ಅಲಿಗಢ (ಉತ್ತರ ಪ್ರದೇಶ): ಅಲಿಗಢ ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದು ಆರು ದಿನದ ನಂತರವು ಶಂಕಿತರಿಗಾಗಿ ಶೋಧ ಮುಂದುವರಿದಿದೆ. ಶೋಧ ಕಾರ್ಯಕ್ಕೆ ಸ್ಥಳೀಯ ಪೊಲೀಸರು ಈಗ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ನೆರವನ್ನೂ ಪಡೆದುಕೊಂಡಿದ್ದಾರೆ.

ನ. 7ರಂದು ಬೆದರಿಕೆ ಕರೆ ಬಂದಿತ್ತು. ಪೊಲೀಸರು ತ್ವರಿತವಾಗಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದ್ದರು. ಮೊಹಮ್ಮದ್ ವಾಸೀಮ್ ಅಲಿ ನೇತೃತ್ವದಲ್ಲಿ ಎಎಂಯು ತಂಡ ಪೊಲೀಸರ ಜೊತೆಗೂಡಿ ಕೆಲಸ ಮಾಡುತ್ತಿದೆ. ಶಂಕಿತರ ಪತ್ತೆಗಾಗಿ ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಗಮನಿಸುತ್ತಿದೆ.

ಶಂಕಿತರ ಪತ್ತೆ ಸಾಧ್ಯವಾಗಿಲ್ಲ. ಆ ನಿಟ್ಟಿನಲ್ಲಿ ಯತ್ನ ನಡೆದಿದೆ ಎಂದು ಅಲಿ ಪ್ರತಿಕ್ರಿಯಿಸಿದರು. ಶಂಕಿತರ ಪತ್ತೆಗೆ ಸ್ಥಳೀಯ ಪೊಲೀಸರ ಜೊತೆಗೂಡಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಆರ್ಪಿಎಫ್ ಉಸ್ತುವಾರಿ ಅಧಿಕಾರಿ ಅಮಿತ್ ಕುಮಾರ್ ಸಿಂಗ್ ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.