ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಹಾರ: RJD ಅವಧಿಯಲ್ಲಿ ನೀಡಿದ್ದ ₹826 ಕೋಟಿ ಮೊತ್ತದ 350 ಗುತ್ತಿಗೆಗಳು ರದ್ದು

Published : 25 ಜೂನ್ 2024, 5:47 IST
Last Updated : 25 ಜೂನ್ 2024, 5:47 IST
ಫಾಲೋ ಮಾಡಿ
Comments

ಪಟ್ನಾ: ಬಿಹಾರದಲ್ಲಿ ಈ ಹಿಂದಿನ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ಸರ್ಕಾರ ಅವಧಿಯಲ್ಲಿ ನೀಡಿದ್ದ ₹826 ಕೋಟಿ ಮೊತ್ತದ 350 ಗುತ್ತಿಗೆಗಳನ್ನು ಎನ್‌ಡಿಎ ನೇತೃತ್ವದ ಸರ್ಕಾರ ರದ್ದುಗೊಳಿಸಿದೆ.  

ರಾಜ್ಯದ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಕೆಲಸಕ್ಕೆ ಗುತ್ತಿಗೆ ನೀಡಲಾಗಿತ್ತು ಎಂದು ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಇಲಾಖೆ ಸಚಿವರು ಹೇಳಿದ್ದಾರೆ. 

‘ಗುತ್ತಿಗೆದಾರರ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ’ ಎಂದು ಇಲಾಖೆ ನಡೆಸಿದ ವಿಚಾರಣೆಯಿಂದ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಗುತ್ತಿಗೆ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಆರ್‌ಜೆಡಿ ಅವಧಿಯಲ್ಲಿ ಇಲಾಖೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ನೀರು ಸರಬರಾಜು ವ್ಯವಸ್ಥೆಗಳ ಸ್ಥಾಪನೆ ಸೇರಿದಂತೆ ಹಲವು ಕಾಮಗಾರಿಗಳಿಗೆ ₹826 ಕೋಟಿ ಮೌಲ್ಯದ 350 ಗುತ್ತಿಗೆಗಳನ್ನು ನೀಡಲಾಗಿತ್ತು. ಆದರೆ ಈ ವೇಳೆ ಗುತ್ತಿಗೆದಾರರ ಆಯ್ಕೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದು ಗೊತ್ತಾಗಿದೆ’ ಎಂದು ಸಚಿವ ನೀರಜ್‌ ಕುಮಾರ್ ಸಿಂಗ್‌ ಪಿಟಿಐಗೆ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ವರದಿಯನ್ನು ಸಮಗ್ರ ತನಿಖೆಗಾಗಿ ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರಕ್ಕೆ ಇಲಾಖೆ ಹಸ್ತಾಂತರಿಸಿದೆ ಎಂದು ಅವರು ವಿವರಿಸಿದ್ದಾರೆ.

ಆರ್‌ಜೆಡಿ ಅವಧಿಯಲ್ಲಿ ಲಲಿತ್ ಯಾದವ್‌ ಅವರು ಸಾರ್ವಜನಿಕ ಆರೋಗ್ಯ ಮತ್ತು ಇಂಜಿನಿಯರಿಂಗ್ ಇಲಾಖೆಯ ಸಚಿವರಾಗಿದ್ದರು. 

ಹಿಂದಿನ ಸರ್ಕಾರದ ಅವಧಿಯಲ್ಲಿ ಇಲಾಖೆಯು 17 ತಿಂಗಳುಗಳಲ್ಲಿ ಒಟ್ಟು ₹4,600 ಕೋಟಿ ಮೌಲ್ಯದ 1,160 ಗುತ್ತಿಗೆಗಳನ್ನು ನೀಡಿತ್ತು. ಅದರಲ್ಲಿ ಈಗ 350 ಗುತ್ತಿಗೆಗಳನ್ನು ರದ್ದುಪಡಿಸಲಾಗಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT