಕೊಡಬೇಡಿ.

* ಮಗುವಿನ ದಿನಚರಿಗಳನ್ನು ಪುನರುಜ್ಜೀವನಗೊಳಿಸಿರಿ. ಬೆಳಿಗ್ಗೆ ಎದ್ದೇಳುವ, ರಾತ್ರಿ ಮಲಗುವ ಸಮಯ ನಿಗದಿ ಪಡಿಸಿ. ಆಟ, ಅಭ್ಯಾಸ, ಊಟದ ಸಮಯ, ಶಾಲೆಗೆ ಹೋಗುವುದು, ಪಠ್ಯೇತರ ಚಟುವಟಿಕೆಗಳು, ಮನೆ ಅಭ್ಯಾಸ ಸರಿಯಾಗಿ ಪಾಲಿಸುವಂತೆ ನೋಡಿಕೊಳ್ಳಿ. ಅವುಗಳನ್ನು ಬಹಳ ಸ್ಪಷ್ಟ ಮತ್ತು ಖಚಿತವಾಗಿ ಹೇಳಿರಿ. ಈ ದಿನಚರಿಗಳನ್ನು ನಿಮ್ಮ ಮಗುವಿನೊಂದಿಗೆ ಚರ್ಚಿಸಿ ಮತ್ತು ಅವರ ಅಭಿಪ್ರಾಯ ಪಡೆಯಿರಿ. ದಿನಚರಿಯ ಪಟ್ಟಿಮಾಡಿ. ನಿತ್ಯ ಮಕ್ಕಳ–ಪಾಲನೆ ಪೋಷಣೆಯನ್ನು ವೇಳಾಪಟ್ಟಿಯಂತೆ ಅನುಸರಿಸಿ.

* ನಿಮ್ಮ ಮಗು ಕಿರುಚುತ್ತಿದ್ದರೆ, ನಿಮ್ಮ ಮನಸ್ಸಿನಲ್ಲಿ ಕೋಪ ತುಂಬಿಕೊಂಡಿದ್ದರೂ, ನೀವು ಕಿರುಚದೆ ಶಾಂತ ವಾಗಿರುವುದು ಮುಖ್ಯ. ನಿಮ್ಮ ಪ್ರತಿಕ್ರಿಯೆಗಳನ್ನು ವಿಶ್ಲೇಷಣೆ ಮಾಡಿಕೊಳ್ಳಿರಿ.

* ಏನಾದರೂ ನಿಮ್ಮನ್ನು ಬಹಳವಾಗಿ ಕೆರಳಿಸಿದಾಗಲೂ ಶಾಂತವಾಗಿ ಮಾತನಾಡಲು ಪ್ರಾರಂಭಿಸಿ. ಕೂಗಾಡದಂತೆ ಶಾಂತವಾಗಿ ಮಾತನಾಡುವ ಕಲೆಯನ್ನು ಉದಾಹರಿಸಿ ಮಗುವಿಗೆ ಹೇಳಿ ಕೊಡಿ.

* ನಿಮ್ಮ ಮಗುವಿನೊಂದಿಗೆ ಶಾಂತ ಮತ್ತು ಗುಣಾತ್ಮಕ ಸಮಯವನ್ನು ಕಳೆಯಿರಿ. ಅವರು ಏನು ಯೋಚಿಸುತ್ತಿ ದ್ದಾರೆಂದು ತಿಳಿಯಿರಿ. ಇದು ಒಂದು ಸಮಯದಲ್ಲಿ ಅಥವಾ ಒಂದು ಗಂಟೆಗೆ ಅಥವಾ 5 ನಿಮಿಷಗಳವರೆಗೆ ಇರಬಹುದು. ಆದರೆ ಬಹಳ ಗಮನ ಹರಿಸಬೇಡಿ. ಅವರನ್ನು ಚೆನ್ನಾಗಿ ತಿಳಿದುಕೊಳ್ಳುವುದು ನಮ್ಮ ಉದ್ದೇಶವಾಗಿರಲಿ.

* ಸಂತೋಷ, ದುಃಖ, ಕೋಪ, ಅಸಮಾಧಾನ, ನಿರಾಶೆ ಮುಂತಾದ ಭಾವನೆಗಳನ್ನು ಅನಾವಶ್ಯಕವಾಗಿ ವ್ಯಕ್ತಪಡಿಸಬೇಡಿ. ಮಕ್ಕಳು ಇವುಗಳನ್ನು ಅನುಸರಿಸುತ್ತಾರೆ.

ವೈದ್ಯ ಸಲಹೆ ಯಾವಾಗ?

ಸಾಮನ್ಯವಾಗಿ ಮಕ್ಕಳ ಕಿರುಚಾಡುವಿಕೆ ಮೂರ್ನಾಲ್ಕು ವರ್ಷಗಳ ಹೊತ್ತಿಗೆ ಕಡಿಮೆಯಾಗುತ್ತದೆ. ಆದರೆ, ಇದು ಮುಂದುವರಿದರೆ, ವರ್ತನೆ ಅಸಹಜ ಎಂದು ಎನ್ನಿಸಿದರೆ ಮಕ್ಕಳ ಮನೋವೈದ್ಯರನ್ನು ಸಂಪರ್ಕಿಸಬಹುದು. ಹಾಗೆಯೇ, ನಿತ್ಯ ಕಿರುಚುವಿಕೆ ಜೊತೆಗೆ ಜ್ವರ, ವಾಂತಿ, ಬೆಳವಣಿಗೆಯಲ್ಲಿ ವಿಳಂಬವಾಗಿದ್ದರೆ ಮಕ್ಕಳ ತಜ್ಞರ ಸಲಹೆ ಅವಶ್ಯ.

(ಲೇಖಕರು ಮಕ್ಕಳ ತಜ್ಞರು,ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.