ಬೆಂಗಳೂರು: ಗಣಪತಿ ಶೋಭಾಯಾತ್ರೆ ವೇಳೆ ಮಂಡ್ಯದ ನಾಗಮಂಗಲದಲ್ಲಿ ನಡೆದ ಗಲಭೆ ಘಟನೆಯನ್ನು ಉಲ್ಲೇಖಿಸಿ ರಾಜ್ಯ ಬಿಜೆಪಿ ಘಟಕವು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.
.ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ಕಲ್ಲು ತೂರಾಟ; 52 ಜನರ ಬಂಧನ: ಜಿ. ಪರಮೇಶ್ವರ.
ಪ್ರೀತಿಯ ಅಂಗಡಿಯಲ್ಲಿ ಹಿಂದೂ ದ್ವೇಷವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಕಿಡಿಕಾರಿದೆ.

‘ಮೂಲಗಳ ಪ್ರಕಾರ, ದರ್ಗಾದ ಎದುರು ಗಣೇಶ ಶೋಭಾಯಾತ್ರೆ ತೆರಳುತ್ತಿದೆ ಎನ್ನುವ ಕಾರಣಕ್ಕಾಗಿ ಚಪ್ಪಲಿ, ಕಲ್ಲುಗಳನ್ನು ಎಸೆಯಲಾಗಿದೆ. ವಾಹನಗಳಿಗೆ, ಸಣ್ಣ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ’ ಎಂದು ಬಿಜೆಪಿ ಎಕ್ಸ್ನಲ್ಲಿ ಬರೆದುಕೊಂಡಿದೆ.
.ಮಂಡ್ಯ | ನಾಗಮಂಗಲ ಗಲಭೆ ಪ್ರಕರಣ: 54 ಆರೋಪಿಗಳ ಬಂಧನ.
‘ಹಗರಣಗಳ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ನಾಯಕ ಬಾಲಕ ಬುದ್ಧಿಯ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ತೆರೆದಿರುವ ಪ್ರೀತಿಯ ಅಂಗಡಿಯಲ್ಲಿ ಕೇವಲ ಹಿಂದೂಗಳ ವಿರುದ್ಧದ ದ್ವೇಷವನ್ನು ಮಾರಾಟ ಮಾಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದರ ಜೊತೆಗೆ ಅಸಮರ್ಥ ಗೃಹ ಸಚಿವ ಡಾ. ಪರಮೇಶ್ವರ ಅವರು ಈ ಹಿಂದೂ ವಿರೋಧಿ ಗಲಭೆಯನ್ನು ಸಣ್ಣ ಘಟನೆ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಟೀಕೆ ಮಾಡಿದೆ.
.ನಾಗಮಂಗಲ ಗಲಭೆ | ಹಿಂದೂ ಸಮುದಾಯವನ್ನು ಪ್ರಚೋದಿಸುವ ಕುಕೃತ್ಯ: ಬಿ.ವೈ.ವಿಜಯೇಂದ್ರ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.