ನವದೆಹಲಿ: ಮಹಾರಾಷ್ಟ್ರದ ಚುನಾವಣಾ ಪ್ರಚಾರ ಸಭೆ ರದ್ದುಗೊಳಿಸಿ ಭಾನುವಾರ ಬೆಳಿಗ್ಗೆ ರಾಜಧಾನಿಗೆ ವಾಪಸಾದ, ಗೃಹ ಸಚಿವ ಅಮಿತ್ ಶಾ, ಹಿಂಸಾಚಾರ ಪೀಡಿತ ಮಣಿಪುರದ ಪರಿಸ್ಥಿತಿ, ಭದ್ರತಾ ವ್ಯವಸ್ಥೆ ಕುರಿತು ಸಭೆ ನಡೆಸಿದರು.

ಹಿರಿಯ ಅಧಿಕಾರಿಗಳಿಂದ ವಸ್ತುಸ್ಥಿತಿ ವಿವರ ಪಡೆದ ಅವರು ಈಶಾನ್ಯ ರಾಜ್ಯದಲ್ಲಿ ಶಾಂತಿಯುತ ವಾತಾವರಣ ಸ್ಥಾಪಿಸಲು ಕೈಗೊಳ್ಳಬೇಕಿರುವ ಕ್ರಮಗಳನ್ನು ಕುರಿತು ಚರ್ಚಿಸಿದರು.

ಹಿರಿಯ ಭದ್ರತಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ಸಚಿವರು ಮಣಿಪುರದ ವಸ್ತುಸ್ಥಿತಿ ಪರಿಶೀಲಿಸಿದರು ಎಂದು ಮೂಲಗಳು ದೃಢಪಡಿಸಿವೆ.

ಜನಾಂಗೀಯ ಘರ್ಷಣೆಯಿಂದ ಒಂದು ವರ್ಷದಿಂದ ತತ್ತರಿಸಿರುವ ಮಣಿಪುರದಲ್ಲಿ ಈಚೆಗೆ ಬುಡಕಟ್ಟು ಉಗ್ರರು ನಡೆಸಿದ ದಾಳಿಯಿಂದ ಮೂವರು ಮಹಿಳೆಯರು, ಒಬ್ಬ ಬಾಲಕ ಸೇರಿ ಆರು ಜನರು ಮೃತಪಟ್ಟಿದ್ದರು. ಇದರ ಹಿಂದೆಯೇ ಐದು ಜಿಲ್ಲೆಗಳಲ್ಲಿ ಹಿಂಸೆ ಹೆಚ್ಚಿದ್ದು, ಉದ್ವಿಗ್ವಸ್ಥಿತಿ ಮೂಡಿದೆ.
.ಎಎಫ್ಎಸ್ಪಿಎ ಹಿಂಪಡೆಯಲು ಕೇಂದ್ರಕ್ಕೆ ಮಣಿಪುರ ಸರ್ಕಾರ ಮನವಿ.ಮಣಿಪುರ ಮತ್ತೆ ಉದ್ವಿಗ್ನ: ಮನೆಗಳು, ವಾಹನಗಳಿಗೆ ಬೆಂಕಿ ಹಚ್ಚಿದ 23 ಮಂದಿ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.