ನವದೆಹಲಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದೆ ಹೇಳಿದಂತೆ ಯಾವುದೇ ಹೊಸ ಯೋಜನೆಗಳ ಘೋಷಣೆ ಮಾಡಿಲ್ಲ.
.Budget 2024 Live Updates | ಆರ್ಥಿಕ ಸ್ಥಿತಿಗತಿ ಕುರಿತು ಸರ್ಕಾರದಿಂದ ಶ್ವೇತಪತ್ರ: ನಿರ್ಮಲಾ.
ಬಜೆಟ್ ಮುಖ್ಯಾಂಶಗಳು

* ಅರ್ಹ ಮಧ್ಯಮ ವರ್ಗದ ಜನರಿಗಾಗಿ ಮನೆ ಕೊಳ್ಳಲು ಅಥವಾ ಮನೆ ಕಟ್ಟಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಸತಿ ಯೋಜನೆ ಜಾರಿಗೆ ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

* ಮಧ್ಯಮ ವರ್ಗದವರಿಗೆ ಮನೆ: ಬಾಡಿಗೆ, ಸ್ಲಂ ಅಥವಾ ಅನಧಿಕೃತ ಕಾಲನಿಗಳಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದವರಿಗೆ ಮನೆ ಕಟ್ಟಲು ಅಥವಾ ಖರೀದಿಸಲು ನೆರವು

* ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ 'ಆಯುಷ್ಮಾನ್ ಭಾರತ': ನಿರ್ಮಲಾ

* ನಿರ್ಮಲಾ ಅವರು ಮಂಡಿಸುತ್ತಿರುವ ಆರನೇ ಬಜೆಟ್ ಇದಾಗಿದೆ. ಆ ಮೂಲಕ ಆರು ಬಾರಿ ಬಜೆಟ್ ಮಂಡಿಸಿರುವ ಮಾಜಿ ಪ್ರಧಾನಿ ದಿವಂಗತ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

* ಮೂರು ಪ್ರಮುಖ ಆರ್ಥಿಕ ಕಾರಿಡಾರ್ ಅನುಷ್ಠಾನ

ಖನಿಜ ಶಕ್ತಿ ಮತ್ತು ಸಿಮೆಂಟ್ ಕಾರಿಡಾರ್

ಅಧಿಕ ಸಂಚಾರ ಸಾಂದ್ರತೆಯ ಕಾರಿಡಾರ್

ಬಹು ಮಾದರಿ ಸಂಪರ್ಕ ಸಾಧ್ಯವಾಗಿಸುವ ಪಿಎಂ ಗತಿ ಶಕ್ತಿ ಕಾರಿಡಾರ್

* ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ, ನೇರ ಮತ್ತು ಪರೋಕ್ಷ ತೆರಿಗೆಗಳನ್ನು ಕೂಡ ಹಾಗೆಯೇ ಉಳಿಸಿಕೊಳ್ಳಲಾಗುತ್ತಿದೆ

* ತಂತ್ರಜ್ಞಾನ ಪ್ರಿಯ ಯುವ ಜನಾಂಗಕ್ಕೆ ಇದೊಂದು ಸುವರ್ಣ ಕಾಲ. 50 ವರ್ಷಗಳ ಬಡ್ಡಿರಹಿತ ಸಾಲ ನೀಡುವುದಕ್ಕಾಗಿ ₹1 ಲಕ್ಷ ಕೋಟಿ ನಿಧಿ ಸ್ಥಾಪನೆ. ಇದು ದೀರ್ಘಕಾಲಿಕ ಹಣಕಾಸು ನೆರವು ಅಥವಾ ತೀರಾ ಕಡಿಮೆ ಬಡ್ಡಿ ಅಥವಾ ಶೂನ್ಯ ಬಡ್ಡಿಯಲ್ಲಿ ಹೆಚ್ಚುವರಿ ಹಣಕಾಸು ನೆರವು

* 9ರಿಂದ 14 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ ಲಸಿಕೆ ಹಾಕಿಸಲು ಸರ್ಕರ ಉತ್ತೇಜನ ನೀಡಲಿದೆ.

* ತಿಂಗಳಿಗೆ 300 ಯೂನಿಟ್‌ಗಳವರೆಗೆ ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಅನ್ನು ಖಚಿತಪಡಿಸಲು ಛಾವಣಿಯಲ್ಲಿ ಸೋಲಾರ್ ವಿದ್ಯುತ್ ಪ್ಯಾನಲ್ ಅಳವಡಿಕ. ಇದಕ್ಕೆ ವಾರ್ಷಿಕವಾಗಿ ₹15,000-₹18,000 ಕೋಟಿ ವೆಚ್ಚವಾಗಲಿದೆ.
.'ಆಯುಷ್ಮಾನ್ ಭಾರತ' ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ವಿಸ್ತರಣೆ: ನಿರ್ಮಲಾ.ಅರ್ಹ ಮಧ್ಯಮ ವರ್ಗದವರಿಗಾಗಿ ವಸತಿ ಯೋಜನೆ: ನಿರ್ಮಲಾ ಸೀತಾರಾಮನ್.ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ: ನಿರ್ಮಲಾ ಸೀತಾರಾಮನ್.Union Budget: 59 ನಿಮಿಷಗಳಲ್ಲೇ ಬಜೆಟ್ ಭಾಷಣ ಮುಗಿಸಿದ ನಿರ್ಮಲಾ ಸೀತಾರಾಮನ್.Budget 2024 Live Updates | ಆರ್ಥಿಕ ಸ್ಥಿತಿಗತಿ ಕುರಿತು ಸರ್ಕಾರದಿಂದ ಶ್ವೇತಪತ್ರ: ನಿರ್ಮಲಾ.Budget 2024: ಆದಾಯ ತೆರಿಗೆ ಮಿತಿಯಲ್ಲಿ ಯಥಾಸ್ಥಿತಿ.ಬಡವರು,ಮಹಿಳೆಯರು,ಯುವಜನತೆ,ರೈತರು - ನಮ್ಮ ಸರ್ಕಾರದ ನಾಲ್ಕು ಜಾತಿಗಳು: ನಿರ್ಮಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.