ಬೊಮ್ಮನಹಳ್ಳಿ: ದೇಶದ ಮೊದಲ ಸ್ವದೇಶಿ ಮಾನವರಹಿತ ಎಫ್ಡಬ್ಲೂಡಿ-200ಬಿ ಏರ್ಕ್ರಾಫ್ಟ್ ಯುದ್ಧ ಬಾ೦ಬರ್ ಡ್ರೋನ್ ಅನ್ನು ಬೆಂಗಳೂರಿನಲ್ಲಿ ಶುಕ್ರವಾರ ಅನಾವರಣಗೊಳಿಸಲಾಗಿದೆ.

ಫ್ಲೈಯಿಂಗ್ ವೆಡ್ಜ್ ಕಂಪನಿಯು ವಿನ್ಯಾಸಗೊಳಿಸಿರುವ ಯುದ್ಧ ಬಾಂಬರ್ ಡ್ರೋನ್ ಯಂತ್ರವನ್ನು ಶುಕ್ರವಾರ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಯಿತು.

ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿಯ ಸಂಸ್ಥಾಪಕ ಸುಹಾಸ್ ತೇಜಸ್ಕಂದ ಮಾತನಾಡಿ, ‘ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ ತುಂಬುವ ಹಾಗೂ ದುಬಾರಿ ಮಾನವರಹಿತ ಬಾಂಬರ್ ವಿಮಾನಗಳಿಗಾಗಿ ಭಾರತವು ವಿದೇಶಗಳ ಮೇಲೆ ಅವಲಂಬಿತವಾಗುವುದನ್ನು ತಗ್ಗಿಸುವ ಉದ್ದೇಶದಿಂದ ಹಾಗೂ ಭಾರತವನ್ನು ಜಾಗತಿಕ ಮಟ್ಟದ ಡ್ರೋನ್ ಉತ್ಪಾದನಾ ಕೇಂದ್ರವನ್ನಾಗಿಸಲು ಕಂಪನಿ ಮುಂದಾಗಿದೆ’ ಎಂದರು.

‘ಕಳೆದ 15 ವರ್ಷಗಳಿಂದ ಮಾನವರಹಿತ ಬಾಂಬರ್ ಏರ್ಕ್ರಾಫ್ಟ್ಗಳನ್ನು ಹೊಂದುವ ಭಾರತದ ಕನಸು ಕನಸಾಗಿಯೇ ಉಳಿದಿತ್ತು. ಡಿಆರ್ಡಿಒದಲ್ಲಿ ಸಾಕಷ್ಟು ಬಂಡವಾಳ ಹೂಡಿ, ಸತತ ಪ್ರಯತ್ನಗಳನ್ನು ನಡೆಸಿದ ಮೇಲೂ ತಪಸ್ ಹಾಗೂ ರುಸ್ತೋಮ್ನಂತಹ ಯೋಜನೆಗಳು ವಿಫಲಗೊಂಡಿದ್ದವು. ಇಂದು ಎಫ್ಡಬ್ಲ್ಯುಡಿ-200ಬಿ ಬಾಂಬರ್ ಡ್ರೋನ್ ಅನಾವರಣದೊಂದಿಗೆ ಭಾರತದ ಸ್ವದೇಶಿ ಮಾನವರಹಿತ ಬಾಂಬರ್ ಕನಸು ನನಸಾಗಿದೆ. ಅಲ್ಲದೆ, ಭಾರತವು ಸುಧಾರಿತ ಬಾಂಬರ್ಗಳ ಸಾಮರ್ಥ್ಯವುಳ್ಳ ದೇಶಗಳ ಸಾಲಿಗೆ ಸೇರಿದೆ’ ಎ೦ದು ಹೇಳಿದರು.

ಅಮೆರಿಕದ ‘ಪ್ರಿಡೇಟರ್’ಗೆ ಬರೋಬ್ಬರಿ ₹250 ಕೋಟಿ ವೆಚ್ಚವಾದರೆ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹಾಗೂ ಭಾರತದಲ್ಲೇ ತಯಾರಾದ ಎಫ್ಡಬ್ಲ್ಯುಡಿ-200ಬಿ ಏರ್ಕ್ರಾಫ್ಟ್ಗೆ ಕೇವಲ ₹25 ಕೋಟಿ ವೆಚ್ಚವಾಗಲಿದೆ. ಇದು ಭಾರತವನ್ನು ಆತ್ಮನಿರ್ಭರ ಶಕ್ತಿಯನ್ನಾಗಿ ಹೊರಹೊಮ್ಮುವಂತೆ ಮಾಡುವುದರ ಜೊತೆಗೆ, ದೇಶದ ರಕ್ಷಣಾ ವೆಚ್ಚವನ್ನು ತಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ’ ಎಂದಿದ್ದಾರೆ.

100 ಕೆ.ಜಿ. ಪೇಲೋಡ್ ಹೊತ್ತೊಯ್ಯುವ ಸಾಮರ್ಥ್ಯ

ಸ್ವದೇಶಿ ಬಾಂಬರ್ ಏರ್ಕ್ರಾಫ್ಟ್ ಅನಾವರಣದ ವೇಳೆ ಅತಿಥಿಗಳಿಗೆ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಕಂಪನಿಯ ಅತ್ಯಾಧುನಿಕ ತಂತ್ರಜ್ಞಾನದ ಉತ್ಪಾದನಾ ಘಟಕದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಇದೇ ಘಟಕದಲ್ಲಿ ಎಫ್ಡಬ್ಲ್ಯುಡಿ-200ಬಿ ಬಾಂಬರ್ ಏರ್ಕ್ರಾಫ್ಟ್ ತಯಾರಾಗಿವೆ. ಈ ಬಾಂಬರ್ ಏರ್ಕ್ರಾಫ್ಟ್ 100 ಕೆ.ಜಿ. ಪೇಲೋಡ್ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಇದರಲ್ಲಿ ಆಫ್ಟಿಕಲ್ ಸರ್ವೇಲೆನ್ಸ್ ಪೇಲೋಡ್ಗಳನ್ನು ಹಾಗೂ ಕ್ಷಿಪಣಿ ರೀತಿಯಲ್ಲಿ ನಿಖರ ವಾಯುದಾಳಿ ನಡೆಸುವ, ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಹುದಾಗಿದೆ. ಎಫ್ಡಬ್ಬ್ಯುಡಿ-200ಬಿ ಏರ್ಕ್ರಾಫ್ಟ್ ಗರಿಷ್ಠ 200 ಕೆಟಿಎಸ್/370 ಕಿ.ಮೀ. (ಪ್ರತಿ ಗ0ಟೆ) ವೇಗದಲ್ಲಿ 12ರಿಂದ 20. ಇದು 498 ಕೆ.ಜಿ ತೂಕ ಹೊತ್ತು ಟೇಕಾಫ್ ಮಾಡಬಲ್ಲದು. ಅಲ್ಲದೆ, ಗ್ರೌಂಡ್ ಕಂಟ್ರೋಲ್ ಸ್ಟೇಶನ್ ಜೊತೆಗೆ (ಜಿಸಿಎಸ್) 200 ಕಿ.ಮೀ. ದೂರದವರೆಗೆ ಸಂಪರ್ಕ ಹೊಂದಿರುವ ಸಾಮರ್ಥ್ಯವನ್ನು ಹೊಂದಿದೆ.

ಸಂಸ್ಥೆಯ ಸಿಇಒ ಪ್ರಜ್ವಲ್ ಭಟ್, ಟೆಕ್ ನೋಡ್ ಕಂಪನಿಯ ಪ್ರಾದೇಶಿಕ ಕಾರ್ಯದರ್ಶಿ ಕೋಲ್ ಬಿ ರಾಣಿ, ಎಲ್ಸಿಟಾ ಮುಖ್ಯಸ್ಥೆ ರಮಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.