ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ಬಿಜೆಪಿ 35 ಸ್ಥಾನಗಳ ಗುರಿ ಹೊಂದಿದೆ ಎಂದು ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಹೇಳಿದ್ದಾರೆ.

ಬಿಹಾರದಲ್ಲಿ ಮಂಗಳವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರವಿಶಂಕರ್ ಪ್ರಸಾದ್, ಸಹನವಾಜ್ ಹುಸೇನ್, ಮಂಗಲ್ ಪಾಂಡೆ, ಜನಕ್ ರಾಮ್, ನಂದ್ ಕಿಶೋರ್ ಯಾದವ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಓದಿ...ಜಮ್ಮು –ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆಜಾದ್ ರಾಜೀನಾಮೆ

ಸಭೆಯ ನಂತರ ಮಾತನಾಡಿದ ಜೈಸ್ವಾಲ್, ‘ಬಿಹಾರದ ಮಹಾಘಟಬಂಧನ್ ಜನರನ್ನು ವಂಚಿಸುವ ಮೈತ್ರಿಯಾಗಿದೆ. ಬಿಜೆಪಿ ಇದರ ವಿರುದ್ಧ ಹೋರಾಟ ನಡೆಸಲಿದೆ. ಜತೆಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ 35ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

ಮಹಾಘಟಬಂಧನ್ ಜನರಿಗೆ ದ್ರೋಹ ಬಗೆದಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದು ಹಿಂಬಾಗಿಲಿನ ಮೈತ್ರಿಯಾಗಿದ್ದು, ಇದು ಲಾಲು ರಾಜ್ (ಲಾಲು ಪ್ರಸಾದ್ ಯಾದವ್) ಅವರನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನ ಇದಾಗಿದೆ ಎಂದು ಜೈಸ್ವಾಲ್ ಆರೋಪಿಸಿದ್ದಾರೆ.

40 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರದಲ್ಲಿ ಪ್ರಸ್ತುತ ಬಿಜೆಪಿ 17 ಸ್ಥಾನ, ಜೆಡಿಯು 16 ಸ್ಥಾನಗಳನ್ನು ಹೊಂದಿದೆ. ಲೋಕ ಜನಶಕ್ತಿ ಪಕ್ಷವು ಆರು ಸ್ಥಾನ, ಕಾಂಗ್ರೆಸ್ ಒಂದು ಸ್ಥಾನ ಹೊಂದಿದೆ.

ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರ ನೇತೃತ್ವದಲ್ಲಿ ರಚನೆಯಾಗಿರುವ ಬಿಹಾರ ಸರ್ಕಾರದ ನೂತನ ಸಚಿವರಾಗಿ 31 ಮಂದಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹೆಚ್ಚಿನ ಶಾಸಕರನ್ನು ಹೊಂದಿರುವ ಆರ್ಜೆಡಿಯು ಸಹಜವಾಗಿಯೇ ಸಚಿವ ಸ್ಥಾನದಲ್ಲಿಯೂ ಸಿಂಹಪಾಲು ಪಡೆದಿದೆ. ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೂ ಪ್ರಾತಿನಿಧ್ಯ ನೀಡುವತ್ತ ಸರ್ಕಾರ ಗಮನ ಹರಿಸಿದೆ.

ಆರ್ಜೆಡಿಯಿಂದ 16, ಜೆಡಿಯುನಿಂದ 11, ಕಾಂಗ್ರೆಸ್ನಿಂದ ಇಬ್ಬರು, ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್ಎಎಂ)ದ ಒಬ್ಬರು ಮತ್ತು ಒಬ್ಬ ಪಕ್ಷೇತರ ಶಾಸಕ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದರ ಬೆನ್ನಲ್ಲೇ ಬಿಜೆಪಿ ನಿತೀಶ್ ಸಂಪುಟದ ವಿರುದ್ಧ ವಾಗ್ದಾಳಿ ನಡೆಸಿದೆ.

ಇವನ್ನೂ ಓದಿ

ನಿತೀಶ್ ಸಂಪುಟಕ್ಕೆ 31 ಮಂದಿ ಸೇರ್ಪಡೆ: ಆರ್ಜೆಡಿಗೆ ಸಿಂಹಪಾಲು

ಮತ್ತೆ ಎನ್ಡಿಎ ತೊರೆದ ನಿತೀಶ್: ಸಿ.ಎಂ ಆಗಿ ಇಂದು ಪ್ರಮಾಣ

2024ಕ್ಕೆ ಪ್ರಧಾನಿ ಅಭ್ಯರ್ಥಿಯಾಗುವರೇ ನಿತೀಶ್? ನಿಷ್ಠೆ ಮೇಲೆ ಎಲ್ಲರಿಗೂ ಅನುಮಾನ

ಬಿಹಾರದ ರಾಜಕೀಯ ಮರುಮೈತ್ರಿಗೆ ಬಿಜೆಪಿಯ ಗೀಳೇ ಕಾರಣ: ಮಾರ್ಗರೆಟ್ ಆಳ್ವ

ವಿರೋಧ ಪಕ್ಷಗಳ ಒಗ್ಗಟ್ಟಿಗೆ ಮತ್ತೆ ಇಂಬು ನೀಡಿರುವ ಬಿಹಾರದ ನಿರೀಕ್ಷಿತ ಬೆಳವಣಿಗೆ

Video| ನಿತೀಶ್ ಮುಂದಿವೆ ಹಲವು ಸವಾಲು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.