ನವದೆಹಲಿ: ಹನುಮ ಜಯಂತಿಯ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟ ಘಟನೆಯ ಮಾಸ್ಟರ್‌ಮೈಂಡ್ ಅನ್ಸರ್‌ನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ವಾಯುವ್ಯ ಭಾಗದ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಶನಿವಾರ ನಡೆದ ದಾಂದಲೆ ಸಂಬಂಧ ಈವರೆಗೂ 14 ಜನರನ್ನು ಬಂಧಿಸಲಾಗಿದೆ.

ಮೂಲಗಳ ಪ್ರಕಾರ, ಬಂಧಿತ ಅನ್ಸರ್, ಸ್ಥಳೀಯ ನಿವಾಸಿಯಾಗಿದ್ದು, ಈತನೇ ಅಪರಾಧವೆಸಗಲು ಸಂಚು ರೂಪಿಸಿದ್ದ ಎನ್ನಲಾಗಿದೆ.

ಅನ್ಸರ್‌ನನ್ನು ನಾವು ವಿಚಾರಣೆಗೊಳಪಡಿಸಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಇತರರನ್ನು ಬಂಧಿಸುವ ವೇಳೆಯಲ್ಲಿಯೇ ಈತನನ್ನು ಬಂಧಿಸಲಾಗಿದೆ. ಆತನ ಮೊಬೈಲ್‌ನಲ್ಲಿನ ಮಾಹಿತಿಯನ್ನು ಪರಿಶೀಲಿಸುತ್ತಿದ್ದೇವೆ. ಸದ್ಯ ಈತನೇ ಪ್ರಧಾನ ಶಂಕಿತ. ಎರಡು ಮೆರವಣಿಗೆಗಳು ಶಾಂತಿಯಿಂದ ಸಾಗಿದವು. ಮೂರನೇ ಮೆರವಣಿಯನ್ನು ಅನ್ಸರ್ ಮತ್ತು ಆತನ ಆಪ್ತರು ತಡೆದಿದ್ದಾರೆ' ಎಂದು ತಿಳಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಮೊದಲಿಗೆ ಐವರನ್ನು ಬಂಧಿಸಿದ್ದರು. ಬಳಿಕ ಮತ್ತೆ ಐವರನ್ನು ಬಂಧಿಸಿದ್ದಾರೆ. ಎಫ್‌ಐಆರ್‌ನಲ್ಲಿ ಅನ್ಸರ್ ಹೆಸರು ನಮೂದಾಗಿದೆ.

ಇದನ್ನೂ ಓದಿ:ದೆಹಲಿ: ಹನುಮ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ– 14 ಜನರ ಬಂಧನ

ಮೆರವಣಿಗೆಯನ್ನು ತಡೆಯಲು ಮತ್ತು ಕಲ್ಲು ತೂರಾಟ ನಡೆಸಲು ಅನ್ಸರ್ ಜನರನ್ನು ಕೆರಳಿಸಿದ್ದ. ಅವರೆಲ್ಲರೂ ಮೊದಲೇ ಯೋಜನೆ ರೂಪಿಸಿದ್ದರು. ಇದಕ್ಕೆ ಅನ್ಸರ್ ನೇತೃತ್ವ ವಹಿಸಿದ್ದ ಎಂಬುದು ನಮ್ಮ ತನಿಖೆಯಿಂದ ಬಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಲ್ಲು ತೂರಾಟ ನಡೆಸಿದ ವ್ಯಕ್ತಿಗಳು ಅಂಗಡಿಯೊಂದರಲ್ಲಿ ದರೋಡೆ ಮಾಡಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.