ಬೆಂಗಳೂರು:ರೈಲ್ವೆ ಟಿಕೆಟ್ಗಳನ್ನು ಅಕ್ರಮವಾಗಿ ಇ-ಬುಕಿಂಗ್ ಮಾಡುತ್ತಿದ್ದ ಅತ್ಯಂತ ಬೃಹತ್ ಜಾಲವೊಂದನ್ನು ರೈಲ್ವೆ ಭದ್ರತಾ ಪಡೆ (ಆರ್ಪಿಎಫ್) ಬಯಲಿಗೆಳಿದಿದ್ದು, ಬೆಂಗಳೂರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಈ ಜಾಲಕ್ಕೆ ಭಯೋತ್ಪಾದನೆ ನಂಟು ಇರುವ ಬಗ್ಗೆಯೂ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಜಾಲ ಹೇಗೆ ಕಾರ್ಯ ನಿರ್ವಹಿಸುತ್ತದೆ?

ರೈಲ್ವೆಟಿಕೆಟ್ಅಕ್ರಮ ಬುಕಿಂಗ್ ಜಾಲದ ಬೆನ್ನಟ್ಟಿದ್ದ ಆರ್ಪಿಎಫ್ ಕರ್ನಾಟಕ ಪೊಲೀಸರ ತಂಡಕಳೆದ ಅಕ್ಟೋಬರ್ನಲ್ಲಿ ಬೆಂಗಳೂರಿನ ಹನುಮಂತರಾಜು ಎಂಬಾತನನ್ನು ಬಂಧಿಸಿತ್ತು. ಈ ಜಾಲದ ಬಗ್ಗೆ ಇನ್ನಷ್ಟು ತನಿಖೆ ಚುರುಕುಗೊಳಿಸಿದ ಆರ್ಪಿಎಫ್, ಚಾರ್ಖಂಡ್ ಮೂಲದ ಸಾಫ್ಟ್ವೇರ್ ಡೆವಲಪರ್ ಗುಲಾಂ ಮುಸ್ತಫಾ ಎಂಬುವವನನ್ನು ಒಡಿಶಾದ ಭುವನೇಶ್ವರದಲ್ಲಿ ಬಂಧಿಸಿದೆ.

ಮುಸ್ತಫಾ 2015ರಲ್ಲಿ ಬೆಂಗಳೂರಿನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ನಂತರ, 2017ರಲ್ಲಿ ಇ-ಟಿಕೆಟ್ ಬುಕಿಂಗ್ಗಾಗಿ ಭಾರತೀಯ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ನಿಂದ (ಐಆರ್ಸಿಟಿಸಿ) ಏಜೆಂಟ್ ಐಡಿ ಪಡೆದಿದ್ದ. ನಂತರ ಅವನೇ ಸಾಕಷ್ಟು ನಕಲಿ ಐಡಿಗಳನ್ನು ಸೃಷ್ಟಿಸಿಕೊಂಡಿದ್ದ. ನಂತರ ಐಆರ್ಸಿಟಿಸಿ ವೆಬ್ಸೈಟ್ ಹ್ಯಾಕ್ ಮಾಡಿ ಆತನೇ ಒಂದು ಬುಕಿಂಗ್ ಸಾಫ್ಟ್ವೇರ್ ಅಭಿವೃದ್ಧಿ ಪಡಿಸಿದ್ದ.

ಈ ಅಕ್ರಮ ಸಾಫ್ಟ್ವೇರ್ನಿಂದ ಈತಐಆರ್ಸಿಟಿಸಿ ಲಾಗ್ಇನ್ ಕೋಡ್ (ಕ್ಯಾಪ್ಚ–CAPTCHA), ಬುಕಿಂಗ್ ಕೋಡ್ ಮತ್ತು ಬ್ಯಾಂಕ್ ಒಟಿಪಿಗಳಿಲ್ಲದೆ ಟಿಕೆಟ್ ಬುಕ್ ಮಾಡುತ್ತಿದ್ದನು.

ಅಸಲಿ ಐಆರ್ಸಿಟಿಸಿ ಸಾಫ್ಟ್ವೇರ್ನಲ್ಲಿ 1 ಟಿಕೆಟ್ ಬುಕಿಂಗ್ಗೆ 2.55 ನಿಮಿಷ ತೆಗೆದುಕೊಳ್ಳುತ್ತದೆ. ಅದೇ ಕಾನೂನು ಬಾಹಿರವಾಗಿ ಸಿದ್ಧಪಡಿಸಿಕೊಂಡಿದ್ದ ಈಸಾಫ್ಟ್ವೇರ್ನಲ್ಲಿ 1.48 ನಿಮಿಷಕ್ಕೆಲ್ಲ ಟಿಕೆಟ್ ಬುಕ್ ಆಗುತ್ತಿತ್ತು. ಜೊತೆಗೆ ಏಕಕಾಲಕ್ಕೆ ಹಲವಾರು ಟಿಕೆಟ್ ಬುಕ್ ಮಾಡಬಹುದಿತ್ತು. ಇದು ಐಆರ್ಸಿಟಿಸಿ ಸಾಫ್ಟ್ವೇರ್ನಲ್ಲಿ ಸಾಧ್ಯವಿಲ್ಲ.

ದುಬೈನಲ್ಲಿ ತಾಂತ್ರಿಕ ತಂಡ

ಈ ಜಾಲದ ಮಾಸ್ಟರ್ ಮೈಂಡ್ ಹಮೀದ್ ಅಶ್ರಫ್ ದುಬೈನಲ್ಲಿ ತಲೆಮರೆಸಿಕೊಂಡಿದ್ದು, ಆತನ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.2019ರಲ್ಲಿ ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿನ ಶಾಲೆಯೊಂದರ ಬಾಂಬ್ ಸ್ಫೋಟ ಪ್ರಕರಣದಲ್ಲೂ ಭಾಗಿಯಾಗಿರುವ ಈತ ತಿಂಗಳಿಗೆ ಇದರಿಂದ ₹10 ಕೋಟಿಯಿಂದ ₹15 ಕೋಟಿ ಹಣ ಮಾಡುತ್ತಿದ್ದಾನೆ’ ಎಂದು ರೈಲ್ವೆ ಭದ್ರತಾ ಪಡೆ ಪ್ರಧಾನ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದರು.

‘ಈತನ ಬಳಿಕ್ಲೌಡ್ ಸರ್ವರ್ನಿರ್ವಹಿಸುವುದಕ್ಕಾಗಿಯೇತಾಂತ್ರಿಕ ತಂಡವೊಂದಿದೆ ಎಂದು ಪೊಲೀಸರುಶಂಕೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ 18 ರಿಂದ 20 ಮಂದಿ ಈ ಜಾಲದ ಕಿಂಗ್ಪಿನ್ಗಳಿದ್ದು, ಹಣಕಾಸು ನಿರ್ವಹಣೆ,ಹವಾಲ ಖಾತೆಗಳು ಹಾಗೂ ಕ್ರಿಪ್ಟೊಕರೆನ್ಸಿ ಮೂಲಕ ಅಶ್ರಫ್ಗೆಹಣ ಕಳುಹಿಸುತ್ತಾರೆ’ಎಂದು ವಿವರಿಸಿದರು.

‘ಸುಮಾರು 200ರಿಂದ 300 ಸಾಫ್ಟ್ವೇರ್ ಮಾರಾಟಗಾರರು ಈ ಜಾಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖ ಡೆವೆಲಪರ್ಗಳಿಂದ ಸಾಫ್ಟ್ವೇರ್ ಅನ್ನು ಖರೀದಿಸಿ ಅದನ್ನು ಏಜೆಂಟ್ಗಳಿಗೆ ಕಳುಹಿಸುವ ಕೆಲಸ ಮಾಡುತ್ತಾರೆ.

‘20 ಐಡಿಗಳನ್ನು ಬಳಸಬಲ್ಲಸಾಫ್ಟ್ವೇರ್ಗೆಪ್ರತಿ ತಿಂಗಳು ₹ 28 ಸಾವಿರ ಕೊಟ್ಟು ಖರೀದಿಸುತ್ತಿದ್ದರು. ಹೀಗೆ ಖರೀದಿಸಿದಸಾಫ್ಟ್ವೇರ್ ಅನ್ನು ತಮ್ಮ ಏಜೆಂಟ್ಗಳಿಗೆ ಕಳುಹಿಸುತ್ತಿದ್ದರು. ದೇಶದಾದ್ಯಂತ ಸುಮಾರು 20 ಸಾವಿರ ಏಜೆಂಟ್ಗಳು ಈ ನಕಲಿ ಸಾಫ್ಟ್ವೇರ್ ಬಳಸಿ ಟಿಕೆಟ್ ಬುಕ್ ಮಾಡುತ್ತಿದ್ದರು. ಅದರಿಂದ ಪ್ರತಿ ತಿಂಗಳು ₹10 ಕೋಟಿಯಿಂದ ₹15 ಕೋಟಿವರೆಗೆ ಕಪ್ಪುಹಣ ಗಳಿಸುತ್ತಿದ್ದರು’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.