ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು, 2025ರ ಫೆಬ್ರುವರಿ 15ರಿಂದ ಪರೀಕ್ಷೆಗಳು ಪ್ರಾರಂಭವಾಗಲಿವೆ.

10ನೇ ತರಗತಿ ಪರೀಕ್ಷೆ 2025ರ ಮಾರ್ಚ್ 18 ರಂದು ಮತ್ತು 12ನೇ ತರಗತಿ ಪರೀಕ್ಷೆ ಏಪ್ರಿಲ್ 4ರಂದು ಕೊನೆಗೊಳ್ಳಲಿದೆ ಎಂದು ತಿಳಿಸಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಇದೇ ಮೊದಲ ಬಾರಿಗೆ 86 ದಿನಗಳ ಮುಂಚಿತವಾಗಿ ಮಂಡಳಿಯು ಪ್ರಕಟಿಸಿದೆ.

‘ಎರಡು ವಿಷಯಗಳ ನಡುವೆ ಸಾಕಷ್ಟು ಅಂತರ ನೀಡಲಾಗಿದೆ. ವಿದ್ಯಾರ್ಥಿಯು ಆಯ್ಕೆ ಮಾಡಿದ ಯಾವುದೇ ಎರಡು ವಿಷಯಗಳು ಒಂದೇ ದಿನಾಂಕದಂದು ಬರದಂತೆ ಪರೀಕ್ಷಾ ವೇಳಾ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.