ವೇಗದ ಜೀವನಶೈಲಿ, ಮಾನಸಿಕ ಒತ್ತಡದಂತಹ ಸಮಸ್ಯೆಗಳು ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಯುವಜನರು ಬಲಿಯಾಗುತ್ತಿದ್ದು, ದೇಶದ ಆರೋಗ್ಯ ವಲಯದಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಇದೀಗ 40ರ ಆಸುಪಾಸಿನಲ್ಲಿರುವ ಹೆಚ್ಚಿನವರಿಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ನಿದ್ರಾಹೀನತೆ ಸಮಸ್ಯೆಗೆ ಬಲಿಯಾಗುತ್ತಿರವವರಲ್ಲಿ ಯುವಜನರೇ ಹೆಚ್ಚು!

ಹೌದು... ನಿದ್ರಾಹೀನತೆ ಎನ್ನುವುದು ದೇಹದ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಬರೀ ದೇಹದ ಮೇಲೆ ಅಷ್ಟೇ ಅಲ್ಲ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿದ್ರಾಹೀನತೆ ತೆಡೆಗಟ್ಟುವ ಸಲುವಾಗಿ ಸರ್ಕಾರಗಳು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಆದರೆ ದೇಶದ ಯುವಶಕ್ತಿ ನಿದ್ರಾಹೀನತೆಯಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದೆ.

ಸಿವಿಲ್ ಸೊಸೈಟಿ ಸಂಸ್ಥೆಯಾದ ಏಜ್ವೆಲ್ ಫೌಂಡೇಷನ್, ನಿದ್ರಾಹೀನತೆ ಬಗ್ಗೆ ಮೇ ತಿಂಗಳಿನಲ್ಲಿ ಸಮೀಕ್ಷೆಯೊಂದನ್ನು ನಡೆಸಿತ್ತು. ಸಮೀಕ್ಷೆಯಲ್ಲಿ ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 40ರಿಂದ 60 ವರ್ಷದ ಆಸುಪಾಸಿನಲ್ಲಿರುವ ಸುಮಾರು 5 ಸಾವಿರ ಜನರು ಭಾಗವಹಿಸಿದ್ದರು. ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ.70ರಷ್ಟು ಜನರು ದಿನಕ್ಕೆ 6 ಗಂಟೆಗಳ ಕಾಲ ನಿದ್ದೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಹೆಚ್ಚಿನ ಪುರುಷರು ನಿದ್ದೆ ಮಾಡಲು ಹಂಬಲಿಸುತ್ತಿದ್ದು, ನಿದ್ದೆಗೆ ಅವಕಾಶ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದರಲ್ಲಿ 2,245 ಜನರು 40–60 ವರ್ಷದ ನಡುವೆ ಇದ್ದರು. ಉಳಿದ 2,755 ಜನರು 60 ವರ್ಷ ಮೇಲ್ಟವರಾಗಿದ್ದರು. ಇವರಲ್ಲಿ ಶೇ.51ರಷ್ಟು ಮಹಿಳೆಯರಿದ್ದರು.

ಜೀವನಶೈಲಿ, ಭಾವನಾತ್ಮಕತೆ, ಸಾಮಾಜಿಕ ಸಮಸ್ಯೆ, ಔಷಧಿಗಳ ದುಷ್ಟರಿಣಾಮ ನಿದ್ರಾಹೀನತೆಗೆ ಪ್ರಮುಖ ಕಾರಣ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಹಣಕಾಸಿನ ವಿಷಯಗಳು ಮತ್ತು ಆಸ್ತಿಗೆ ಸಂಬಂಧಿತ ಘರ್ಷಣೆಗಳು ನಿದ್ರಾಹೀನತೆ ಕಾರಣಗಳಾಗಿವೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇ.52ರಷ್ಟು ಜನರು ಗಾಢ ನಿದ್ರೆಗೆ ಜಾರಲು ಪ್ರಯಾಸಪಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಶೇ. 75% ನಗರವಾಸಿಗಳು ದಿನಕ್ಕೆ 5ರಿಂದ 6 ಗಂಟೆ ಮಾತ್ರ ನಿದ್ದೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಶೇ.32ರಷ್ಟು ಜನರು ತಮ್ಮ ನಿದ್ರಾಭ್ಯಾಸದಲ್ಲಿ ಯಾವುದೇ ಬದಲಾಣೆಗಳಾಗಿಲ್ಲ ಎಂದು ತಿಳಿಸಿದ್ದಾರೆ. ಶೇ.14ರಷ್ಟು ಜನರು ಹಿಂದಿಗಿಂತ ಈಗ ಹೆಚ್ಚು ನಿದ್ರೆ ಮಾಡುವುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ಶೇ.56ರಷ್ಟು ಜನರು ತಮ್ಮ ನಿದ್ರಾಭ್ಯಾಸದಲ್ಲಿ ತಮಗೆ ತೃಪ್ತಿಯಿಲ್ಲದಿರುವುದಾಗಿ ತಿಳಿಸಿದ್ದಾರೆ.

ವೃದ್ದಾಪ್ಯದಲ್ಲಿ ಕಾಡುವ ನಿದ್ರಾಹೀನತೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಏಜ್ವೆಲ್ ಫೌಂಡೇಶನ್ನ ಅಧ್ಯಕ್ಷ ಹಿಮಾಂಶು ರಾತ್, ‘ವೃದ್ಯಾಪ್ಯದಲ್ಲಿ ಬರುವ ನಿದ್ರಾಹೀನತೆ ಸಮಸ್ಯೆಗೆ ಔಷಧಿಗಳು ನೇರ ಪರಿಣಾಮ ಬೀರುವ ಸಾಧ್ಯತೆಯಿದೆ‘ ಎಂದಿದ್ದಾರೆ.

‘ವೃದ್ದಾಪ್ಯದಲ್ಲಿ ತೆಗೆದುಕೊಳ್ಳುವ ಹೆಚ್ಚಿನ ಔಷಧಿಗಳು ನಿದ್ರಾ ಸ್ನೇಹಿಯಾಗಿರುವುದಿಲ್ಲ. ಅಧಿಕ ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಕೆಲವು ಔಷಧಿಗಳು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡಬಹುದು. ಕೆಲವು ಔಷಧಿಗಳು ಸೇವಿಸಿದಾಗ ಹಗಲಿನಲ್ಲಿ ನಿದ್ರೆ ಬರುತ್ತದೆ. ನಿವೃತ್ತಿಯ ನಂತರ ಜೀವನಶೈಲಿಯಲ್ಲಿ ಬದಲಾಣೆಗಳು ಆಗುವುದರಿಂದಲೂ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ‘ ಎಂದು ಹೇಳಿದರು.

‘ವೃದ್ಧಾಪ್ಯದಲ್ಲಿ ಕಾಡುವ ಒಂಟಿತನವೂ ತೀವ್ರ ನಿದ್ರಾಹೀನತೆಗೆ ಕಾರಣವಾಗಿವೆ. ಸಂವಹನದ ಕೊರತೆಯೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂವಹನ ಕೊರತೆಯಿಂದ ಒಂಟಿತನ ಕಾಡುತ್ತದೆ. ಕೊನಗೆ ಅದರಿಂದ ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ. ಇದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ‘ ಎಂದು ಹೇಳಿದರು.

‘ನಿದ್ರಾಹೀನತೆ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ‘ ಎಂದು ಸಲಹೆ ನೀಡಿದ್ದಾರೆ.

ನಿದ್ರಾಹೀನತೆಗೆ ಪ್ರಮುಖ ಕಾರಣಗಳು;

ವೇಗದ ಜೀವನ ಶೈಲಿ

ಹಣಕಾಸಿನ ಸಮಸ್ಯೆ

ಇಳಿ ವಯಸ್ಸಿನಲ್ಲಿರಲ್ಲಿ ಸಂವಹನ ಕೊರತೆ ಮತ್ತು ಒಂಟಿತನ

ಔಷಧಿಗಳ ಅಡ್ಡ ಪರಿಣಾಮ

ಮಾನಸಿಕ ಒತ್ತಡ

ಮದ್ಯಪಾನ ಮತ್ತು ಧೂಮಪಾನ, ಡ್ರಗ್ಸ್ ಸೇವನೆ

ಅತಿಯಾದ ಮೊಬೈಲ್ ಬಳಕೆ

ಭಾವನಾತ್ಮಕ ವಿಚಾರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.