ಮಥುರಾ (ಉತ್ತರ ಪ್ರದೇಶ):ರೈಲು ಹಳಿ ಮೇಲೆಪಬ್ಜಿ ಆಡುತ್ತಿದ್ದ ಇಬ್ಬರು ಬಾಲಕರಮೇಲೆರೈಲುಹರಿದು ಅವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಮಥುರಾದಲಕ್ಷ್ಮೀನಗರದಲ್ಲಿ ಭಾನುವಾರ ನಡೆದಿದೆ.

ಮಥುರಾ ಕಂಟೋನ್ಮೆಂಟ್ ಹಾಗೂ ರಾಯಾ ರೈಲು ನಿಲ್ದಾಣಗಳ ಮಧ್ಯೆ ಈ ಘಟನೆ ಸಂಭವಿಸಿದೆ.

ಕಪಿಲ್ (18) ಮತ್ತು ರಾಹುಲ್ (16) ಮೃತರು. ಇಬ್ಬರೂ 10ನೇ ತರಗತಿ ವಿದ್ಯಾರ್ಥಿಗಳಾಗಿದ್ದರು. ಘಟನಾ ಸ್ಥಳದಲ್ಲಿ ಎರಡು ಮೊಬೈಲ್ಗಳು ಸಿಕ್ಕಿವೆ. ಒಂದು ಹಾನಿಗೊಂಡಿದ್ದರೆ, ಇನ್ನೊಂದರಲ್ಲಿ ಪಬ್ಜಿ ಆಟ ಚಾಲೂ ಸ್ಥಿತಿಯಲ್ಲೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಪಿಲ್ ಹಾಗೂ ರಾಹುಲ್ ರೈಲು ಹಳಿಯ ಮೇಲೆ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದರು. ನಂತರ ಅಲ್ಲಿಯೇ ಕುಳಿತುಕೊಂಡು ಪಬ್ಜಿ ಆಡುತ್ತಾ ಮೈ ಮರೆತಿದ್ದರು. ಇದೇ ವೇಳೆ ರೈಲು ಹರಿದು ಮೃತಪಟ್ಟಿದ್ದಾರೆ ಎಂದು ಜಮುನಾ ಫಾರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪಬ್ಜಿಮೊಬೈಲ್ ಗೇಮ್ ಅನ್ನು ಭಾರತದಲ್ಲಿ ನಿಷೇಧ ಮಾಡಿದರೂ ಅನ್ಯ ಮಾರ್ಗಗಳ ಮೂಲಕ ಕೆಲ ಯುವಕರು ಇದರ ಗೀಳು ಹಚ್ಚಿಸಿಕೊಂಡು ಪ್ರಾಣಕ್ಕೆ ಕುಂದು ತಂದುಕೊಳ್ಳುತ್ತಿರುವ ಘಟನೆಗಳು ಆಗಾಗ ವರದಿಯಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.