ಶಿಲ್ಲಾಂಗ್: ‘ತನ್ನ ಚರ್ಚ್ಗಳ ಪಾದ್ರಿಗಳು ಸಲಿಂಗಿ ಜೋಡಿಗೆ ಆಶೀರ್ವದಿಸಲು ಯಾವುದೇ ಅಡ್ಡಿಯಿಲ್ಲ’ ಎಂದು ಮೇಘಾಲಯದ ಕ್ಯಾಥೋಲಿಕ್ ಚರ್ಚ್ ಸಂಘಟನೆ ತೀರ್ಮಾನ ತೆಗೆದುಕೊಂಡಿದೆ.

‘ಆದರೆ, ಈ ಆಶೀರ್ವಾದವು, ವಿವಾಹ ವಿಧಾನಗಳನ್ನು ಹೋಲುವ ಯಾವುದೇ ವಿಧಿಗಳಿಲ್ಲದೆ ಆಶೀರ್ವಾದ ಮಾಡಬಹುದು ಎಂಬ ಅರ್ಥ ಕಲ್ಪಿಸುತ್ತದೆ’ ಎಂದು ಅದು ಹೇಳಿದೆ.

‘ಕ್ಯಾಥೋಲಿಕ್ ಚರ್ಚ್ಗಳಲ್ಲಿ ಸಲಿಂಗಿ ಜೋಡಿಗೆ ಪಾದ್ರಿಗಳು ಆಶೀರ್ವದಿಸಬಹುದು ಎಂಬ ತೀರ್ಮಾನವನ್ನು ಈಚೆಗೆ ಪೋಪ್ ಫ್ರಾನ್ಸಿಸ್ ತೆಗೆದುಕೊಂಡಿದ್ದರು. ಮೇಘಾಲಯದಲ್ಲೂ ವಿವಾಹವಿಧಿಗಳನ್ನು ಹೊರತುಪಡಿಸಿ ಸಲಿಂಗಿ ಜೋಡಿಗೆ ಕ್ಯಾಥೋಲಿಕ್ ಚರ್ಚ್ ಪಾದ್ರಿಗಳು ಆಶೀರ್ವದಿಸಬಹುದು ಎಂಬ ತೀರ್ಮಾನ ಮಾಡಲಾಗಿದೆ ಎಂದು ಶಿಲ್ಲಾಂಗ್ನ ಆರ್ಚ್ ಬಿಷಪ್ ವಿಕ್ಟರ್ ಲಿಂಗ್ಡೊ ಹೇಳಿದ್ದಾರೆ.

‘ಈ ಆಶೀರ್ವಾದವು ಅನೌಪಚಾರಿಕವಾಗಿರುತ್ತದೆ. ಇದನ್ನೇ ಮಾನ್ಯತೆ ಎಂದು ಭಾವಿಸುವಂತಿಲ್ಲ’ ಎಂದು ಅವರು ಹೇಳಿದ್ದಾರೆ.

ಭಾರತದ ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ಸುಮಾರು 10 ಲಕ್ಷ ಕ್ಯಾಥೋಲಿಕ್ ಅನುಯಾಯಿಗಳು ಇದ್ದಾರೆ.

ಭಾರತದಲ್ಲಿ ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ.
.ಆಳ–ಅಗಲ: ಸಲಿಂಗ ವಿವಾಹ– ಮಾನ್ಯತೆ ಬದಲು ಸುಪ್ರೀಂಕೋರ್ಟ್ನ ಮಮತೆಯ ಹೊನಲು.ಆಳ–ಅಗಲ: ಕಾಲ ದೇಶಗಳ ಎಲ್ಲೆ ಮೀರಿದ ಸಲಿಂಗ ಸಂಬಂಧ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.