ನವದೆಹಲಿ: ಸಿಖ್ ಧರ್ಮ ಸ್ಥಾಪಕ ಗುರುನಾನಕ್ ದೇವ್ ಅವರ ಜೀವನಚರಿತ್ರೆ ಕುರಿತ ನೂತನ ಕೃತಿಯನ್ನು ಅವರ 550ನೇ ಜನ್ಮದಿನದ ನಿಮಿತ್ತ ಬಿಡುಗಡೆ ಮಾಡಲಾಗುವುದು ಎಂದು ಪ್ರಕಾಶನ ಸಂಸ್ಥೆ ಪೆಂಗ್ವಿನ್ ಮಂಗಳವಾರ ಪ್ರಕಟಿಸಿದೆ.

‘ದ ಫರ್ಸ್ಟ್ ಸಿಖ್: ದ ಲೈಫ್ ಅಂಡ್ ಲೆಗೆಸಿ ಆಫ್ ಗುರುನಾನಕ್’ ಶೀರ್ಷಿಕೆಯ ಪ್ರೊಫೆಸರ್ ನಿಕ್ಕಿ –ಗುಣಿಂದರ್ ಕೌರ್ ಸಿಂಗ್ ಅವರು ಬರೆದಿರುವ ಕೃತಿಯು ಗುರುನಾನಕ್ ಅವರ ಜೀವನವನ್ನು ಪರಿಣಾಮಕಾರಿಯಾಗಿ ಬಿಂಬಿಸಲಿದೆ ಎಂದು ಸಂಸ್ಥೆ ಹೇಳಿದೆ. ನವೆಂಬರ್ 12 ಗುರುನಾನಕ್ ದೇವ್ ಅವರ ಜನ್ಮದಿನವಾಗಿದೆ.

ಗುರುನಾನಕ್ ಅವರ ಜೀವನ, ಬದುಕು ಮತ್ತು ಅವರ ವ್ಯಕ್ತಿತ್ವ ಹಾಗೂ ಸಿಖ್ ಧರ್ಮ ಸ್ಥಾಪನೆ ಕುರಿತ ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಸಮಗ್ರ ಜೀವನಚರಿತ್ರೆಯ ಈ ಕೃತಿಯು ಗುರುನಾನಕ್ ದೇವ್ ಅವರು 21ನೇ ಶತಮಾನದಲ್ಲಿಯೂ ಪ್ರಸ್ತುತರಾಗಿದ್ದಾರೆ ಎಂಬುದನ್ನು ಪ್ರತಿಪಾದಿಸಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.