ನವದೆಹಲಿ: ರಾಜಪಥದಲ್ಲಿ ನಡೆದ 72ನೇ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾರತ ಮತ್ತು ಬಾಂಗ್ಲಾ ಸೇನಾಪಡೆಗಳು ಒಟ್ಟಿಗೆ ಭಾಗವಹಿಸಿ ಗಮನ ಸೆಳೆದವು.

ಹೌದು, 1971ರಲ್ಲಿ ನಡೆದ ಯುದ್ಧದಲ್ಲಿ ಭಾರತವು ಪಾಕಿಸ್ತಾನವನ್ನು ಸದೆಬಡಿದಿತ್ತು. ಇದೇ ದಿನದಂದು ಬಾಂಗ್ಲಾದೇಶ ಕೂಡ ರಚನೆಯಾಯಿತು.

ಈ ಯುದ್ಧದ 50ನೇ ವಾರ್ಷಿಕೋತ್ಸವ ಜ್ಞಾಪಕಾರ್ಥವಾಗಿ ಭಾರತ ಮತ್ತು ಬಾಂಗ್ಲಾ ಸೇನಾಪಡೆಗಳು ಒಟ್ಟಿಗೆ ಪಥಸಂಚಲನದಲ್ಲಿ ಭಾಗವಹಿಸಿವೆ.

ಇದನ್ನೂ ಓದಿ... ಗೂಗಲ್ನ ಗಣರಾಜ್ಯೋತ್ಸವದ ಡೂಡಲ್ನಲ್ಲಿ ಭಾರತದ ವರ್ಣರಂಜಿತ ಪರಂಪರೆ

1971ರ ಮಾರ್ಚ್ 25ರ ಮಧ್ಯರಾತ್ರಿ ಆಗಿನ ಪೂರ್ವ ಪಾಕಿಸ್ತಾನದ (ಈಗ ಬಾಂಗ್ಲಾದೇಶ) ಮೇಲೆ ಪಾಕಿಸ್ತಾನದ ಪಡೆಗಳು ಹಠಾತ್ ದಾಳಿ ಮಾಡಿದವು. ಕೊನೆಗೆ ಅದೇ ವರ್ಷದ ಡಿಸೆಂಬರ್ 16ರಂದು ಪಾಕಿಸ್ತಾನ ಸೋಲನ್ನು ಒಪ್ಪಿಕೊಂಡು ಶರಣಾಗಿತ್ತು. 9 ತಿಂಗಳ ಕಾಲ ನಡೆದ ಈ ಯುದ್ಧದಲ್ಲಿ 30 ಲಕ್ಷ ಜನರು ಹತರಾಗಿದ್ದರು.

ಈ ಯುದ್ಧದಲ್ಲಿ ಭಾರತ ವಿಜಯಿಯಾದ ನೆನಪಿಗಾಗಿ ಡಿಸೆಂಬರ್ 16 ಅನ್ನು ‘ವಿಜಯ್ ದಿವಾಸ್’ ಎಂದೂ, ಇದರ 50ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.