ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

US Elections Results LIVE: ಗೆಲುವಿನ ಬಗ್ಗೆ ಡೊನಾಲ್ಡ್ ಟ್ರಂಪ್ ಮೊದಲ ಪ್ರತಿಕ್ರಿಯೆ
LIVE

Published : 6 ನವೆಂಬರ್ 2024, 4:28 IST
Last Updated : 6 ನವೆಂಬರ್ 2024, 10:13 IST
ಫಾಲೋ ಮಾಡಿ
10:1306 Nov 2024

ಟ್ರಂಪ್‌ ಗೆಲುವಿಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯ, ‘ಪರಸ್ಪರ ಗೌರವ, ಶಾಂತಿಯುತ ಸಹಬಾಳ್ವೆ ಮತ್ತು ಗೆಲವಿನ ಸಹಕಾರದೊಂದಿಗೆ ಚೀನಾ ಅಮೆರಿಕದೊಂದಿಗೆ ಕೆಲಸ ಮಾಡಲಿದೆ’ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

10:1206 Nov 2024

‘ಮಹದುದ್ದೇಶಕ್ಕಾಗಿಯೇ ದೇವರು ನನ್ನನ್ನು ಬದುಕುಳಿಸಿದ್ದಾರೆ. ಅಮೆರಿಕದ ಪಾಲಿಗೆ ಸುವರ್ಣ ಯುಗದ ಆರಂಭಕ್ಕಾಗಿ ಈ ಬಹುಮತ ಲಭಿಸಿದೆ’ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿನ ಸಮೀಪ ತಲುಪಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್‌ ಟ್ರಂಪ್‌ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ

09:5106 Nov 2024

ಟ್ರಂಪ್‌ಗೆ ಅಭಿನಂದಿಸಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ‘ಮೈತ್ರಿ, ಮೌಲ್ಯಗಳ ಜತೆಗೆ ಐತಿಹಾಸಿಕ ಸ್ನೇಹ ಹೊಂದಿರುವ ಇಟಲಿ ಮತ್ತು ಅಮೆರಿಕ ಸೋದರ ರಾಷ್ಟ್ರಗಳಾಗಿವೆ. ಈ ಕಾರ್ಯತಂತ್ರದ ಬಂಧವನ್ನು ಇನ್ನಷ್ಟು ಬಲಪಡಿಸಲಿದ್ದೇವೆ ಎನ್ನುವ ನಂಬಿಕೆಯಿದೆ ಎಂದು ಹೇಳಿದ್ದಾರೆ.

09:2706 Nov 2024

ಸಾಕಷ್ಟು ವಿರೋಧದ ನಡುವೆಯೂ ಎರಡನೇ ಬಾರಿ ಗೆದ್ದಿರುವ ಟ್ರಂಪ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ

09:2406 Nov 2024

ಡೊನಾಲ್ಡ್ ಟ್ರಂಪ್ ಅವರು ಎರಡೂ ಬಾರಿಯೂ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮಗೆ ಎದುರಾದ ಮಹಿಳೆಗೆ ಸೋಲಿನ ರುಚಿ ತೋರಿಸಿದ್ದಾರೆ. ಈ ಸಾರಿ ಕಮಲಾ ಟ್ರಂಪ್ ಎದುರು ಗೆಲ್ಲುವಲ್ಲಿ ವಿಫಲವಾದರೆ, 2017 ರಲ್ಲಿ ಹಿಲರಿ ಕ್ಲಿಂಟನ್ ಅವರು ಟ್ರಂಪ್ ಎದುರು ಸೋತು ಸುಣ್ಣವಾಗಿದ್ದರು.

09:1806 Nov 2024

ಡೊನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷ ಹುದ್ದೆಗೇರುತ್ತಿದ್ದಂತೆ ಭಾರತದ ಷೇರು ಮಾರುಕಟ್ಟೆ ಮತ್ತೆ ಪುಟಿದೆದ್ದಿದೆ. ಸೆನ್ಸೆಕ್ಷ್‌ 900 ಅಂಕಗಳ ಜಿಗಿತ ಕಂಡರೆ ನಿಫ್ಟಿ 24,450 ಗಡಿ ದಾಟಿದೆ.

09:1406 Nov 2024

ಡೊನಾಲ್ಡ್ ಟ್ರಂಪ್ ಗೆಲ್ಲುತ್ತಿದ್ದಂತೆಯೇ ಅಮೆರಿಕದ ಕಾಲೆಳದಿರುವ ರಷ್ಯಾ, ಇನ್ನಾದರೂ ಅಮೆರಿಕ ತನ್ನ ಪ್ರಜಾಪ್ರಭುತ್ವವನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದೆ. ಈ ಕುರಿತು ರಷ್ಯಾದ  ವಿದೇಶಾಂಗ ಇಲಾಖೆ ಪೋಸ್ಟ್ ಮಾಡಿದೆ.

09:0606 Nov 2024

ಎರಡನೇ ಬಾರಿಗೆ ಯುಎಸ್ ಅಧ್ಯಕ್ಷರಾಗುತ್ತಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಅನೇಕ ಜಾಗತಿಕ ನಾಯಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

09:0306 Nov 2024

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಡೊನಾಲ್ಡ್‌ ಟ್ರಂಪ್‌ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಅವರು ಅಭಿನಂದಿಸಿದ್ದಾರೆ.  ಟ್ರಂಪ್‌ ಗೆಲುವಿಗೆ ಅಭಿನಂದಿಸಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ಅಧ್ಯಕ್ಷೀಯ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಸ್ನೇಹಿತ ಟ್ರಂಪ್‌ ಅವರಿಗೆ ಅಭಿನಂದನೆಗಳು. ನಮ್ಮ ಜನರಿಗಾಗಿ, ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಸದೃಢತೆಗಾಗಿ ಒಟ್ಟಾಗಿ ಕೆಲಸ ಮಾಡೋಣ. ಭಾರತ ಮತ್ತು ಅಮೆರಿಕ ನಡುವಿನ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಎದುರು ನೋಡುತ್ತಿರುವುದಾಗಿ ಮೋದಿ ಹೇಳಿದ್ದಾರೆ.

06:3406 Nov 2024

'ಶೀಘ್ರದಲ್ಲೇ ಮುಕ್ತಿ'

ADVERTISEMENT
ADVERTISEMENT