ಪಟ್ನಾ: ಬಿಹಾರದ ಜನತೆ ರಾಜ್ಯದಲ್ಲಿ ತಯಾರಾಗುವ ಉತ್ಪನ್ನಗಳನ್ನು ಮಾತ್ರ ಬಳಸಿ, ಹೊರರಾಜ್ಯಗಳ ಉತ್ಪನ್ನ ಬಳಕೆ ಕಡಿಮೆ ಮಾಡಿ ಎಂದು ಉದ್ಯಮ ಸಚಿವ ಸಮೀರ್ ಮಹಾಸೇತ್ ಹೇಳಿದ್ದಾರೆ.

ಹಾಜಿಪುರದಲ್ಲಿ ಆಹಾರ ಉತ್ಪನ್ನಗಳ ತಯಾರಿಕಾ ಘಟಕ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದ ಉತ್ಪನ್ನಗಳನ್ನೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿ ಎಂದು ಕರೆ ನೀಡಿದ್ದಾರೆ.

ರಾಜ್ಯದಲ್ಲೇ ತಯಾರಾಗುವ ಉತ್ಪನ್ನ ಖರೀದಿಯಿಂದ, ಜಿಎಸ್ಟಿ ಸಂಗ್ರಹಕ್ಕೂ ಪ್ರಯೋಜನ ದೊರೆಯಲಿದೆ. ಅಲ್ಲದೆ, ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲಿದೆ ಎಂದು ಸಚಿವರು ಹೇಳಿದ್ದಾರೆ.

ಎಎಪಿ ಒಡೆದರೆ ಪ್ರಕರಣ ರದ್ದು ಎಂಬ ಸಂದೇಶ ನನಗೆ ನೀಡಲಾಗಿತ್ತು: ಸಿಸೋಡಿಯಾ

ನಾವು ಹೊರರಾಜ್ಯಗಳಲ್ಲಿ ತಯಾರಾದ ಉತ್ಪನ್ನ ಖರೀದಿಸಿದರೆ, ಅದರ ಆದಾಯ ಅಲ್ಲಿನವರಿಗೆ ಹೋಗಲಿದೆ. ಅದರ ಬದಲು, ಇಲ್ಲಿನ ಉತ್ಪನ್ನ ಖರೀದಿಯಿಂದ, ರಾಜ್ಯಕ್ಕೆ ಆದಾಯ, ಜಿಎಸ್ಟಿ ಸಂಗ್ರಹವಾಗಲಿದೆ. ಇದರಿಂದ ಬಿಹಾರ ರಾಜ್ಯಕ್ಕೆ ಪ್ರಯೋಜನವಾಗುತ್ತದೆ ಎಂದು ಸಚಿವ ಸಮೀರ್ ತಿಳಿಸಿದ್ದಾರೆ.

ಪ್ರಧಾನಿ ಹುದ್ದೆಗೆ ನಿತೀಶ್ ಕುಮಾರ್ ಸೂಕ್ತ, ಆದರೆ ಅಕಾಂಕ್ಷಿಯಲ್ಲ: ಜೆಡಿಯು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.