ಢಾಕಾ: ನೋಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಮುಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ಬಂದಿಳಿದಿದ್ದಾರೆ.

‘ಯೂನುಸ್ ಅವರ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚಿಸಬೇಕೆಂದು ನಾವು ಬಯಸುತ್ತೇವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ, ಎಲ್ಲರನ್ನೂ ಸಮಾನವಾಗಿ ಕಾಣುವ ವ್ಯಕ್ತಿತ್ವದ ಯೂನಸ್ ಅವರು ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರರಾಗಬೇಕು’ ಎಂದು ‘ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿ’ಯ ಮುಖಂಡರು ಒತ್ತಾಯಿಸಿದ್ದರು.

ಇದನ್ನು ಒಪ್ಪಿಕೊಂಡಿರುವ ಅವರು ದೇಶಕ್ಕೆ ಬಂದಿಳಿದಿದ್ದಾರೆ. ‘ವಿದ್ಯಾರ್ಥಿಗಳು ದೇಶವನ್ನು ಉಳಿಸಿದ್ದಾರೆ. ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರನ್ನು ಹುದ್ದೆ ಮತ್ತು ದೇಶ ತೊರೆಯುವಂತೆ ಮಾಡಿದ್ದಾರೆ. ಈ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡು ಉಳಿಸಬೇಕಾಗಿದೆ’ ಎಂದಿದ್ದಾರೆ.

ಸಣ್ಣ ಸಾಲ ಪರಿಕಲ್ಪನೆಯ ಮೂಲಕ ವಿಶ್ವದಲ್ಲಿ ‘ಮೈಕ್ರೊ ಕ್ರೆಡಿಟ್’ ಮತ್ತು ‘ಮೈಕ್ರೊ ಫೈನಾನ್ಸ್’ ಎಂಬ ಆರ್ಥಿಕ ವ್ಯವಸ್ಥೆಗೆ ಬಲ ತಂದಿರುವ ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕಿನ ಸಂಸ್ಥಾಪಕ ಮುಹಮ್ಮದ್ ಯೂನಸ್, ‘ಬಡವರ ಬ್ಯಾಂಕರ್’ ಎಂದೇ ಗುರುತಿಸಿಕೊಂಡವರು.
.Bangladesh Unrest: ನಟ ಶಾಂತೊ ಖಾನ್, ನಿರ್ಮಾಪಕ ಸಲೀಮ್ ಖಾನ್ ಹತ್ಯೆ.Bangla Unrest | ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನಸ್ ನಾಳೆ ಪ್ರಮಾಣ ವಚನ.Bangla unrest: ಅವಾಮಿ ಲೀಗ್ ಪಕ್ಷದ 29 ನಾಯಕರ, ಕುಟುಂಬ ಸದಸ್ಯರ ಮೃತದೇಹ ಪತ್ತೆ.Bangla Unrest | ಹಸೀನಾಗೆ ಭಾರತದ ನೆರವು: ಕೇಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.