ನವದೆಹಲಿ: ದೇಶದಲ್ಲಿ ಟೊಮೆಟೊ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿರುವ ಬೆನ್ನಲ್ಲೇ ನೇಪಾಳದಿಂದ ಟೊಮೆಟೊ ಆಮದಿಗೆ ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಆಮದಾಗುವ ಮೊದಲ ಟೊಮೆಟೊ ಸರಕು ನಾಳೆ ವಾರಾಣಸಿ, ಲಖನೌ, ಕಾನ್ಪುರಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅವರು ಲೋಕಸಭೆಗೆ ತಿಳಿಸಿದ್ದಾರೆ.

ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ದರವು ಶೇಕಡ 1400ರಷ್ಟು ಏರಿಕೆ ಕಂಡಿದ್ದು, ಕಳೆದ ಮೂರು ತಿಂಗಳಿನಿಂದ ₹140 ಆಸುಪಾಸಿನಲ್ಲಿದೆ.

ಮಳೆ ಕೊರತೆ, ತಾಪಮಾನ ಏರಿಕೆ ಮತ್ತು ಬೆಳೆಗೆ ಕೀಟ ಬಾಧೆ ಟೊಮೆಟೊ ಬೆಲೆ ಏರಿಕೆಗೆ ಕಾರಣವಾಗಿದೆ.

ಸದ್ಯ, ಮಹಾರಾಷ್ಟ್ರ, ಕರ್ನಾಟಕದಿಂದ ಟೊಮೆಟೊವನ್ನು ಖರೀದಿಸುವ ಮೂಲಕ ದೆಹಲಿ–ಎನ್ಸಿಆರ್, ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ನಾಫೆಡ್ ಮತ್ತು ಇತರ ಸಹಕಾರ ಸಂಸ್ಥೆಗಳ ಮೂಲಕ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಈ ರಾಜ್ಯಗಳಲ್ಲಿ ಎನ್ಸಿಸಿಎಫ್ 8,84,000 ಕೆ.ಜಿ ಟೊಮೆಟೊ ಮಾರಾಟ ಮಾಡಿದೆ. ಬರುವ ವಾರಾಂತ್ಯದಲ್ಲಿ ಎನ್ಸಿಸಿಎಫ್ ಮೆಗಾ ಮಾರಾಟದಡಿ ದೆಹಲಿ–ಎನ್ಸಿಆರ್ನಲ್ಲಿ ರಿಯಾಯಿತಿ ದರದಲ್ಲಿ ಕೆ.ಜಿಗೆ ₹70ರಂತೆ ಟೊಮೆಟೊ ಮಾರಾಟ ಮಾಡಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.