ನೊಯ್ಡಾ: 121 ಮಂದಿಯ ಸಾವಿಗೆ ಕಾರಣವಾದ ಹಾಥರಸ್ ಕಾಲ್ತುಳಿತ ಪ್ರಕರಣದ ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈತನನ್ನು ಹಾಥರಸ್ ಪೊಲೀಸ್ನ ವಿಶೇಷ ಕಾರ್ಯಚರಣೆ ಪಡೆಯು ದೆಹಲಿಯ ನಜಾಫಗಡ ಪ್ರದೇಶದಿಂದ ಬಂಧಿಸಿತ್ತು. ಶುಕ್ರವಾರ ತಡರಾತ್ರಿ ಆತನ ಬಂಧನವಾಗಿತ್ತು.
.ಹಾಥರಸ್ ಕಾಲ್ತುಳಿತ | ಅವ್ಯವಸ್ಥೆ ಸೃಷ್ಟಿಸಿದವರನ್ನು ಬಿಡುವುದಿಲ್ಲ: ಭೋಲೆ ಬಾಬಾ.
‘ಸ್ವಘೋಷಿತ ದೇವಮಾನವ ಸೂರಜ್ಪಾಲ್ ಅಲಿಯಾಸ್ ನಾರಾಯಣ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ ಅವರ ಕಾರ್ಯಕ್ರಮದಲ್ಲಿ ದೇವಪ್ರಕಾಶ ನಿಧಿಸಂಗ್ರಹಗಾರನಾಗಿ ಕೆಲಸ ಮಾಡುತ್ತಿದ್ದ. ಆತನನ್ನು ಕಸ್ಟಡಿಗೆ ಪಡೆಯಲು ಮನವಿ ಮಾಡಲಾಗುವುದು’ ಎಂದು ಪೊಲೀಸ್ ವರಿಷ್ಠಾಧಿಕಾರಿ ನಿಪುನ್ ಅಗರ್ವಾಲ್ ಹೇಳಿದ್ದಾರೆ.

‘ಆತನ ಹಣಕಾಸಿನ ವ್ಯವಹಾರಗಳು ಹಾಗೂ ಕರೆ ದಾಖಲೆಗಳನ್ನು ತನಿಖೆ ನಡೆಸಲಾಗುವುದು’ ಎಂದು ಅವರು ಹೇಳಿದ್ದಾರೆ.
.Hathras stampede: 90ಕ್ಕೂ ಹೆಚ್ಚು ಹೇಳಿಕೆ ದಾಖಲಿಸಿದ ಎಸ್ಐಟಿ.
ಶುಕ್ರವಾರ ರಾತ್ರಿ ಮಧುಕರ್ ಶರಣಾಗಿದ್ದಾನೆ ಎಂದು ಅತನ ವಕೀಲರಾದ ಎ.ಪಿ ಸಿಂಗ್ ಹೇಳಿದ್ದರು.

ಶನಿವಾರ ಮಧ್ಯಾಹ್ನ ಸುಮಾರು 2.15ರ ವೇಳೆಗೆ ಬಾಗ್ಲಾದಲ್ಲಿರುವ ಹಾಥರಸ್ ಜಿಲ್ಲಾ ಆಸ್ಪತ್ರೆಗೆ ಮಧುಕರ್ನನ್ನು ಕರೆತರಲಾಯಿತು. ಆಸ್ಪತ್ರೆಯ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಇತ್ತು.

ಘಟನೆ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ದೇವಪ್ರಕಾಶ ಮುಖ್ಯಸೇವಾದಾರನಾಗಿದ್ದ. ಘಟನೆ ಸಂಬಂಧ ಸಿಂಕದರ್ ರಾವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ನಲ್ಲಿ ದಾಖಲಾಗಿದ್ದ ಏಕಮಾತ್ರ ಹೆಸರು ಈತನದ್ದು ಮಾತ್ರ.
.Hathras Stampede|‘ಸತ್ಸಂಗ’ ಆಯೋಜಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.