ನವದೆಹಲಿ: ಮರಾಠಿ, ಬಂಗಾಳಿ, ಪಾಳಿ, ಪ್ರಾಕೃತ ಹಾಗೂ ಅಸ್ಸಾಮಿ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ಸೂಚಿಸಿದೆ.

ಸಂಪುಟ ತೆಗೆದುಕೊಂಡ ಮಹತ್ವದ ನಿರ್ಧಾರದಿಂದಾಗಿ ಶಾಸ್ತ್ರೀಯ ಭಾಷೆ ಸ್ಥಾನಮಾನ ಪಡೆದ ಭಾಷೆಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ತಮಿಳು, ಸಂಸ್ಕೃತ, ತೆಲುಗು, ಕನ್ನಡ, ಮಲಯಾಳ ಮತ್ತು ಒಡಿಯಾ ಭಾಷೆಗಳು ಈ ಹಿಂದೆಯೇ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದುಕೊಂಡಿವೆ.

ಭಾಷೆಗಳಿಗೆ ‘ಶಾಸ್ತ್ರೀಯ ಭಾಷೆ’ ಎಂಬ ಸ್ಥಾನಮಾನ ನೀಡುವ ಪರಿಕಲ್ಪನೆಯನ್ನು ಕೇಂದ್ರ ಸರ್ಕಾರ 2004ರಲ್ಲಿ ಆರಂಭಿಸಿತ್ತು. ಮೊದಲನೆಯದಾಗಿ ತಮಿಳಿಗೆ ಈ ಸ್ಥಾನಮಾನ ದೊರೆತಿದ್ದರೆ, 2014ರಲ್ಲಿ ಒಡಿಯಾ ಕೊನೆಯದಾಗಿ ಈ ಸಾಲಿಗೆ ಸೇರಿಕೊಂಡಿತ್ತು.

ಮರಾಠಿಗೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಕಳೆದ ಒಂದು ದಶಕದಿಂದಲೂ ಇದೆ. ಮಹಾರಾಷ್ಟ್ರದಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಶಾಸ್ತ್ರೀಯ ಸ್ಥಾನಮಾನದ ವಿಚಾರ ಈ ಹಿಂದೆಯೆಲ್ಲಾ ಪ್ರಮುಖ ಚುನಾವಣಾ ವಿಷಯವಾಗಿತ್ತು.

‘ಇದು ವಿಶೇಷ ದಿನ. ಈ ನಿರ್ಧಾರ ತೆಗೆದುಕೊಂಡದ್ದಕ್ಕೆ ಮಹಾರಾಷ್ಟ್ರದ 12 ಕೋಟಿ ಜನರ ಪರವಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.