ಅಲೀಗಢ: ಇಲ್ಲಿನ ಹೊಟೇಲ್ ಒಂದರಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಮೇಲೆ 4 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಹೋಟೆಲ್ ಮಾಲೀಕ ಹಾಗೂ ಆತನ ಸಂಬಂಧಿಯನ್ನು ಬಂಧಿಸಲಾಗಿದೆ. ಸ್ಥಳೀಯಾಡಳಿತ ಹೋಟೆಲ್‌ಗೆ ಬೀಗ ಜಡಿದಿದೆ.
.ಉತ್ತರ ಪ್ರದೇಶ: ಬಾಲಕಿ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ.
‘15 ವರ್ಷದ ಬಾಲಕಿಯೊಬ್ಬಳು ಬುಧವಾರ ಕಾಣೆಯಾಗಿದ್ದಳು. ಬಳಿಕ ಆಕೆ ಪಕ್ಕದ ಹೋಟೆಲ್ ಒಂದರ ಕೋಣೆಯಲ್ಲಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು’ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಶೇಖರ್ ಪಾಠಕ್ ಶುಕ್ರವಾರ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬ ಆಕೆಯನ್ನು ಪ್ರಲೋಭಿಸಿ ಹೋಟೆಲ್ ಕೊಠಡಿಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
.ಜಾರ್ಖಂಡ್ | ಅತ್ಯಾಚಾರ: ಹಿರಿಯ ಅಧಿಕಾರಿಗಳ ಕಾರು ಚಾಲಕರ ಬಂಧನ.
ದೂರಿನನ್ವಯ ಪೊಲೀಸರು, ಹೋಟೆಲ್ ಮಾಲೀಕ ವೇದ ಪ್ರಕಾಶ ವರ್ಮಾ, ಆತನ ಸಂಬಂಧಿಕ ನೀರಜ್ ಶರ್ಮಾ ಹಾಗೂ ಇಬ್ಬರು ಅಪರಿಚಿತ ವ್ಯಕ್ತಿಗಳ ಮೇಲೆ ಐಪಿಸಿ ಹಾಗೂ ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರ ಪತ್ತೆಗೆ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಆಗ್ರಾ ಹೋಂ ಸ್ಟೇಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಐವರ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.