ನವದೆಹಲಿ: ವಾಯುಪಡೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ‘ಅಪಾಚೆ’ ಮತ್ತು ‘ಚಿನೂಕ್’ ಹೆಲಿಕಾಪ್ಟರ್ಗಳು ಈ ಬಾರಿಯ ಗಣರಾಜ್ಯೋತ್ಸವದ ಪಥ ಸಂಚಲನದ ಪ್ರಮುಖ ಆಕರ್ಷಣೆಯಾಗಲಿವೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.

‘ಅಪಾಚೆ’ ಅತ್ಯಾಧುನಿಕ ಬಹುಪಯೋಗಿ ಯುದ್ಧ ಹೆಲಿಕಾಪ್ಟರ್ ಆಗಿದ್ದು, ದಾಳಿ ಹೆಲಿಕಾಪ್ಟರ್ಗಳಲ್ಲಿಯೇ ಶಕ್ತಶಾಲಿಯಾಗಿದೆ. ‘ಚಿನೂಕ್’ ಅತಿ ಭಾರದ ಸರಕು, ಶಸ್ತ್ರಾಸ್ತ್ರಗಳನ್ನು ಒಯ್ಯುವ ಭಾರಿ ಹೆಲಿಕಾಪ್ಟರ್ ಆಗಿದೆ. ಇತ್ತೀಚೆಗೆ ಸೇರ್ಪಡೆಗೊಂಡಿರುವ ಈ ಹೆಲಿಕಾಪ್ಟರ್ಗಳು ವಾಯುಪಡೆಗೆ ಬಲತುಂಬಿವೆ ಎಂದು ಹಿರಿಯ ಐಎಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರದರ್ಶನದಲ್ಲಿ ಒಟ್ಟು 45 ವಿಮಾನಗಳ ಭಾಗವಹಿಸಲಿವೆ. 16 ಫೈಟರ್ ಜೆಟ್, 10 ಸಾರಿಗೆ ವಿಮಾನ ಹಾಗೂ 19 ಹೆಲಿಕಾಪ್ಟರ್ಗಳು ಹಾರಾಟ ನಡೆಸಲಿವೆ. ಎಲ್ಲಾ ವಿಮಾನಗಳು ರಾಷ್ಟ್ರಪತಿ ಭವನ ಕಡೆಯಿಂದ ಹಾರಾಟ ನಡೆಸಲಿದ್ದು, ನೆಲದ ಮಟ್ಟಕ್ಕಿಂತ 60 ಮೀಟರ್ ನಿಂದ 300 ಮೀಟರ್ ಎತ್ತರದಲ್ಲಿ ಇಂಡಿಯಾ ಗೇಟ್ ಕಡೆಗೆ ನಿರ್ಗಮಿಸಲಿವೆ ಎಂದು ಐಎಎಫ್ ವಕ್ತಾರರು ತಿಳಿಸಿದ್ದಾರೆ.

ಸೇನೆಗೆ ಸೇರ್ಪಡೆಯಾಗಿರುವ ಚಿನೂಕ್ ಹೆಲಿಕಾಪ್ಟರ್ಗಳು –ಪಿಟಿಐ ಚಿತ್ರ

ಹಾರಾಟ ನಡೆಸಲಿವೆ ವಿಶೇಷ ವಿಮಾನಗಳು
ಪ್ರದರ್ಶನದಲ್ಲಿ ಸುಖೋಯ್-30 ಮತ್ತು ಮಿಗ್–27 ಯುದ್ಧ ವಿಮಾನಗಳು, ಸಿ -17 ಗ್ಲೋಬ್ಮಾಸ್ಟರ್, 3 ಹೆವಿ ಲಿಫ್ಟರ್ಗಳು, ಸಿ -130 ಜೆ ಸೂಪರ್ ಹರ್ಕ್ಯುಲಸ್ ವಿಶೇಷ ಕಾರ್ಯಾಚರಣೆ ವಿಮಾನ, ಮಿ -17 ವಿ 5 ಹೆಲಿಕಾಪ್ಟರ್ಗಳು, ರುಧ್ರ ಸುಧಾರಿತ ಲಹೆಲಿಕಾಪ್ಟರ್ (ಎಎಲ್ಹೆಚ್) ಎಂಕೆ ಐವಿ ಡಬ್ಲ್ಯುಎಸ್ಐ, ಮತ್ತು ವಾಯುಪಡೆಯ 'ಎಎಲ್ಎಚ್-ಎಂಕೆ 3 (ಧ್ರುವ್)' ವಿಮಾನಗಳು ಹಾರಾಟ ನಡೆಸಲಿವೆ.

2019ರ ಜುಲೈನಲ್ಲಿ ಭಾರತೀಯ ವಾಯುಪಡೆಗೆ ಸೇಪರ್ಡೆಗೊಂಡಿರುವ ಅಮೆರಿಕದ ರಕ್ಷಣಾ ಉಪಕರಣ ಉತ್ಪಾದನಾ ಸಂಸ್ಥೆ ಬೋಯಿಂಗ್ ನಿರ್ಮಿಸಿರುವ ನಾಲ್ಕು 'ಅಪಾಚೆ' ಹೆಲಿಕಾಪ್ಟರ್ಗಳು, ಅತೀ ಭಾರ ಹೊರುವ 'ಚಿನೂಕ್' ಹೆಲಿಕಾಪ್ಟರ್ ಹಾರಾಟ ಈ ಬಾರಿ ಪೆರೇಡ್ನವಿಶೇಷ ಆಕರ್ಷಣೆಯಾಗಲಿವೆಎಂದು ಅಧಿಕಾರಿಗಳು ಹೇಳಿದ್ದಾರೆ.

22 ಹೆಲಿಕಾಪ್ಟರ್ ಖರೀದಿಗೆ ಬೋಯಿಂಗ್ ಹಾಗೂ ಅಮೆರಿಕ ಸರ್ಕಾರದ ಜೊತೆ ಸೆಪ್ಟೆಂಬರ್ 2015ರಲ್ಲಿ ಭಾರತ ವಾಯುಪಡೆ ಸಹಿ ಹಾಕಿತ್ತು. ಇದರ ಜೊತೆಗೆ 2017ರಲ್ಲಿ ರಕ್ಷಣಾ ಸಚಿವಾಲಯವು ಶಸ್ತ್ರಾಸ್ತ್ರ ವ್ಯವಸ್ಥೆ ಹೊಂದಿರುವ ₹4,168 ಕೋಟಿ ಮೊತ್ತದ 6 ಅಪಾಚೆ ಹೆಲಿಕಾಪ್ಟರ್ ಖರೀದಿಗೆ ಅನುಮೋದನೆ ನೀಡಿತ್ತು.

ಸದ್ಯ ಫ್ರಾನ್ಸ್ನಿಂದಭಾರತ ಖರೀದಿಸುತ್ತಿರುವ 36 ರಫೇಲ್ ಯುದ್ಧ ವಿಮಾನಗಳಲ್ಲಿ ಒಂದು ವಿಮಾನವನ್ನು ಮಾತ್ರ ಹಸ್ತಾಂತರಿಸಿದೆ. ಆದರೆ, ಮೊದಲ ಹಂತದಲ್ಲಿ ನೀಡಲಾಗುವ ನಾಲ್ಕು ವಿಮಾನಗಳು 2020ರ ಮೇ ತಿಂಗಳಲ್ಲಿ ಭಾರತಕ್ಕೆ ಬರುವ ನಿರೀಕ್ಷೆ ಇದೆ.

ಭಾರತಕ್ಕೆ ಹಸ್ತಾಂತರಗೊಂಡಿರುವ ರಫೇಲ್ ಯುದ್ಧ ವಿಮಾನ –ಪಿಟಿಐ ಚಿತ್ರ

ಇದನ್ನೂ ಓದಿ...ಗಣರಾಜ್ಯೋತ್ಸವದ ಪರೇಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.