ಮುಂಬೈ: ಕ್ಯಾಬ್ ಸೇವೆ ಒದಗಿಸುತ್ತಿರುವ ‘ಊಬರ್’ ಸಂಸ್ಥೆಯೊಂದಿಗೆ ರಿಲಯನ್ಸ್ ಜಿಯೋ ಪಾಲುದಾರಿಕೆ ಘೋಷಿಸಿದೆ. ಈ ಮೂಲಕ ಊಬರ್ ಸೇವೆ ಪಡೆಯುವವರು ‘ಜಿಯೋಮನಿ’ ವಾಲೆಟ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ.

ಜಿಯೋಮನಿ ಆ್ಯಪ್ ಮೂಲಕ ಊಬರ್ ರೈಡ್ಗೆ ಹಣ ಪಾವತಿ ಮಾಡುವ ವ್ಯವಸ್ಥೆಯು ಎರಡೂ ಸೇವೆಗಳ ಆ್ಯಪ್ ಬಳಕೆದಾರರಿಗೆ ಅನುಕೂಲಕರವಾಗಲಿದೆ ಎಂದು ಊಬರ್ನ ಚೀಫ್ ಬಿಸಿನೆಸ್ ಆಫೀಸರ್ ಮಧು ಕಣ್ಣನ್ ಪ್ರಕಟಿಸಿದ್ದಾರೆ.

ಡಿಜಿಟಲ್ ವಾಲೆಟ್ ಜಿಯೋಮನಿ ಮೂಲಕ ಹಣ ಪಾವತಿಸುವ ಗ್ರಾಹಕರಿಗೆ ವಿಶಿಷ್ಟ ಕೊಡುಗೆಗಳೂ ಸಹ ಸಿಗಲಿವೆ.

ದೇಶದಲ್ಲಿ ಈಗಾಗಲೇ 16 ಕೋಟಿ ‘ಪೇಟಿಎಂ’ ವಾಲೆಟ್ ಬಳಕೆದಾರರಿದ್ದಾರೆ. ನೋಟು ಅಪಮೌಲ್ಯೀಕರಣದ ಬಳಿಕ ಡಿಜಿಟಲ್ ವಾಲೆಟ್ ಬಳಕೆದಾರರು ಹೆಚ್ಚಿದ್ದು, ಜಿಯೋ–ಊಬರ್ ಇನ್ನಷ್ಟು ಹೊಸ ಬಳಕೆದಾರರನ್ನು ಸೃಷ್ಟಿಸಲಿದೆಯೇ ಎಂಬುದು ಸದ್ಯದ ಕುತೂಹಲ.

ಪ್ರಸ್ತುತ 7.2 ಕೋಟಿ ಗ್ರಾಹಕರು ಜಿಯೋ ಸಿಮ್ ಬಳಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.