ನವದೆಹಲಿ: ಉತ್ತರ ಪ್ರದೇಶದ ಶ್ರೀಕೃಷ್ಣ ಜನ್ಮಭೂಮಿ–ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದಂತೆ ಮಸೀದಿ ಸ್ಥಳವನ್ನು ಶ್ರೀಕೃಷ್ಣ ಜನ್ಮಭೂಮಿ ಎಂದು ಗುರುತಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಪಿ. ದಿವಾಕರ್ ಮತ್ತು ನ್ಯಾಯಧೀಶರಾದ ಅಶುತೋಷ್ ಶ್ರೀವಾಸ್ತವ ಅವರಿದ್ದ ವಿಭಾಗೀಯ ಪೀಠ ಶಾಹಿ ಈದ್ಗಾ ಮಸೀದಿ ಸ್ಥಳವನ್ನು ಶ್ರೀಕೃಷ್ಣ ಜನ್ಮಭೂಮಿ ಎಂದು ಗುರುತಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

ಅರ್ಜಿದಾರರ ವಕೀಲ ಮೆಹೆಕ್ ಮಹೇಶ್ವರಿ ವಿವಾದಿತ ಸ್ಥಳವಾದ ಶಾಹಿ ಈದ್ಗಾ ಮಸೀದಿ ಶ್ರೀಕೃಷ್ಣನ ನಿಜವಾದ ಜನ್ಮಸ್ಥಳವಾಗಿದೆ. ಮಥುರಾದ ಇತಿಹಾಸ ರಾಮಾಯಣ ಕಾಲದ ಹಿಂದಿನದಾಗಿದೆ. ಆದರೆ ಇಸ್ಲಾಂ ಕೇವಲ 1,500 ವರ್ಷಗಳ ಹಿಂದಿನದು ಎಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ ಎಂದು ಅವರು ವಾದ ಮಂಡಿಸಿದ್ದರು.

ಮಸೀದಿ ಸ್ಥಳ ಈ ಹಿಂದೆ ದೇಚಾಲಯವಾಗಿತ್ತು. ಆ ಸ್ಥಳದಲ್ಲಿ ಈಗಲೂ ದೇವಾಲಯದ ಕುರುಹುಗಳಿವೆ ಎಂದು ಮೆಹೆಕ್ ಮಹೇಶ್ವರಿ ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.