ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭವಿಷ್ಯದ ಪ್ರಧಾನಿಯಾಗಿ ನೋಡುತ್ತಿದ್ದೇನೆ. ಪಕ್ಷ ಅಧಿಕಾರಕ್ಕೆ ಬಂದಾಗ ಪ್ರಧಾನಿ ಹುದ್ದೆಯನ್ನು ಅಲಂಕರಿಸುವ ಅರ್ಹತೆಯನ್ನು ಅವರು ಹೊಂದಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.

ರಾಹುಲ್ ಅವರು ಏನು ಹೇಳುತ್ತಾರೋ ಅದು ಸರಿಯಾಗಿಯೇ ಇರುತ್ತದೆ. ಏನು ಸರಿ ಇದೆಯೋ ಅದನ್ನೇ ಅವರು ಹೇಳುತ್ತಾರೆ ಎಂದು ರಾಹುಲ್ ಗಾಂಧಿ ಅವರನ್ನು ಸಿಂಘ್ವಿ ಮುಕ್ತಕಂಠದಿಂದ ಶ್ಲಾಘಿಸಿದರು.

ರಾಹುಲ್ ಗಾಂಧಿಯನ್ನು ಭವಿಷ್ಯದ ಪ್ರಧಾನಿಯಾಗಿ ನೋಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಘ್ವಿ, 'ನನ್ನ ಅಭಿಪ್ರಾಯ ಬಿಡಿ. ಬಿಜೆಪಿ ಸ್ನೇಹಿತರನ್ನು ಕೇಳಿ. ಮೊದಲೆಲ್ಲಾ ಇವರು ಟ್ರೋಲ್ ಮಾಡಿದ್ದನ್ನು ನೀವು ನೋಡಿದ್ದೀರಿ. ಇಂದು ಒಲ್ಲದ ಮನಸ್ಸಿನಿಂದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದರೆ ಬಿಜೆಪಿ ಅವರು ಪ್ರಾಮಾಣಿಕ, ನೇರ, ರಾಜಕೀಯ ಪರಿಕಲ್ಪನೆ ಇರುವ, ಉತ್ತಮ ವಾಕ್ಚಾತುರ್ಯ ಇರುವ ವ್ಯಕ್ತಿಯನ್ನು ಸಾರ್ವಜನಿಕವಾಗಿ ದೂಷಿಸುತ್ತಿದ್ದರು. ಈಗ ಬಿಜೆಪಿಗರಿಗೆ ವಾಸ್ತವ ಅರಿವಾಗಿದೆ. ಜನರೂ ಅರಿತುಕೊಳ್ಳುತ್ತಿದ್ದಾರೆ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.