ಅವರಾವತಿ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ವೈಎಸ್ಆರ್ಸಿಪಿ ವರಿಷ್ಠ ಜಗನ್ ಮೋಹನ್ ರೆಡ್ಡಿ ಅವರನ್ನು ಕೊಲಂಬಿಯಾದ ಡ್ರಗ್ಸ್ ದೊರೆ ಪ್ಯಾಬ್ಲೊ ಎಸ್ಕೊಬಾರ್ಗೆ ಹೋಲಿಸಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಟೀಕಿಸಿದ್ದಾರೆ.

ಜಗನ್ ಅವಧಿಯಲ್ಲಿ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಮಾದಕ ವಸ್ತುಗಳ ಸರಬರಾಜು ನಡೆಯುತ್ತಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ.

ಈ ಕುರಿತಂತೆ ಶ್ವೇತಪತ್ರ ಬಿಡುಗಡೆ ಮಾಡಿದ ನಾಯ್ಡು, ಆಂಧ್ರ ಪ್ರದೇಶದಲ್ಲಿ ಅಂತಹ ಸ್ಥಿತಿಯನ್ನು ನಾನು ಎಂದೂ ನೋಡಿರಲಿಲ್ಲ. ವೈಎಸ್ಆರ್ಸಿಪಿ ವರಿಷ್ಠರ ಆಡಳಿತಾವಧಿ ಅಷ್ಟು ಕೆಟ್ಟದಾಗಿತ್ತು ಎಂದಿದ್ದಾರೆ.

‘ಆಂಧ್ರದಲ್ಲಿ ಆ ವ್ಯಕ್ತಿ ಯಾವ ರೀತಿಯ ಆಡಳಿತ ನಡೆಸಿದ್ದಾರೆಂದರೆ, ಅವರನ್ನು ಪ್ಯಾಬ್ಲೊ ಎಸ್ಕೊಬಾರ್ಗೆ ಹೋಲಿಸಬಹುದು’ ಎಂದು ವಿಧಾನಸಭೆಯಲ್ಲಿ ನಾಯ್ಡು ಹೇಳಿದ್ದಾರೆ.

ಎಸ್ಕೊಬಾರ್ ಒಬ್ಬ ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ಕುಖ್ಯಾತ ವ್ಯಕ್ತಿಯಾಗಿದ್ದು, ನೂರಾರು ಕೋಟಿ ಡಾಲರ್ ಬೆಲೆಯ ಮಾದಕ ವಸುವನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಮತ್ತು ತನ್ನನ್ನು ವಿರೋಧಿಸಿದ ರಾಜಕಾರಣಿಗಳು ಹಾಗೂ ನಾಯಕರನ್ನು ಕೊಲ್ಲುತ್ತಿದ್ದ ಎಂದು ನಾಯ್ಡು ಹೇಳಿದ್ದಾರೆ.

ಎಸ್ಕೊಬಾರ್ ಅನ್ನು ‘ಮಾದಕ ವಸ್ತುಗಳ ಭಯೋತ್ಪಾದಕ’ ಎಂದು ಕರೆದ ನಾಯ್ಡು, ಅಂತಹದ್ದೇ ಪರಿಸ್ಥಿತಿ ಹಿಂದಿನ ವೈಎಸ್ಆರ್ಸಿಪಿ ಆಡಳಿತದಲ್ಲಿತ್ತು. ಎಲ್ಲೆಂದರಲ್ಲಿ ಸುಲಭವಾಗಿ ಗಾಂಜಾ ಸಿಗುತ್ತಿತ್ತು ಎಂದಿದ್ದಾರೆ.

2019 ಮತ್ತು 2024ರ ನಡುವೆ ಆಂಧ್ರವು ಗಾಂಜಾ ರಾಜಧಾನಿಯಾಗಿತ್ತು ಎಂದೂ ಆರೋಪಿಸಿದ್ದಾರೆ.
.ದೆಹಲಿಯಲ್ಲಿ ಜಗನ್ ಪ್ರತಿಭಟನೆಗೆ ‘ಇಂಡಿಯಾ’ ನಾಯಕರ ಬೆಂಬಲ: ಡ್ರಾಮಾ ಎಂದ ಟಿಡಿಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.