ಬೈರೂತ್ (ಲೆಬನಾನ್): ಹಿಜ್ಬುಲ್ಲಾ ಬಂಡುಕೋರರ ತಾಣವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ಬುಧವಾರವೂ ಲೆಬನಾನ್‌ನ ರಾಜಧಾನಿ ಬೈರೂತ್‌ನ ದಕ್ಷಿಣ ಭಾಗದಲ್ಲಿ ವೈಮಾನಿಕ ದಾಳಿಯನ್ನು ಮುಂದುವರಿಸಿದೆ.

ಬೈರೂತ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಿರಿಯ ಕಮಾಂಡರ್ ಇಬ್ರಾಹಿಂ ಖುಬೈಸಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಲೆಬನಾನ್‌ನ ಹಿಜ್ಬುಲ್ಲಾ ದೃಢಪಡಿಸಿದೆ. ಇಸ್ರೇಲ್ ದಾಳಿಯಲ್ಲಿ ಮಂಗಳವಾರ ಇಬ್ರಾಹಿಂ ಖುಬೈಸಿ ಸೇರಿ 15 ಮಂದಿ ಮೃತಪಟ್ಟಿದ್ದರು.

ಎರಡು ದಿನದ ವೈಮಾನಿಕ ದಾಳಿಯಲ್ಲಿ 50 ಮಕ್ಕಳು, 94 ಮಹಿಳೆಯರು ಸೇರಿದಂತೆ 558 ಜನರು ಮೃತಪಟ್ಟಿದ್ದು, 1,835 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವ ಫಿರಾಸ್ ಅಬಿಯಾದ್ ತಿಳಿಸಿದ್ದಾರೆ.

‘ಹಿಜ್ಬುಲ್ಲಾದ ಕ್ಷಿಪಣಿ ಮತ್ತು ರಾಕೆಟ್ ವಿಭಾಗದ ಕಮಾಂಡರ್ ಇಬ್ರಾಹಿಂ ಖುಬೈಸಿ ಅವರನ್ನು ಹತ್ಯೆ ಮಾಡಿದ್ದೇವೆ. ಇಸ್ರೇಲ್ ಮೇಲೆ ಹಿಜ್ಬುಲ್ಲಾ ನಡೆಸುತ್ತಿದ್ದ ಕ್ಷಿಪಣಿ ದಾಳಿಗೆ ಅವರು ಕಾರಣರಾಗಿದ್ದರು’ ಎಂದು ಇಸ್ರೇಲ್ ಸೇನೆ ತಿಳಿಸಿತ್ತು.

‘ಹಿಜ್ಬುಲ್ಲಾ ಬಂಡುಕೋರರನ್ನು ಲೆಬನಾನ್‌ನಿಂದ ಹೊರಹಾಕಲು ಇಸ್ರೇಲ್ ಎಲ್ಲ ಪ್ರಯತ್ನ ಮಾಡಲಿದೆ’ ಎಂದು ಸೇನಾ ವಕ್ತಾರ, ಡೇನಿಯಲ್ ಹಗರಿ ಹೇಳಿದ್ದಾರೆ.

‘ಲೆಬನಾನ್‌ನಲ್ಲಿ ಕಳೆದ 20 ವರ್ಷಗಳಿಂದ ಹಿಜ್ಬುಲ್ಲಾ ಬಂಡುಕೋರರನ್ನು ಏನು ಮಾಡಿದ್ದಾರೆ ಎಂಬುದನ್ನು ನಾವು ವಿವರಿಸಲು ಬಯಸುತ್ತೇವೆ. ದಕ್ಷಿಣ ಲೆಬನಾನ್‌ನಲ್ಲಿ ಸಾವಿರಾರು ನಾಗರಿಕ ಮನೆಗಳನ್ನು ಭಯೋತ್ಪಾದಕ ನೆಲೆಗಳಾಗಿ ಪರಿವರ್ತಿಸಿದ್ದರು. ಜತೆಗೆ, ಯುದ್ಧ ವಲಯವನ್ನಾಗಿ ಪರಿವರ್ತಿಸಿದ್ದರು’ ಎಂದು ಡೇನಿಯಲ್ ಹಗರಿ ವಾಗ್ದಾಳಿ ನಡೆಸಿದ್ದಾರೆ.
.ಲೆಬನಾನ್: ಸಾವಿನ ಸಂಖ್ಯೆ 558ಕ್ಕೆ ಏರಿಕೆ.ವಿಮಾನಗಳಲ್ಲಿ ಪೇಜರ್ ಬಳಕೆ ನಿಷೇಧಿಸಿದ ಲೆಬನಾನ್.ಇಸ್ರೇಲ್ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿ: ಲೆಬನಾನ್ ಮೇಲೆ ಇಸ್ರೇಲ್ ಪ್ರತಿ ದಾಳಿ.ಲೆಬನಾನ್: ಹಿಜ್ಬುಲ್ಲಾದ ಸಾವಿರಾರು ರಾಕೆಟ್ ಲಾಂಚರ್ಗಳನ್ನು ನಾಶಗೊಳಿಸಿದ ಇಸ್ರೇಲ್.ಇಸ್ರೇಲ್–ಹಿಜ್ಬುಲ್ಲಾ ನಡುವೆ ಉದ್ವಿಗ್ನತೆ: ಲೆಬನಾನ್ ತೊರೆಯಲು ಭಾರತೀಯರಿಗೆ ಸಲಹೆ.Photos| ಲೆಬೆನಾನ್ ರಾಜಧಾನಿ ಬೈರೂತ್ ಸ್ಫೋಟದ ಭೀಕರತೆ ವಿವರಿಸುವ ಚಿತ್ರಗಳು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.