ಆಧುನಿಕ ಜೀವನಶೈಲಿ ಮತ್ತು ಅವಿಶ್ರಾಂತ ಕಾರ್ಯಚಟುವಟಿಕೆಗಳು ದಂಪತಿಗಳಿಗೆ ತಾವು ಮಕ್ಕಳನ್ನು ಪಡೆದು ಪೋಷಕರಾಗುವುದಕ್ಕೆ ಸಮಯ ಇಲ್ಲದಂತೆ ಮಾಡುತ್ತಿವೆ.

ಪೋಷಕರಾಗುವ ಪರಿಗಣನೆಯನ್ನು ಅವರು ಜೀವನದಲ್ಲಿ ಹೆಚ್ಚು ವಯಸ್ಸಾದ ನಂತರದ ಹಂತಕ್ಕೆ ಮುಂದೂಡುವ ಪರಿಸ್ಥಿತಿ ಉಂಟಾಗಿದೆ. ಎಐಐಎಂಎಸ್‌ನ ಇತ್ತೀಚಿನ ವರದಿ ಪ್ರಕಾರ ಭಾರತದಲ್ಲಿ ಶೇ.10-15ರಷ್ಟು ಜೋಡಿಗಳು ಫಲವತ್ತತೆಯ(ಫರ್ಟಿಲಿಟಿ) ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಸಾಮಾನ್ಯವಾಗಿ ಫರ್ಟಿಲಿಟಿ ಸಮಸ್ಯೆ ಎಂದರೆ ಮಹಿಳೆಯರ ಕಡೆಗೆ ಮುಖ ಮಾಡಲಾಗುತ್ತದೆ. ಆದರೆ, ವಾಸ್ತವವಾಗಿ ಈ ತೊಂದರೆ ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಅನ್ವಯವಾಗುತ್ತದೆ.

ಮಹಿಳೆಯರಲ್ಲಿ ಫಲವತ್ತತೆ ಯಾವ ರೀತಿಯಲ್ಲಿ ಇರುತ್ತದೆ? ಹೆಚ್ಚು ವಯಸ್ಸಾದ ಮಹಿಳೆಯರಿಗಿಂತ ಎಳೆಯ ವಯಸ್ಸಿನ ಮಹಿಳೆಯರು ಏಕೆ ಹೆಚ್ಚು ಫಲವತ್ತತೆ ಹೊಂದಿರುತ್ತಾರೆ?

ಮಹಿಳೆಯರು ತಮ್ಮ ದೇಹದಲ್ಲಿ ನಿಗದಿತ ಸಂಖ್ಯೆಯ ಅಂಡಾಣುಗಳನ್ನು ಹೊಂದಿರುತ್ತಾರೆ. ಬಾಲಕಿಯರಿಗೆ ಋತುಸ್ರಾವ ಆರಂಭವಾದ ನಂತರ ಅಂಡಾಶಯಗಳಿಂದ ಸುಮಾರು 1,000 ಮೊಟ್ಟೆಗಳು ಬಿಡುಗಡೆಯಾಗುತ್ತವೆ. ಇವುಗಳಲ್ಲಿ ಒಂದು ಅಂಡಾಣು ಪ್ರಬಲವಾಗಿರುತ್ತದೆ. ಸಂಭೋಗದಿಂದಾಗಿ ಫಲವತ್ತತೆ ಹೊಂದುತ್ತದೆ ಅಥವಾ ಕರಗಿ ಹೋಗಿ ಮಹಿಳೆಯರಿಗೆ ಋತುಸ್ರಾವ ಉಂಟಾಗಲು ದಾರಿಯಾಗುತ್ತದೆ.

ಮಹಿಳೆಯರಿಗೆ ವಯಸ್ಸಾದಂತೆ ಅಂಡಾಶಯಗಳಿಂದ ಬಿಡುಗಡೆಯಾಗುವ ಅಂಡಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ವಿಶೇಷವಾಗಿ 35 ವರ್ಷಗಳ ನಂತರದ ವಯಸ್ಸಿನ ಭಾರತೀಯ ಮಹಿಳೆಯರಲ್ಲಿ ಅಂಡಾಣುಗಳ ಸಂಖ್ಯೆ ಕ್ಷಿಪ್ರಗತಿಯಲ್ಲಿ ಕಡಿಮೆಯಾಗುತ್ತಿವೆ. ಫಲವತ್ತತೆಗೆ ಅಡ್ಡಿಯಾಗುವ ಒಂದು ಅಂಶ ಇದಾಗಿದ್ದರೆ, ಇತರೆ ಕೆಲವು ಕಾರಣಗಳು ಈ ಕೆಳಗಿನಂತಿವೆ.

ಮಹಿಳೆಯರಲ್ಲಿ ಇಂದು ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಒತ್ತಡ ಹೆಚ್ಚಿದೆ. ಹಲವಾರು ಅಂಶಗಳಿಂದಾಗಿ ಮಹಿಳೆಯರು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಒತ್ತಡ ಅಂಡಾಣುಗಳಿಗೆ ಹಾನಿವುಂಟಾಗಲು ದಾರಿ ಮಾಡಿಕೊಡುತ್ತದೆ.

ಸಮತೋಲಿತ ಆಹಾರ ಸೇವಿಸದೆ ಇರುವುದು, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೆ ಇರುವುದು, ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದಿರುವುದು, ಕಂಪ್ಯೂಟರ್, ಮೊಬೈಲ್, ಟಿವಿ ಮುಂತಾದವುಗಳನ್ನು ವೀಕ್ಷಿಸುವ ಸಮಯ ಹೆಚ್ಚಾಗಿರುವುದು, ಧೂಮಪಾನ ಮತ್ತು ಮದ್ಯಪಾನ ಮುಂತಾದ ಅನಾರೋಗ್ಯಕರ ಅಭ್ಯಾಸಗಳು ಅಂಡಾಣುವಿನ ಗುಣಮಟ್ಟಕ್ಕೆ ಹಾನಿವುಂಟು ಮಾಡುತ್ತವೆ.

ಅಂಡಾಣುಗಳ ಗುಣಮಟ್ಟ ಕಡಿಮೆಯಾಗುತ್ತಿದ್ದಂತೆ ವಯಸ್ಸಾದ ಮಹಿಳೆಯರಲ್ಲಿ ಗರ್ಭಪಾತದ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಮಹಿಳೆಯರಿಗೂ ಅಪಾಯಕಾಡುತ್ತದೆ.

ಹೆಚ್ಚು ವಯಸ್ಸಾದ ಮಹಿಳೆಯರಿಗೆ ಅಧಿಕ ರಕ್ತದೊತ್ತಡ, ಥೈರಾಯ್ಡ್, ಹೃದಯದ ರೋಗಗಳು ಮುಂತಾದ ವೈದ್ಯಕೀಯ ಸ್ಥಿತಿಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಇದರಿಂದ ಉತ್ತಮ ಗುಣಮಟ್ಟದ ಅಂಡಾಣುಗಳನ್ನು ಉತ್ಪಾದಿಸುವುದು ಮಹಿಳೆಯರಿಗೆ ಸವಾಲಿನ ವಿಷಯವಾಗುತ್ತದೆ.

ಹೆಚ್ಚು ವಯಸ್ಸಾದ ಮಹಿಳೆಯರಿಗೆ ಪದೇ ಪದೇ ಸೋಂಕುಗಳು ಉಂಟಾಗುತ್ತವೆ. ಇವು ಫಾಲೋಪಿಯನ್ ಕೊಳವೆಯ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಇದರಿಂದ ಎಕ್ಟೋಪಿಕ್ ಗರ್ಭಾವಸ್ಥೆಯ ಸಾಧ್ಯತೆ ಉಂಟಾಗುತ್ತದೆ. ಎಕ್ಟೋಪಿಕ್ ಗರ್ಭಾವಸ್ಥೆ ಎಂದರೆ ಫಲವಂತಗೊಂಡ ಅಂಡಾಣು ಗರ್ಭಾಶಯದಿಂದ ಹೊರಗಡೆ ಅಂಟಿಕೊಂಡಿರುವ ಸ್ಥಿತಿಯಾಗಿರುತ್ತದೆ. ಇದು ಸಾಮಾನ್ಯವಾಗಿ ಫಾಲೋಪಿಯನ್ ಕೊಳವೆಗಳಲ್ಲಿ ಕಂಡುಬರುತ್ತದೆ. ಅಂಡಾಣುಗಳು ಇಲ್ಲಿ ಅಂಟಿಕೊಂಡಿದ್ದರೆ, ಅವು ಬೆಳವಣಿಗೆಯಾಗುವುದಿಲ್ಲ. ಅಲ್ಲದೆ, ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು.

ಆಧುನಿಕ ವೈದ್ಯಕೀಯ ಉನ್ನತಮಟ್ಟದ ಅಭಿವೃದ್ಧಿ ಹೊಂದಿದ್ದು, ಮಹಿಳೆಯರು ಗರ್ಭಾವಸ್ಥೆ ಹೊಂದಲು ಬಹಳಷ್ಟು ನೆರವಾಗುವ ಸಾಧ್ಯತೆ ಹೊಂದಿರುತ್ತವೆ. ವಯಸ್ಸಾದ ಮಹಿಳೆಯರು ಗರ್ಭಾವಸ್ಥೆ ಹೊಂದಲು ಮತ್ತು ತಮ್ಮದೇ ಆದ ಮಕ್ಕಳನ್ನು ಸಾಕಿ ಬೆಳೆಸಲು ಅವಕಾಶವನ್ನು ಐವಿಎಫ್(ಇನ್-ವಿಟ್ರೊ ಫರ್ಟಿಲೈಸೇಷನ್) ನೀಡುತ್ತದೆ. ಪೋಷಕರಾಗಲು ಪರಿತಪಿಸುವ ಜನರಿಗೆ ಐವಿಎಫ್ ಸಹಾಯ ಮಾಡಬಹುದಾದ ಕೆಲವು ಮಾರ್ಗಗಳು ಇಂತಿವೆ...

ಜೆನೆಟಿಕ್ ಸ್ಕ್ರೀನಿಂಗ್

ಸಾಮಾನ್ಯ ಗರ್ಭಾವಸ್ಥೆಯಲ್ಲಿ ಭ್ರೂಣದ ಜೆನೆಟಿಕ್ ಸ್ಕ್ರೀನಿಂಗ್ ಪರೀಕ್ಷೆ (ವಂಶವಾಹಿ ಸಂಬಂಧಿತ ತಪಾಸಣೆ) ನಿಗದಿತ ಕ್ರಮವಾಗಿರುವುದಿಲ್ಲ. ಭ್ರೂಣದಲ್ಲಿ ಯಾವುದೇ ರೋಗಗಳು ಮತ್ತು ಅಸಾಧಾರಣ ತೊಂದರೆಗಳಿವೆಯೇ ಎಂದು ಪರೀಕ್ಷಿಸುವುದರೊಂದಿಗೆ ಅತ್ಯುತ್ತಮ ಭ್ರೂಣವನ್ನು ಗುರುತಿಸಲು ಜೆನೆಟಿಕ್ ಸ್ಕ್ರೀನಿಂಗ್ ನೆರವಾಗುತ್ತದೆ. ಐವಿಎಫ್ ಚಿಕಿತ್ಸೆಯಲ್ಲಿ ಅತ್ಯುತ್ತಮ ಭ್ರೂಣವನ್ನು ಆರಿಸಿಕೊಳ್ಳುವ ಖಾತ್ರಿ ಮಾಡಿಕೊಳ್ಳಲು ಜೆನೆಟಿಕ್ ಸ್ಕ್ರೀನಿಂಗ್ ಪರೀಕ್ಷೆಯನ್ನು ವೈದ್ಯರು ನಡೆಸುವರು. ಇದರಿಂದ ಫರ್ಟಿಲಿಟಿಯ ಯಶಸ್ಸಿನ ಸಾಧ್ಯತೆ ಹೆಚ್ಚಾಗುತ್ತದೆ.

ಔಷಧಗಳು

ಐವಿಎಫ್ ಚಿಕಿತ್ಸೆಯಲ್ಲಿ ಔಷಧಗಳು ಕೂಡ ಸೇರಿಸುತ್ತವೆ. ಅವು ಅಂಡಾಣುಗಳ ಗುಣಮಟ್ಟವನ್ನು ಹೆಚ್ಚಿಸಲು ಸಂಭಾವ್ಯ ತಾಯಂದಿರಿಗೆ ಬಹು-ವಿಟಮಿನ್‌ಗಳು ಮತ್ತು ಅಗತ್ಯ ಪೋಷಕಾಂಶಗಳು ಅಲ್ಲದೇ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಪೂರೈಸುತ್ತವೆ.

ಚುಚ್ಚುಮದ್ದುಗಳು

ಐವಿಎಫ್ ಚಿಕಿತ್ಸೆಯ ಯಶಸ್ಸಿಗೆ ಬೆಳವಣಿಗೆ ಹಾರ್ಮೋನ್‌ಗಳಂತಹ ಚುಚ್ಚುಮದ್ದುಗಳು ಸಹಾಯ ಮಾಡುತ್ತವೆ. ಕಾಂಡಕೋಶ ಚಿಕಿತ್ಸೆಯಂತಹ ಕಾರ್ಯವಿಧಾನಗಳನ್ನು ಬಳಸಿ ಮತ್ತು ಪ್ಲೇಟ್‌ಲೆಟ್‌ಗಳಿಂದ ಸಮೃದ್ಧವಾದ ಪ್ಲಾಸ್ಮಾಗಳನ್ನು ನೇರವಾಗಿ ಅಂಡಾಶಯಗಳಿಗೆ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ. ಇದು ಅಂಡಾಣುಗಳ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೇ ಚಿಕಿತ್ಸೆಯ ಯಶಸ್ಸಿಗೆ ನೆರವಾಗುತ್ತದೆ.

ಲೇಸರ್ ಹ್ಯಾಚಿಂಗ್

ಅಂಡಾಣು ಮತ್ತು ವೀರ್ಯಾಣುಗಳು ಒಂದಾಗಿ ವಿಲೀನವಾದ ನಂತರ ಅದನ್ನು ಭ್ರೂಣ ಎಂದು ಕರೆಯಲಾಗುತ್ತದೆ. ಭ್ರೂಣಕ್ಕೆ ಗಟ್ಟಿಯಾದ ಹೊರ ಆವರಣವಿರುತ್ತದೆ. ಅದು ಒಡೆಯದೇ ಭ್ರೂಣ ಗರ್ಭಾಶಯದ ಗೋಡೆಗೆ ಅಂಟಿಕೊಳ್ಳಲು ಸಾಧ್ಯವಿರುವುದಿಲ್ಲ. ಭ್ರೂಣದ ಹೊರಭಾಗದ ಪದರವನ್ನು ತೆಗೆದುಹಾಕಲು ಐವಿಎಫ್‌ನಲ್ಲಿ ಲೇಸರ್ ಹ್ಯಾಚಿಂಗ್‌ಅನ್ನು ಬಳಸಲಾಗುತ್ತದೆ. ಇದರಿಂದ ಭ್ರೂಣ ಗರ್ಭಾಶಯಕ್ಕೆ ಅಂಟಿಕೊಳ್ಳಲು ಸಾದ್ಯವಾಗುತ್ತದೆ.

ವೈದ್ಯರಿಂದ ಸೂಚಿಸಲ್ಪಡುವುದಲ್ಲದೇ ಈ ಕ್ಷೇತ್ರದಲ್ಲಿನ ಪರಿಣತರು ಕಾರ್ಯವಿಧಾನಗಳನ್ನು ನಡೆಸಿದಲ್ಲಿ ಇವೆಲ್ಲ ಸೇವೆಗಳು ಸುರಕ್ಷಿತವಾಗಿರುತ್ತವೆ. ಬಹುತೇಕ ರೋಗಿಗಳಲ್ಲಿ ಐವಿಎಫ್‌ನಿಂದ ಯಾವುದೇ ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ. ಅಲ್ಪಾವಧಿಯಲ್ಲಿ ಅವರಿಗೆ ಉಬ್ಬರಿಸಿಕೊಂಡ ಭಾವನೆ, ವಾಕರಿಕೆಯ ಭಾವನೆ ಉಂಟಾಗಬಹುದು. ಸುಸ್ತು ಮತ್ತು ಭಾವನಾತ್ಮಕ ತೊಳಲಾಟಗಳ ಅನುಭವವಾಗಬಹುದು. ಕೆಲವೊಮ್ಮೆ ಓವೇರಿಯನ್ ಹೈಪರ್ ಸ್ಟಿಮ್ಯುಲೇಷನ್‌ನಂತರ ಅಪಾಯಗಳು ಉಂಟಾಗಬಹುದು, ಆದರೆ ಬಹುತೇಕ ಪ್ರಕರಣಗಳನ್ನು ವೈದ್ಯರು ಸುರಕ್ಷಿತವಾಗಿ ನಿಭಾಯಿಸುವರು.

ಜೋಡಿಗಳಲ್ಲಿ ಇಬ್ಬರೂ ದೈಹಿಕ ದೃಢತೆ ಹೊಂದಿದ್ದು, ಮಾನಸಿಕ ಪ್ರಶಾಂತತೆ ಹೊಂದಿದ್ದಲ್ಲಿ ಐವಿಎಫ್ ಚಿಕಿತ್ಸೆಯ ಯಶಸ್ಸಿನ ಸಾಧ್ಯತೆ ಹೆಚ್ಚುತ್ತದೆ. ಅವರು ಧೂಮಪಾನ ಮತ್ತು ಮದ್ಯಪಾನಗಳಿಂದ ದೂರವಿರಬೇಕು. ಅವರು ಖನಿಜ ಮತ್ತು ಪೋಷಕಾಂಶಗಳಿಂದ ಸಮೃದ್ಧವಾದ ಆಹಾರವನ್ನು ಸೇವಿಸುವ ಮತ್ತು ತಮ್ಮನ್ನು ತಾವು ಚಟುವಟಿಕೆಯಿಂದ ಮತ್ತು ಆರೋಗ್ಯವಂತರಾಗಿ ಇರುವ ಖಾತ್ರಿ ಮಾಡಿಕೊಳ್ಳಲು ಜೋಡಿಗಳು ಸಮತೋಲಿತ ಆಹಾರ ಕ್ರಮ ಅನುಸರಿಸಬೇಕು.

ಲೇಖಕರು– ಡಾ. ಜ್ಯೋತಿ ಬಂಡಿ. ನಿರ್ದೇಶಕರು, ಡಿವೈಯು ವುಮನ್ ಅಂಡ್ ಚೈಲ್ಡ್ ಕೇರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.