ನವದೆಹಲಿ: ಟಿ–20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರೊಂದಿಗೆ ನೆನಪಿನಲ್ಲಿ ಉಳಿಯುವಂಥ ಮಾತುಕತೆ ನಡೆಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ ವಿಶ್ವಕಪ್ ಗೆದ್ದ ಅವರ ಅನುಭವದ ಬಗ್ಗೆ ಚರ್ಚೆ ಮಾಡಿದೆ ಎಂದು ಅವರು ನುಡಿದಿದ್ದಾರೆ.
.T20 WC | ಟಿ–20 ವಿಶ್ವಕಪ್ ಗೆದ್ದ ಭಾರತ ತಂಡ ದೆಹಲಿಗೆ ಆಗಮನ: ಅಭಿಮಾನಿಗಳ ಸ್ವಾಗತ.
‘ನಮ್ಮ ಚಾಂಪಿಯನ್‌ಗಳೊಂದಿಗೆ ಒಂದು ಅದ್ಭುತ ಭೇಟಿ. 7ನೇ ಲೋಕ ಕಲ್ಯಾಣ ಮಾರ್ಗದಲ್ಲಿ ವಿಶ್ವಕಪ್ ಗೆದ್ದ ತಂಡಕ್ಕೆ ಆತಿಥ್ಯ ನೀಡಿ, ವಿಶ್ವಕಪ್ ಅನುಭವಗಳ ಕುರಿತು ನೆನಪಿನಲ್ಲಿ ಉಳಿಯಯವಂಥ ಮಾತುಕತೆ ನಡೆಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ವಿಶ್ವಕಪ್ ಗೆದ್ದ ಭಾರತ ತಂಡವು ಇಂದು ಬೆಳಿಗ್ಗೆ ಬಾರ್ಬಾಡೋಸ್‌ನ ಬ್ರಿಜ್‌ಟೌನ್‌ನಿಂದ ದೆಹಲಿಗೆ ಬಂದಿಳಿಯಿತು. ಬಳಿಕ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತು. ಆಟಗಾರರು ಪ್ರಧಾನ ಮಂತ್ರಿಗಳ ನಿವಾಸದಲ್ಲಿ ಉಪಾಹಾರ ಸವಿದರು. ಸುಮಾರು ಎರಡು ಗಂಟೆಗಳು ಕಳೆದರು.
.ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ವಿಜಯೋತ್ಸವ: ಬಿಗಿ ಭದ್ರತೆ, ಹೆಜ್ಜೆ ಹಾಕಿದ ರೋಹಿತ್.
ವಿಡಿಯೊವೊಂದನ್ನು ಪ್ರಧಾನ ಮಂತ್ರಿ ಕಾರ್ಯಾಲಯವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆಟಗಾರರು ಕುಶಾಲು ಮಾತನಾಡುವುದು, ಪ್ರಧಾನಿ ಮೋದಿಯವರ ಸುತ್ತ ವೃತ್ತಾಕಾರದಲ್ಲಿ ಕುಳಿತಿರುವುದು ಕಾಣಬಹುದಾಗಿದೆ.

ನಾಯಕ ರೋಹಿತ್ ಶರ್ಮಾ ಪ್ರಧಾನಿಯವರ ಬಲಭಾಗದಲ್ಲಿ ಹಾಗೂ ಕೋಚ್ ರಾಹುಲ್ ದ್ರಾವಿಡ್ ಎಡಭಾಗದಲ್ಲಿ ಕುಳಿತಿರುವುದು ವಿಡಿಯೊದಲ್ಲಿದೆ.

ತಂಡದ ಸದಸ್ಯರೊಂದಿಗೆ ಪ್ರಧಾನಿ ಮೋದಿಯವರು ಫೋಟೊ ತೆಗೆಸಿಕೊಂಡಿದ್ದು, ಆಟಗಾರರು ‘ಚಾಂಪಿಯನ್ಸ್’ ಎಂದು ಬರೆದಿರುವ ಜೆರ್ಸಿ ತೊಟ್ಟಿದ್ದರು.
.ವಿಶ್ಲೇಷಣೆ: ಟಿ20 ಕ್ರಿಕೆಟ್ ವಿಶ್ವಕಪ್ ವಿಜಯ ಕಲಿಸಿದ ಪಾಠ.
ಇದೇ ವೇಳೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ ಕ್ರಿಕೆಟ್ ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಅದರಲ್ಲಿ ‘ನಮೊ’ ಎಂದು ಬರೆಯಾಲಾಗಿತ್ತು.
.ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಉತ್ತರ ಕನ್ನಡದ ಥ್ರೋಡೌನ್ ಸ್ಪೆಷಲಿಸ್ಟ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.