ಮುಂಬೈ: ಬಾಲಿವುಡ್ ಬಾದ್ಷಾ ಅಮಿತಾಬ್ ಬಚ್ಚನ್ ಅವರು ಉತ್ತರಪ್ರದೇಶದ 1398 ರೈತರ ಸಾಲವನ್ನು ತೀರಿಸುವುದರ ಮೂಲಕ ರೈತರ ಬದುಕಿಗೆ ನೆರವಾಗಿದ್ದಾರೆ.

ರೈತರ ಸಾಲದ ಒಟ್ಟು ಮೊತ್ತ ₹4 ಕೋಟಿ ಆಗಿದ್ದು, ಬ್ಯಾಂಕ್ ಆಫ್ ಇಂಡಿಯಾಕ್ಕೆ ಒಂದೇ ಕಂತಿನಲ್ಲಿ ಪಾವತಿಸಿದ್ದಾರೆ. ಇದಕ್ಕೂ ಮೊದಲು ಮಹಾರಾಷ್ಟ್ರದ 350 ರೈತರಿಗೆ ಸಹಾಯ ಮಾಡಿದ್ದರು.

ಅಲ್ಲದೇ 70 ರೈತರಿಗೆ ಮುಂಬೈಗೆ ಬಂದು ಸಾಲಮರುಪಾವತಿ ಪತ್ರಗಳನ್ನು ಪಡೆದುಕೊಳ್ಳುವಂತೆ ಹೇಳಿದ್ದಾರೆ ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.

ಸಾಲದ ಹೊರೆಯಿಂದ ಬಳಲುತ್ತಿರುವ ರೈತರಿಗೆ ಸಹಾಯ ಮಾಡಿರುವುದು ಖುಷಿ ತಂದಿದೆ. ಈ ಹಿಂದೆ ಮಹಾರಾಷ್ಟ್ರದ 70 ರೈತರಿಗೆ ನೆರವು ನೀಡಿದ್ದೆ. ಇದೀಗ ಉತ್ತರ ಪ್ರದೇಶದ 1398 ರೈತರ ಸಾಲವನ್ನು ತೀರಿಸಿದ್ದೇನೆ. ಈ ಕಾರ್ಯ ಸಂಪೂರ್ಣಗೊಂಡ ಬಳಿಕ ಮನಸ್ಸಿಗೆ ನೆಮ್ಮದಿ ಎನಿಸಿದೆ ಎಂದು ತಮ್ಮ ಬ್ಲಾಗ್ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.