ಶಹದೋಲ್: ‘ಭಾರತೀಯ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರು ಬ್ರಿಟಿಷರ ವಿರುದ್ಧ ಮಾತ್ರವಲ್ಲ, ತನ್ನ ಸಮುದಾಯದ ಜನರನ್ನು ಕ್ರೈಸ್ತ ಮಿಷನರಿಗಳಿಂದ ರಕ್ಷಿಸಲು ಹೋರಾಡಿದ್ದರು’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ್ ಹೇಳಿದ್ದಾರೆ.

ಬುಡಕಟ್ಟು ಜನರೇ ಹೆಚ್ಚು ಇರುವ ಮಧ್ಯಪ್ರದೇಶದ ಪೂರ್ವ ಭಾಗದಲ್ಲಿರುವ ಶಹದೋಲ್ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬಿರ್ಸಾ ಮುಂಡಾ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬುಡಕಟ್ಟು ಜನರ ಪರವಾಗಿ ಜಲ್, ಜಂಗಲ್ ಮತ್ತು ಜಮೀನ್ (ನೀರು, ಅರಣ್ಯ ಹಾಗೂ ಜಮೀನು) ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಭಗವಾನ್ ಬಿರ್ಸಾ ಮುಂಡಾ ಅವರು ಹೋರಾಡಿದರು. ಮತ್ತೊಂದೆಡೆ ನಮ್ಮ ಧರ್ಮದ ವಿರುದ್ಧ ಆಟವಾಡುತ್ತಾ, ಕ್ರೈಸ್ತ ಮತಾಂತರದಲ್ಲಿ ತೊಡಗಿದ್ದ ಮಿಷನರಿಗಳ ವಿರುದ್ಧವೂ ಹೋರಾಟ ನಡೆಸಿದರು’ ಎಂದರು.

‘ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಸಂಖ್ಯೆ 1.21 ಕೋಟಿ ಇದೆ. ಇದು ದೇಶದಲ್ಲೇ ಅತಿ ಹೆಚ್ಚಿನ ಜನಸಂಖ್ಯೆಯಾಗಿದೆ. ಸ್ವಾತಂತ್ರ್ಯ ನಂತರದಲ್ಲಿ ಬುಡಕಟ್ಟು ಸಂಸ್ಕೃತಿಗೆ ಶ್ರೀಮಂತ ಸ್ಥಾನಮಾನವನ್ನು ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಮಾತ್ರ. ಈ ಸಮುದಾಯದ ಕುರಿತು ಇರುವ ಅಪಾರ ಗೌರವದಿಂದಾಗಿ ನ. 15 ಅನ್ನು ‘ಜನಜಾತಿಯಾ ಗೌರವ ದಿವಸ’ ಎಂದು ಆಚರಿಸುವಂತೆ ಪ್ರಧಾನಿ ಘೋಷಿಸಿದ್ದಾರೆ. ಇದರ ಭಾಗವಾಗಿ ಶಹದೋಲ್ಗೆ ಶೀಘ್ರದಲ್ಲಿ ವಾಯುಯಾನ ಸಂಪರ್ಕವೂ ಸಿಗಲಿದೆ’ ಎಂದು ಮುಖ್ಯಮಂತ್ರಿ ಮೋಹನ ಯಾದವ್ ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ವರ್ಚುವಲ್ ವೇದಿಕೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ನೆನಪಿನಲ್ಲಿ ಜಬಲ್ಪುರ ಹಾಗೂ ಛಿಂದ್ವಾರಾ ಜಿಲ್ಲೆಯಲ್ಲಿ ಸ್ಥಾಪಿಸಿರುವ ಎರಡು ವಸ್ತು ಸಂಗ್ರಹಾಲಯಗಳನ್ನು ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.