ನವದೆಹಲಿ: ಜೆಸಿಬಿ, ಬುಲ್ಡೋಜರ್ ಹಾಗೂ ಇನ್ನಿತರ ಯಂತ್ರಗಳನ್ನು ಬಳಸಿ ಮುಸ್ಲಿಮರ ಮನೆ, ಉದ್ಯಮ ಹಾಗೂ ಆರಾಧನ ಸ್ಥಳಗಳನ್ನು ಅಕ್ರಮವಾಗಿ ಧ್ವಂಸ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಟರ್ನ್ಯಾಶನಲ್ ಭಾರತವನ್ನು ಆಗ್ರಹಿಸಿದೆ.

‘ನೀವು ಮಾತನಾಡಿದರೆ, ನಿಮ್ಮ ಮನೆಯನ್ನು ಕೆಡವಲಾಗುತ್ತದೆ: ಭಾರತದಲ್ಲಿ ಬುಲ್ಡೋಜರ್ ಅನ್ಯಾಯ ಮತ್ತು ಹೊಣೆಗಾರಿಕೆಯನ್ನು ಬೆಳಕಿಗೆ ತರುವುದು’ ಹಾಗೂ ‘ಭಾರತದಲ್ಲಿ ಬುಲ್ಡೋಜರ್ ಅನ್ಯಾಯದಲ್ಲಿ ಜೆಸಿಬಿ ಪಾತ್ರ ಮತ್ತು ಜವಾಬ್ದಾರಿ’ ಎನ್ನುವ ಎರಡು ವರದಿಗಳನ್ನು ಆಮ್ನೆಸ್ಟಿ ಪ್ರಟಕಟಿಸಿದೆ.
.ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ‘ಆಮ್ನೆಸ್ಟಿ’.
ಕನಿಷ್ಠ 5 ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ‘ದ್ವಂಸ ಶಿಕ್ಷೆ’ಯ ಮೂಲಕ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷದ ಪ್ರಚಾರದಲ್ಲಿ, ಜೆಸಿಬಿ, ಬುಲ್ಡೋಜರ್ಗಳನ್ನು ಬಳಸುತ್ತಿದೆ ಎಂದು ಅದು ಹೇಳಿದೆ.

ಕಾನೂನು ಬಾಹಿರವಾಗಿ ಜನರ ಮನೆಗಳ ಕೆಡವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದ್ದು, ಬಲವಂತದ ಒಕ್ಕಲೆಬ್ಬಿಸುವುವಿಕೆಯಿಂದ ಯಾರನ್ನೂ ನಿರಾಶ್ರಿತರನ್ನಾಗಿ ಮಾಡಬಾರದು ಎಂದು ಹೇಳಿದೆ.
.ಬ್ಯಾಂಕ್ ಖಾತೆಗಳು ನಿಷ್ಕ್ರಿಯ, ದೇಶದಲ್ಲಿ ಕಾರ್ಯಾಚರಣೆ ಸ್ಥಗಿತ: ಆಮ್ನೆಸ್ಟಿ .
ಇಂತಹ ಧ್ವಂಸಗಳ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಈ ಉಲ್ಲಂಘನೆಗೆ ಕಾರಣವಾದವರನ್ನು ಜವಾಬ್ದಾರರನ್ನಾಗಿ ಮಾಡಬೇಕು ಎಂದು ಆಮ್ನೆಸ್ಟಿ ಒತ್ತಾಯಿಸಿದೆ.

ರಾಜಕೀಯ ನಾಯಕರು ಮತ್ತು ಮಾಧ್ಯಮಗಳಿಂದ 'ಬುಲ್ಡೋಜರ್ ನ್ಯಾಯ' ಎಂಬಂತೆ ಭಾರತೀಯ ಅಧಿಕಾರಿಗಳು, ಮುಸ್ಲಿಮರ ಆಸ್ತಿಗಳನ್ನು ಕಾನೂನುಬಾಹಿರವಾಗಿ ಕೆಡವಿರುವುದು ಕ್ರೂರ ಮತ್ತು ಭಯಾನಕ. ಅಂತಹ ಕ್ರಮ ತೀವ್ರ ಅನ್ಯಾಯಕಾರಿಯಾಗಿದೆ. ಕಾನೂನುಬಾಹಿರ ಮತ್ತು ತಾರತಮ್ಯವಾಗಿದೆ. ಅವರು ಕುಟುಂಬಗಳನ್ನು ನಾಶಪಡಿಸುತ್ತಿದ್ದಾರೆ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಮ್ನೆಸ್ಟಿ ಇಂಟರ್ನ್ಯಾಶನಲ್ನ ಪ್ರಧಾನ ಕಾರ್ಯದರ್ಶಿ ಆಗ್ನೆಸ್ ಕ್ಯಾಲಮರ್ಡ್ ಹೇಳಿದರು.
.ಗ್ರೆಟ್ಟಾ ಥುನ್ಬರ್ಗ್ಗೆ ಆಮ್ನೆಸ್ಟಿ ಪ್ರಶಸ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.