ನವದೆಹಲಿ: ಬಿಹಾರ ಸರ್ಕಾರ ಮದ್ಯಪಾನ ನಿಷೇಧ ನೀತಿ ಜಾರಿಗೊಳಿಸಿದ್ದರಿಂದ ರಾಜ್ಯದಲ್ಲಿ ಸಾಕಷ್ಟು ಧನಾತ್ಮಕ ಪರಿಣಾಮಗಳು ಉಂಟಾಗಿವೆ ಎಂದು ನಿಯತಕಾಲಿಕೆಯೊಂದು ಸಂಶೋಧನಾ ವರದಿ ಪ್ರಕಟಿಸಿದೆ.

'ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್ ಸೌತ್‌ಈಸ್ಟ್ ಏಷಿಯಾ' ನಿಯತಕಾಲಿಕೆಯು, 'ನೆರೆಯ ರಾಜ್ಯಗಳಿಗೆ ಹೋಲಿಸಿದರೆ, ನಿತ್ಯವೂ ಹಾಗೂ ವಾರಕ್ಕೊಮ್ಮೆ ಮದ್ಯ ಸೇವನೆ ಮಾಡುವ ಸುಮಾರು 24 ಲಕ್ಷ ಪ್ರಕರಣಗಳು ಬಿಹಾರದಲ್ಲಿ ನಿಂತಿವೆ. ಸಹವರ್ತಿಗಳಿಂದಲೇ ಆಗುತ್ತಿದ್ದ ಸುಮಾರು 21 ಲಕ್ಷದಷ್ಟು ಹಿಂಸಾಕೃತ್ಯಗಳಿಗೆ ಕಡಿವಾಣ ಬಿದ್ದಿದೆ. ಇಷ್ಟೇ ಅಲ್ಲ, ಅಂದಾಜು 18 ಲಕ್ಷ ಮಂದಿ ಅತಿತೂಕ ಅಥವಾ ಬೊಜ್ಜು ಸಮಸ್ಯೆಯಿಂದ ಬಳಲುವುದೂ ತಪ್ಪಿದೆ' ಎಂದು ಉಲ್ಲೇಖಿಸಿದೆ.

ಬಿಹಾರ ಸರ್ಕಾರ 2016ರ ಏಪ್ರಿಲ್‌ನಲ್ಲಿ, ರಾಜ್ಯದಾದ್ಯಂತ ಮದ್ಯ ತಯಾರಿಕೆ, ಸಾಗಣೆ, ಮಾರಾಟ ಹಾಗೂ ಸೇವನೆಯನ್ನು ನಿಷೇಧಿಸಿತ್ತು. ಇದಾದ ಬಳಿಕ ಜನರ ಆರೋಗ್ಯದಲ್ಲಿಯೂ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಈ ಕ್ರಮವು ದೇಶದ ಇತರ ರಾಜ್ಯಗಳಲ್ಲಿಯೂ ಮದ್ಯ ನಿಷೇಧ ಕುರಿತು ಆಲೋಚಿಸುವಂತೆ ಮಾಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

'ರಾತ್ರೋರಾತ್ರಿ ಮದ್ಯ ನಿಷೇಧ ನೀತಿಯನ್ನು ಪ್ರಾಯೋಗಿಕ ಜಾರಿಗೊಳಿಸುವುದು ಉತ್ತಮವೆಂದು ನಮ್ಮ ಅಧ್ಯಯನದ ಮೂಲಕ ಶಿಫಾರಸು ಮಾಡದಿದ್ದರೂ, ಮದ್ಯ ಸೇವಿಸದಿರುವುದು ಜನರ ಆರೋಗ್ಯಕ್ಕೆ ಉತ್ತಮ ಎಂಬುದನ್ನು ಸಾರುವ ಸಾಕಷ್ಟು ವಿಚಾರಗಳನ್ನು ಕಂಡುಕೊಂಡಿದ್ದೇವೆ. ಮದ್ಯ ಸೇವನೆ ನಿಯಂತ್ರಣಕ್ಕೆ ಕಠಿಣ ನೀತಿಗಳನ್ನು ರೂಪಿಸುವುದು ಪ್ರಯೋಜನಕಾರಿಯಾಗಲಿದೆ. ಇವು, ನಿರಂತರವಾಗಿ ಮದ್ಯ ಸೇವಿಸುವವರ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ, ಕೌಟುಂಬಿಕ ಕಲಹಗಳನ್ನು ತಪ್ಪಿಸಲಿವೆ' ಎಂದು ಹೇಳಿದ್ದಾರೆ.
.ವಾಣಿಜ್ಯ ಚಟುವಟಿಕೆಗೆ ಅಡ್ಡಿ ಎಂದು ರಸ್ತೆ ಬದಿಯ ಮರ ಕಡಿಯುವಂತಿಲ್ಲ: ಕೇರಳ ಕೋರ್ಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.