ಅಡ್ಡಪರಿಣಾಮ
ಮೌತ್‌ವಾಶ್‌ಗಳನ್ನು ಉಪಯೋಗಿಸುವುದರಿಂದ ಅನುಕೂಲಗಳಿವೆ ನಿಜ. ಆದರೆ ಹಲ್ಲುಗಳು ಕಂದುಬಣ್ಣಕ್ಕೆ ತಿರುಗುವುದು, ಬಾಯಿ ಉರಿಯುವಿಕೆ, ರುಚಿಯಲ್ಲಿ ವ್ಯತ್ಯಾಸ, ರಾಸಾಯನಿಕಗಳಿಂದ ಅಲರ್ಜಿ – ಹೀಗೆ ಕೆಲವು ಅಡ್ಡಪರಿಣಾಮಗಳೂ ಎದುರಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಬಾಯಿಯ ಸ್ವಚ್ಛತೆಗೆ ಬ್ರಶಿಂಗ್ ಕಡ್ಡಾಯ. ಇದನ್ನು ನಿರ್ಲಕ್ಷಿಸಿದಾಗ ಬಾಯಿ, ಹಲ್ಲುಗಳು ಮತ್ತು ನಾಲಗೆಯಲ್ಲಿ ಕೊಳೆಯು ಸೇರಿ ಬಾಯಿಯಿಂದ ಕೆಟ್ಟ ವಾಸನೆ (ಹಾಲಿಟೋಸಿಸ್) ಹೊರಹೊಮ್ಮುತ್ತದೆ. ಇದನ್ನು ಹೋಗಲಾಡಿಸಲೆಂದೇ ಅನೇಕರು ಮೌತ್ ವಾಶ್‌ಗಳ ಮೊರೆ ಹೋಗುತ್ತಾರೆ. ಈ ದ್ರಾವಣಗಳಿಂದ ತಾತ್ಕಾಲಿಕವಾಗಿ ಕೆಟ್ಟ ವಾಸನೆ ಕಡಿಮೆಯಾಗಬಹುದು. ಆದರೆ ದುರ್ವಾಸನೆಯ ಮೂಲ ಸ್ವಚ್ಛತೆಯಲ್ಲಿಯ ಕೊರತೆಯ ಕಡೆಗೆ ಗಮನವನ್ನು ಕೊಡಬೇಕು. ಹಲ್ಲಿನಲ್ಲಿ ಗಾರೆ ಕಟ್ಟುವಿಕೆಯನ್ನೂ ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕು. ಕೇವಲ ಮೌತ್ ವಾಶ್‌ಗಳನ್ನಷ್ಟೆ ಬಳಸುವುದರಿಂದ ಮೂಲ ಸಮಸ್ಯೆ ಹಾಗೇ ಮುಂದುವರೆದು, ಹಲ್ಲುಗಳ ರೋಗ್ಯಕ್ಕೆ ಹಾನಿಯಾಗುತ್ತದೆ.