ಹೈದರಾಬಾದ್: ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಆರ್‌ಎಸ್ ಪಕ್ಷವು ತನ್ನ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದ್ದು, ಇಬ್ಬರು ಹಾಲಿ ಸಂಸದರು ಸೇರಿದಂತೆ ನಾಲ್ವರ ಹೆಸರನ್ನು ಘೋಷಿಸಿದೆ.

ತೆಲಂಗಾಣದ 17 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಿಆರ್‌ಎಸ್ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಘೋಷಿಸಿದರು.

ನಾಗೇಶ್ವರ ರಾವ್ (ಖಮ್ಮಂ), ಬಿ.ವಿನೋದ್ ಕುಮಾರ್ (ಕರೀಂನಗರ), ಮಾಲೋತ್ ಕವಿತಾ (ಮೆಹಬೂಬಾಬಾದ್), ಕೊಪ್ಪುಲ ಈಶ್ವರ್ (ಪೆದ್ದಪಲ್ಲಿ) ಹೆಸರುಗಳು ಘೋಷಣೆಯಾಗಿದ್ದು, ಇವರ ಪೈಕಿ ಮಾಲೋತ್ ಕವಿತಾ ಮತ್ತು ನಾಗೇಶ್ವರ ರಾವ್ ಅವರು ಹಾಲಿ ಸಂಸದರಾಗಿದ್ದಾರೆ. ವಿನೋದ್ ಕುಮಾರ್ ಮಾಜಿ ಸಂಸದರಾದರೆ, ಕೊಪ್ಪುಲ ಈಶ್ವರ್ ಬಿಆರ್‌ಎಸ್ ಸರ್ಕಾರದಲ್ಲಿ ಸಚಿವರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.