ಚಲಾವಣೆಯಲ್ಲಿರುವ ರೂಪಾಯಿ ನೋಟುಗಳ ಮೇಲೆ ಯಾವುದೇ ರೀತಿಯ ಬರಹ ಇದ್ದರೆ, ಆ ನೋಟು ಚಲಾವಣೆಗೆ ಯೋಗ್ಯವಲ್ಲ ಎಂದು ತಿಳಿಸುವ ಸಂದೇಶವೊಂದು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿದೆ. ನೋಟುಗಳ ಮೇಲೆ ಅಕ್ಷರಗಳು ಅಥವಾ ಸಂಖ್ಯೆಯನ್ನು ಬರೆಯುವುದನ್ನು ಕೆಲವರು ರೂಢಿ ಮಾಡಿಕೊಂಡಿದ್ದಾರೆ. ‘ನೋಟುಗಳ ಮೇಲೆ ಯಾವುದೇ ರೀತಿಯ ಬರಹ ಕಂಡುಬಂದರೂ ಅದು ತನ್ನ ಮೌಲ್ಯವನ್ನು ಕಳೆದುಕೊಳ್ಳಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ’ ಎಂಬುದಾಗಿ ಸಂದೇಶದಲ್ಲಿ ಹೇಳಲಾಗಿದೆ. ಆದರೆ ಇದು ಸುಳ್ಳು ಸಂದೇಶ.

ಬರಹ ಇರುವ ನೋಟುಗಳನ್ನು ರಿಸರ್ವ್ ಬ್ಯಾಂಕ್ ಅಮಾನ್ಯ ಮಾಡಲಿದೆ ಎಂಬ ಸಂದೇಶ ಸುಳ್ಳು ಎಂದು ಪಿಐಬಿ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ಬರಹ ಇರುವ ನೋಟುಗಳು ಚಲಾವಣೆಗೆ ಯೋಗ್ಯವಾಗಿವೆ. ಜನರು ನೋಟುಗಳ ಮೇಲೆ ಏನನ್ನೂ ಬರೆಯಬಾರದು ಎಂದು ಆರ್ಬಿಐ ಮನವಿ ಮಾಡಿದೆ. ಸ್ವಚ್ಛ ನೋಟು ನೀತಿಯ ಪ್ರಕಾರ, ನೋಟುಗಳ ಮೇಲೆ ಬರೆಯುವುದರಿಂದ ಅವು ವಿರೂಪಗೊಳ್ಳುತ್ತವೆ ಹಾಗೂ ಅವುಗಳ ಆಯಸ್ಸು ಕಡಿಮೆಯಾಗುತ್ತದೆ. ಹೀಗಾಗಿ ಜನರು ನೋಟುಗಳ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.