ಕೋಲ್ಕತ್ತ: ಇರಾನ್ನೊಂದಿಗೆ ವ್ಯಾಪಾರ ಒಪ್ಪಂದವನ್ನು ಹೊಂದುವ ಯಾವುದೇ ದೇಶವು ನಿರ್ಬಂಧವನ್ನು ಎದುರಿಸಬೇಕಾಗಬಹುದು ಎಂದು ಅಮೆರಿಕ ಎಚ್ಚರಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು, ‘ಚಾಬಹಾರ್ ಬಂದರಿನಿಂದ ಎಲ್ಲರಿಗೆ ಅನುಕೂಲವಾಗಲಿದೆ. ಅದರ ಬಗ್ಗೆ ಸಂಕುಚಿತ ದೃಷ್ಟಿಕೋನ ಇಟ್ಟುಕೊಳ್ಳುವುದು ಸರಿಯಲ್ಲ’ ಎಂದು ತಿಳಿಸಿದರು.

ಮಂಗಳವಾರ ರಾತ್ರಿ ಕೋಲ್ಕತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್ ಅವರು, ‘ಚಾಬಹಾರ್ ಬಂದರು ಹೆಚ್ಚು ಪ್ರಸ್ತುತತೆಯನ್ನು ಹೊಂದಿದೆ ಎಂದು ಅಮೆರಿಕ ಕೂಡ ಈ ಹಿಂದೆ ಮೆಚ್ಚುಗೆ ವ್ಯಕ್ತಪಡಿಸಿತ್ತು’ ಎಂದರು.

ಇರಾನ್ನಲ್ಲಿರುವ ಚಾಬಹಾರ್ ಬಂದರನ್ನು 10 ವರ್ಷಗಳ ಕಾಲ ನಿರ್ವಹಣೆ ಮಾಡುವ ಒಪ್ಪಂದಕ್ಕೆ ಭಾರತವು ಸೋಮವಾರ ಸಹಿ ಮಾಡಿದೆ. ಇದರಿಂದ ಮಧ್ಯ ಏಷ್ಯಾದೊಂದಿಗಿನ ವ್ಯಾಪಾರ ಸಂಬಂಧವು ವೃದ್ಧಿಯಾಗಲಿದೆ.

‘ಚಾಬಹಾರ್ ಬಂದರಿನೊಂದಿಗೆ ಬಹುಕಾಲದಿಂದ ಸಂಬಂಧವನ್ನು ಹೊಂದಿದ್ದೆವು. ಆದರೆ, ಈವರಗೆ ದೀರ್ಘಕಾಲಿಕ ಒಪ್ಪಂದವನ್ನು ಮಾಡಿಕೊಂಡಿರಲಿಲ್ಲ. ಹಲವಾರು ಸಮಸ್ಯೆಗಳು ಇದಕ್ಕೆ ಕಾರಣವಾಗಿದ್ದವು. ಇದೀಗ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ಎಲ್ಲರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

‘ಒಪ್ಪಂದದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಆದರೆ, ಇದು ಎಲ್ಲರ ಉಪಯೋಗಕ್ಕಾಗಿ ಮಾಡುತ್ತಿರುವುದು ಎಂಬುವುದನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.