ನವದೆಹಲಿ:ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ ವೇಳೆ ಹವಾಮಾನ ವೈಪರೀತ್ಯದಿಂದ ಮುಂದೆ ಹೊಗಲಾಗದೆ ಉತ್ತರಾಖಂಡದ ಗುಂಜ್ನಲ್ಲಿದ್ದ ಯಾತ್ರಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ ಹೇಳಿದ್ದಾರೆ.

ಹವಾಮಾನ ವ್ಯತ್ಯಯದಿಂದಾಗಿ ಗುಂಜ್ನಲ್ಲಿ ಬೀಡುಬಿಟ್ಟಿದ್ದ ಯಾತ್ರಾರ್ಥಿಗಳನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ನಲ್ಲಿ ಪಿಥೌರ್ಗಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸುಷ್ಮಾ ಸ್ವಾರಾಜ್ ಅವರು ಟ್ವೀಟ್ ಮಾಡಿದ್ದಾರೆ.

ಈ ವಿಷಯ ತಿಳಿಸಲು ನನಗೆ ಸಂತಸವಾಗುತ್ತಿದೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದ ಬಳಿಕ ಯಾತ್ರೆ ಮುಂದುವರೆಯಲಿದೆ ಎಂದು ಅವರು ಹೇಳಿದ್ದಾರೆ.

ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ 115 ಯಾತ್ರಾರ್ಥಿಗಳು ಹವಾಮಾನ ವೈಪರೀತ್ಯದಿಂದ ಗುಂಜ್ನಲ್ಲಿ ಉಳಿದಿದ್ದರು. ಇಂಡೊ ಟಿಬೆಟ್ ಬಾರ್ಡರ್ ಪೋರ್ಸ್(ಐಟಿಬಿಪಿ) ಮತ್ತು ಕುಮಾನ್ ವಿಕಾಸ್ ಮಂಡಲ್ ಯಾತ್ರಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಪಿಥೌರ್ಗಡಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸುಷ್ಮಾ ಸ್ವರಾಜ್ ಅವರು ಸೋಮವಾರ ಟ್ವಿಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.