ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಾರುಣ್ಯದಲ್ಲಿರುವ ಕಪ್ಪು ಬಿಳುಪು ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅವರ ಕೈಯಲ್ಲಿ ಸಿಗರೇಟ್ ಇದೆ. ಅದನ್ನು ಸಾವಿರಾರು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ‘ಇದನ್ನು ಪತ್ತೆ ಹಚ್ಚಿದವರಿಗೆ 8500 ಖಟಾಖಟ್ ಟಕಾ ಟಕ್’ ಎನ್ನುವ ಅಡಿಬರಹದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಚಿತ್ರದ ಕೆಳಗೆ ಎಡಭಾಗದಲ್ಲಿ ‘ರಿಮಾರ್ಕರ್’ ಎನ್ನುವ ವಾಟರ್ ಮಾರ್ಕ್ ಇದೆ. ಅದನ್ನು ಗೂಗಲ್ ಸರ್ಚ್ ಮಾಡಿದಾಗ, ‘ರಿಮಾರ್ಕರ್’ ಎನ್ನುವುದು ಒಂದು ಎಐ ಕ್ರಿಯೇಟಿವ್ ಕಂಟೆಂಟ್ ಜನರೇಟರ್ ಎನ್ನುವುದು ತಿಳಿಯಿತು. ಸೋನಿಯಾ ಅವರದ್ದು ಎನ್ನಲಾದ ಚಿತ್ರವನ್ನು ನಾವು ರಿವರ್ಸ್ ಇಮೇಜ್ ಸರ್ಚ್ಗೆ ಒಳಪಡಿಸಿದಾಗ, ಅದು ‘ಟಂಬ್ಲ’ (tumblr) ಎನ್ನುವ ಮೈಕ್ರೋಬ್ಲಾಗಿಂಗ್ ವೆಬ್ಸೈಟ್ನಲ್ಲಿ 2013ರಲ್ಲಿ ಪ್ರಕಟವಾಗಿದ್ದ ಚಿತ್ರ ಎನ್ನುವುದು ತಿಳಿಯಿತು. ಆ ಚಿತ್ರದಲ್ಲಿದ್ದ ಮಹಿಳೆಯ ಮುಖದ ಜಾಗದಲ್ಲಿ ಸೋನಿಯಾ ಅವರ ಮುಖವನ್ನು ಹಾಕಿ ಎಐ ಮೂಲಕ ಸೃಷ್ಟಿಸಲಾಗಿದ್ದ ಚಿತ್ರ ಅದು ಎನ್ನುವುದು ತಿಳಿಯಿತು. ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.