ವಾಷಿಂಗ್ಟನ್: 2022ರ ಅಕ್ಟೋಬರ್ನಿಂದ 2023 ಸೆಪ್ಟೆಂಬರ್ ನಡುವೆ ಅಕ್ರಮವಾಗಿ ಗಡಿ ದಾಟುತ್ತಿದ್ದ 96,917 ಭಾರತೀಯರನ್ನು ಬಂಧಿಸಲಾಗಿದೆ ಎನ್ನುವ ಸಂಗತಿ ಅಮೆರಿಕದ ಸುಂಕ ಹಾಗೂ ಗಡಿ ಭದ್ರತಾ ದತ್ತಾಂಶದಿಂದ ಗೊತ್ತಾಗಿದೆ.

ಈ ಪೈಕಿ 30,010 ಮಂದಿಯನ್ನು ಕೆನಡಾದ ಗಡಿಯಲ್ಲಿ ಹಾಗೂ 41,770 ಮಂದಿಯನ್ನು ಮೆಕ್ಸಿಕೊದ ಗಡಿಯಲ್ಲಿ ಬಂಧಿಸಲಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಅಕ್ರಮವಾಗಿ ಗಡಿ ದಾಟುವಾಗ ಬಂಧನಕ್ಕೊಳಗಾದ ಭಾರತೀಯರ ಸಂಖ್ಯೆ 5 ಪಟ್ಟು ಹೆಚ್ಚಳವಾಗಿದೆ ಎಂದ ವರದಿಯಲ್ಲಿ ಹೇಳಲಾಗಿದೆ.

2019–20ರಲ್ಲಿ 19,883 ಭಾರತೀಯರು ಬಂಧಿತರಾಗಿದ್ದಾರೆ. 2020–21ರಲ್ಲಿ 30,662, 2021–22ರಲ್ಲಿ 63,927 ಭಾರತೀಯರ ಬಂಧನವಾಗಿದೆ.

ಬಂಧಿತರನ್ನು ಜತೆಗಾರರು ಇರುವ ಅಪ್ರಾಪ್ತರು, ಕುಟುಂಬದ ಗುಂಪಿನಲ್ಲಿದ್ದ ವ್ಯಕ್ತಿ, ವಯಸ್ಕರು ಹಾಗೂ ಜತೆಗಾರರು ಇಲ್ಲದ ಮಕ್ಕಳು ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಈ ಪೈಕಿ ವಯಸ್ಕರ ಸಂಖ್ಯೆಯೇ ಅಧಿಕ. 2023ರ ಆರ್ಥಿಕ ವರ್ಷದಲ್ಲಿ 84,000 ವಯಸ್ಕರು ಅಕ್ರಮವಾಗಿ ಗಡಿ ಪ್ರವೇಶ ಮಾಡಿದ್ದಾರೆ. 730 ಜತೆಗಾರರಿಲ್ಲದ ಅಪ್ರಾಪ್ತರನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.