ನವದೆಹಲಿ: ಭಾರತದ ವಿವಿಧ ವಿಮಾನಯಾನ ಸಂಸ್ಥೆಗಳ ಸುಮಾರು 50 ವಿಮಾನಗಳಿಗೆ ಬಾಂಬ್ ಬೆದರಿಕೆಯ ಹುಸಿ ಕರೆಗಳು ಭಾನುವಾರ ಬಂದಿವೆ ಎಂದು ಮೂಲಗಳು ತಿಳಿಸಿವೆ.

ಕಳೆದ 14 ದಿನಗಳಲ್ಲಿ ವಿವಿಧ ವಿಮಾನಯಾನ ಸಂಸ್ಥೆಗಳ 350 ವಿಮಾನಗಳಿಗೆ ಇಂತಹ ಕರೆ, ಸಂದೇಶಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಂದಿವೆ.

‘15 ವಿಮಾನಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಸಂದೇಶ ಬಂದಿತ್ತು. ಪರಿಶೀಲಿಸಿದಾಗ, ಅದು ಹುಸಿ ಎಂದು ತಿಳಿಯಿತು’ ಎಂದು ಅಕಾಸಾ ಏರ್ ಸಂಸ್ಥೆಯು ತಿಳಿಸಿದೆ.

ಇಂಡಿಗೊ ಸಂಸ್ಥೆಯ 18 ಮತ್ತು ವಿಸ್ತಾರಾ ಸಂಸ್ಥೆಯ 17ವಿಮಾನಗಳಿಗೆ ಇಂತಹ ಕರೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.

ಹುಸಿ ಸಂದೇಶಗಳನ್ನು ಕಳುಹಿಸುತ್ತಿರುವವರನ್ನು ಗುರುತಿಸಿ ನಿಗದಿತ ಅವಧಿಯೊಳಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಖಾತೆಗಳನ್ನು ಸ್ಥಗಿತಗೊಳಿಸಬೇಕು ಎಂದು ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿದೆ.

ಈ ಮಧ್ಯೆ, ಹುಸಿ ಬಾಂಬ್ ಕರೆಗಳ ಪಿಡುಗಿಗೆ ಕಡಿವಾಣ ಹಾಕಲು ಶಾಸನಾತ್ಮಕ ಕ್ರಮ ಜರುಗಿಸುವ ಕುರಿತು ಕೇಂದ್ರ ವಿಮಾನಯಾನ ಸಚಿವಾಲಯ ಚಿಂತನೆ ನಡೆಸುತ್ತಿದೆ.
.ಲಖನೌದ 10 ಪ್ರತಿಷ್ಠಿತ ಹೋಟೆಲ್ಗಳಿಗೆ ಬಾಂಬ್ ಬೆದರಿಕೆ .Bomb Threats: ಮತ್ತೆ 25ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ.ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಮೂಲ ಪತ್ತೆಯಾಗಲಿ, ಸಮಸ್ಯೆ ಕೊನೆಗೊಳ್ಳಲಿ.ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ | ನೋ–ಫ್ಲೈ ಪಟ್ಟಿಗೆ ಸರ್ಕಾರ ಚಿಂತನೆ: ನಾಯ್ಡು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.