PV Web Exclusive | ಮೆದುಳಿಗೊಂದು ಚಿಪ್: ಮನೋದೈಹಿಕ ಕಾಯಿಲೆ ಚಿಕಿತ್ಸೆಯ ಆಶಾಕಿರಣ
ಕಂಪ್ಯೂಟರ್ ಎಂಬ ಸರ್ವಾಂತರ್ಯಾಮಿಯ ಆವಿಷ್ಕಾರದ ಮೂಲವೇ ಮಾನವನ ಮೆದುಳು. ನರವ್ಯೂಹದ ವ್ಯವಸ್ಥೆಯಂತೆಯೇ ಕಂಪ್ಯೂಟರ್ ಕೂಡ ರೂಪುಗೊಂಡಿದೆ. ಒಂದು ಕಂಪ್ಯೂಟರನ್ನು ಬಿಚ್ಚಿ, ಅದರಲ್ಲಿರುವ ಮದರ್ ಬೋರ್ಡ್ ನೋಡಿದರೆ, ಮಾನವನ ನರಮಂಡಲ ವ್ಯವಸ್ಥೆಯಂತೆಯೇ ಗೋಜಲು ಗೋಜಲಾದ ಸಂಪರ್ಕ ತಂತುಗಳು ಕಾಣಸಿಗುತ್ತವೆ. ದೇಹದ ಅತ್ಯಂತ ಸಂಕೀರ್ಣ ಅಂಗವಾಗಿರುವ ಮತ್ತು ಜೀವಂತ ಕಂಪ್ಯೂಟರ್ನ ಪ್ರೊಸೆಸರ್ ಎಂದೇ ಕರೆಯಲಾಗುವ ಮೆದುಳಿನೊಳಗೆ ಕಂಪ್ಯೂಟರ್ ಚಿಪ್ ಅಳವಡಿಸುವ ಹೊಸ ಪ್ರಯೋಗವೀಗ ಯಶಸ್ವಿಯಾಗಿದೆ.Last Updated 5 ಸೆಪ್ಟೆಂಬರ್ 2020, 6:25 IST