ತಿರುವನಂತಪುರ: ‘ಕೇರಳದಲ್ಲಿ ಶತ್ರುಗಳಂತೆ ವರ್ತಿಸುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು, ಬೇರೆ ರಾಜ್ಯಗಳಲ್ಲಿ ಆತ್ಮೀಯ ಸ್ನೇಹಿತರಂತೆ ಕಾಣುತ್ತವೆ. ತಿರುವನಂತಪುರದಲ್ಲಿ ಒಂದು ಮುಖ ತೋರಿಸಿದರೆ, ದೆಹಲಿಯಲ್ಲಿ ಇನ್ನೊಂದು ಮುಖ ತೋರಿಸುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಬಿಜೆಪಿ ರಾಜ್ಯ ಘಟಕದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಮನವರಿಕೆಯಾಗಿದ್ದರಿಂದ ವಿಪಕ್ಷಗಳು ನನ್ನನ್ನು ನಿಂದಿಸಲು ಆರಂಭಿಸಿವೆ’ ಎಂದರು.

‘ಭ್ರಷ್ಟಾಚಾರ ಮತ್ತು ಹಗರಣದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡುವ ಮೂಲಕ ಆಡಳಿತರೂಢ ಸಿಪಿಐ(ಎಂ) ಇದಕ್ಕೆ ಉತ್ತರ ನೀಡಿದೆ. ಅಲ್ಲದೇ ಹಿಂದಿನ ಕಾಂಗ್ರೆಸ್ ಸರ್ಕಾರ ಹಲವು ಹಗರಣದಲ್ಲಿ ಭಾಗಿಯಾಗಿತ್ತು ಎಂದೂ ಹೇಳಿದೆ. ಆದರೆ ಕೇರಳದ ಹೊರಗಡೆ ಇಂಡಿಯಾ ಮೈತ್ರಿಕೂಟದ ಸಭೆಗಳಲ್ಲಿ ಈ ಎರಡು ಪಕ್ಷದ ನಾಯಕರು ಒಟ್ಟಿಗೆ ಕುಳಿತು ಚಹಾ, ಸಮೋಸಾ, ಬಿಸ್ಕತ್ ತಿನ್ನುತ್ತಾರೆ’ ಎಂದು ಲೇವಡಿ ಮಾಡಿದರು.

‘ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಅಭಿವೃದ್ದಿಯಲ್ಲಿ ಜೊತೆಯಾಗಿ. ಬಿಜೆಪಿ ಯಾವ ರಾಜ್ಯವನ್ನು ಒಂದು ಮತಬ್ಯಾಂಕ್ ಆಗಿ ಕಾಣುವುದಿಲ್ಲ. ಕಳೆದ 10 ವರ್ಷಗಳಲ್ಲಿ ಇತರ ರಾಜ್ಯಗಳಂತೆ ಕೇರಳ ಕೂಡ ಅಭಿವೃದ್ದಿಯ ಪ್ರಯೋಜನ ಪಡೆದಿದೆ. ಕೇರಳ ಜನರ ಕನಸು–ನಿರೀಕ್ಷೆಗಳನ್ನು ನನಸು ಮಾಡಲು ಸಾಧ್ಯವಾಗುವ ಪ್ರಯತ್ನವನ್ನು ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.