ರಾಯಪುರ: ಛತ್ತೀಸ್ಗಡದ ಬಿಲಾಸ್ಪುರ ಜಿಲ್ಲೆಯ ಆಶ್ರಯತಾಣದಲ್ಲಿ ಮಹಿಳಾ ವಾಸಿಗಳ ಮೇಲೆ ದೈಹಿಕ ಮತ್ತು ಲೈಂಗಿಕ ಕಿರುಕುಳ ನಡೆದಿದೆ ಎಂಬ ಪ್ರಕರಣ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಬಿಜೆಪಿ ಭಾನುವಾರ ಒತ್ತಾಯಿಸಿದೆ.

ಆಶ್ರಯ ತಾಣವನ್ನು ಸರ್ಕಾರಿ ನೆರವಿನಲ್ಲಿ ಸೇವಾ ಸಂಸ್ಥೆಯೊಂದು ನಡೆಸುತ್ತಿದೆ. ಅತ್ಯಾಚಾರ ಆರೋಪದ ಮೇಲೆ ಇದರ ವ್ಯವಸ್ಥಾಪಕನನ್ನು ಜನವರಿ 21ರಂದು ಬಂಧಿಸಲಾಗಿದೆ. ಹಾಗೆಯೇ ಇತರೆ ಮೂವರನ್ನು ದೈಹಿಕ ದೌರ್ಜನ್ಯ ನಡೆಸಿದ ಆರೋಪದಡಿ ಬಂಧಿಸಲಾಗಿದೆ

ಆರೋಪ ಕುರಿತು ನಿಷ್ಪಕ್ಷಪಾತ ತನಿಖೆ ನಡೆದಾಗ ಮಾತ್ರವೇ ಸತ್ಯ ಹೊರಬರಲಿದೆ. ಪ್ರಕರಣದಲ್ಲಿ ಪೊಲೀಸರ ಪಾತ್ರವಿರುವ ಆರೋಪದ ಕಾರಣ ನ್ಯಾಯಾಂಗ ತನಿಖೆ ನಡೆಸುವುದು ಅಗತ್ಯ ಎಂದು ವಿದಾನಸಭೆ ವಿರೋಧಪಕ್ಷದ ನಾಯಕ ಧರ್ಮಲಾಲ್ ಕೌಶಿಕ್ ಅವರು ಹೇಳಿದರು.

ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ಇದು, ನಾಚಿಕೇಗೇಡಿನ ಬೆಳವಣಿಗೆ. ರಾಜ್ಯ ಸರ್ಕಾರದ ಇಲಾಖೆಯೇ ನಡೆಸುವ ಆಶ್ರಯತಾಣದಲ್ಲಿ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.