ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಎಎಪಿ ಕಚೇರಿ ಎದುರು ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

ಪಕ್ಷದ ಪ್ರಧಾನ ಕಚೇರಿ ಎದುರು ಜಮಾಯಿಸಿದ ಎಎಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ, ನರ್ತಿಸಿ ಸಂಭ್ರಮಿಸಿದ್ದಾರೆ.

ಮುಖ್ಯಮಂತ್ರಿಗಳ ನಿವಾಸದ ಎದುರು ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಸಿಹಿ ಹಂಚಿದ್ದಾರೆ. ಜತೆಗೆ ಕಾರ್ಯಕರ್ತರು ಕೂಗುತ್ತಿದ್ದ ‘ಬಂದರು, ಬಂದರು ಕೇಜ್ರಿವಾಲ್ ಬಂದರು. ಜೈಲಿನ ಕಂಬಿಗಳು ಮುರಿದವು, ಕೇಜ್ರಿವಾಲ್ ಬಿಡುಗಡೆಗೊಂಡರು‘ ಎನ್ನುವ ಘೋಷಣೆಗೆ ದನಿಗೂಡಿಸಿದರು.

ಸ್ಥಳದಲ್ಲಿ ಮನೀಶ್ ಸಿಸೋಡಿಯಾ, ಅತಿಶಿ, ಸಂಜಯ್ ಸಿಂಗ್ ದಂಪತಿ ಉಪಸ್ಥಿತರಿದ್ದರು.

‘ವಿರೋಧ ಪಕ್ಷದವರನ್ನು ಕಂಬಿ ಹಿಂದೆ ಇರುವಂತೆ ಮಾಡಿ, ಅಧಿಕಾರದಲ್ಲಿ ಉಳಿಯುವ ಬಿಜೆಪಿಯ ತಂತ್ರ ವಿಫಲವಾಗಿದೆ’ ಎಂದು ಕೇಜ್ರಿವಾಲ್ ಪತ್ನಿ ಸುನಿತಾ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

‘ನಮ್ಮ ಪಕ್ಷಕ್ಕೆ ದೊಡ್ಡ ಜಯ ಸಿಕ್ಕಿದೆ ಮತ್ತು ಸರ್ವಾಧಿಕಾರಕ್ಕೆ ಸೋಲಾಗಿದೆ’ ಎಂದು ಸ್ಥಳದಲ್ಲಿದ್ದ ದೆಹಲಿ ಸಂಪುಟ ಸಚಿವ ಗೋಪಾಲ್ ರೈ ಹೇಳಿದ್ದಾರೆ.
.ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್.ದೆಹಲಿ ಅಬಕಾರಿ ನೀತಿ ಹಗರಣ: ಅರವಿಂದ ಕೇಜ್ರಿವಾಲ್ಗೆ ಜಾಮೀನು ದೊರೆತರೂ… .ಅಬಕಾರಿ ನೀತಿ ಹಗರಣ: ದೆಹಲಿ CM ಅರವಿಂದ ಕೇಜ್ರಿವಾಲ್ಗೆ ಸುಪ್ರೀಂ ಕೋರ್ಟ್ ಜಾಮೀನು.ಜಾಮೀನು ಪಡೆದರೂ ಅಧಿಕಾರ ಚಲಾಯಿಸಲಾಗದ ಕೇಜ್ರಿವಾಲ್ ರಾಜೀನಾಮೆ ಕೊಡಲಿ: ಬಿಜೆಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.