ಪ್ರಯಾಗರಾಜ್: ಉತ್ತರ ಪ್ರದೇಶದಲ್ಲಿ ಬಿಜೆಪಿ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಉಜ್ಜಯಿನಿ ಲೋಕಸಭಾ ಕ್ಷೇತ್ರದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಉಜ್ವಲ್ ರಮಣ್ ಸಿಂಗ್ ಅವರ ಪರ ಮತಯಾಚನೆಗೆ ಪ್ರಯಾಗರಾಜ್ನಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.
.LS polls | ‘ಅಗ್ನಿಪಥ’ ಯೋಜನೆ ಕಸದ ಬುಟ್ಟಿಗೆ: ರಾಹುಲ್ ಗಾಂಧಿ.
‘ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಕ್ಯೊಟೊ (ವಾರಾಣಸಿ) ಕ್ಷೇತ್ರವನ್ನು ಮಾತ್ರ ಗೆಲ್ಲಲಿದ್ದಾರೆ’ ಎಂದು ಹೇಳಿದರು.

ವಾರಾಣಸಿಯನ್ನು ಜಪಾನ್ನ ಸುಂದರ ನಗರ ಕ್ಯೊಟೊ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದಾಗಿ ಪ್ರಧಾನಿ ಮೋದಿ ಈ ಹಿಂದೆ ಹೇಳಿದ್ದರು. ಇದನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಕುಹಕವಾಡಿದರು.
.ಅಂಬಾನಿ–ಅದಾನಿಗಾಗಿ ಮೋದಿ ಕೆಲಸ: ರಾಹುಲ್ ಗಾಂಧಿ.
‘ನಮ್ಮ ಮೊದಲ ಸಂಘರ್ಷ ಸಂವಿಧಾನದ ಉಳಿವಿಗಾಗಿ. ಬಿಜೆಪಿ ಹಾಗೂ ಆರ್ಎಸ್ಎಸ್ ಅದರ ಮೇಲೆ ದಾಳಿ ಮಾಡುತ್ತಿವೆ. ಯಾವ ಶಕ್ತಿಗೂ ಸಂವಿಧಾನವನ್ನು ಹರಿದು ಬಿಸಾಕುವ ಶಕ್ತಿ ಇಲ್ಲ’ ಎಂದು ರಾಹುಲ್ ನುಡಿದರು.

‘ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಪಡಿಸುವ ಕಾನೂನು ತರಲಿದ್ದೇವೆ. ಯುವಕರಿಗೆ ಉದ್ಯೋಗ ನೀಡಲಿದ್ದೇವೆ. ಅಗ್ನಿವೀರ್ ಯೋಜನೆಯನ್ನು ಕಸದ ತೊಟ್ಟಿಗೆ ಬಿಸಾಡಲಿದ್ದೇವೆ’ ಎಂದು ಹೇಳಿದರು.
.ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ನಾಶ, ಮೀಸಲಾತಿ ರದ್ದು: ರಾಹುಲ್ ಗಾಂಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.