ಚೆನ್ನೈ: ಚೆನ್ನೈಯ ನೀರು ಸಂಸ್ಕರಣಾ ಘಟಕವೊಂದರಲ್ಲಿ ಜೀತಕ್ಕಿದ್ದ ಇಬ್ಬರು ಬಾಲಕರು ಸೇರಿದಂತೆ ಆರು ಜನರನ್ನು ಶನಿವಾರ ಪೊಲೀಸರು ರಕ್ಷಿಸಿದ್ದಾರೆ.

ಜೀತಕ್ಕಿದ್ದ ಇಬ್ಬರೂ ಮಕ್ಕಳೂ ಒಡಿಶಾದವರು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಪಾಲಕರಿಗೆ ಕೇವಲ ನಾಲ್ಕರಿಂದ ಆರು ಸಾವಿರ ರೂಪಾಯಿಗಳನ್ನು ನೀಡಿಕೆಲಸಕ್ಕೆ ಕರೆತರಲಾಗಿಲಾಗಿತ್ತು. ಇಲ್ಲಿ ಅವರನ್ನುಅಮಾನವೀಯವಾಗಿ ದುಡಿಸಿಕೊಳ್ಳಲಾಗುತ್ತಿತ್ತು ಎಂದು ಮಕ್ಕಳ ರಕ್ಷಣೆಗೆ ಸಹಕರಿಸಿದ ಮಕ್ಕಳ ಹಕ್ಕುಗಳ ಹೋರಾಟಗಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಸಾಯನಿಕಗಳನ್ನು ಬಳಸಿ ನೀರನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಈ ಮಕ್ಕಳನ್ನುಬಳಸಿಕೊಳ್ಳಲಾಗುತ್ತಿತ್ತು.ಯಾವುದೇ ಸುರಕ್ಷಾ ಸಾಧನಗಳಿಲ್ಲದೇ ಅವರನ್ನುಹೆಚ್ಚು ಸಮಯ ದುಡಿಸಿಕೊಳ್ಳಲಾಗುತ್ತಿತ್ತು. ಹೆಚ್ಚು ಕೆಲಸ ಮಾಡಿಸಿದ್ದರಿಂದ ಅವರ ಕೈ, ಕಾಲುಗಳಿಗೆ ಗಾಯಗಳಾಗಿದ್ದವು.

ಮಕ್ಕಳನ್ನು ದುಡಿಮೆಗೆ ದೂಡಿದ್ದ ಆರೋಪಿಗಳು ಸದ್ಯಪರಾರಿಯಾಗಿದ್ದಾರೆ.ಬಾಲಕರು ಮತ್ತು ಬಂಧಿತ ಕಾರ್ಮಿಕರ ರಕ್ಷಣೆಗೆ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ.

ಚೆನ್ನೈ ಈ ಬಾರಿ ಅತಿಯಾದ ನೀರಿನ ಸಮಸ್ಯೆ ಎದುರಿಸುತ್ತಿದೆ.ನಗರಕ್ಕೆ ನೀರೊದಗಿಸುತ್ತಿದ್ದ ಕೆರೆಗಳು ಬತ್ತಿಹೋಗಿದ್ದು, ಇದೇ ನೆಪದಲ್ಲಿ ನಡೆದ ಸಂಸ್ಕರಣಾ ಘಟಕಗಳ ಪರಿಶೀಲನೆ ವೇಳೆ ಈ ಪ್ರಕರಣ ಬಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.